
ಮುಂಬೈ: ಒಂದು ಕಾಲದಲ್ಲಿ ಸತತ ಬಿಜಿಯಾಗಿದ್ದು ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದ ಸೋನಾ, ಲಾಕ್ಡೌನ್ ನಂತರ ಮನೆಯಲ್ಲಿರುವುದು ಅಭ್ಯಾಸವಾಗಿ ಹೋಗಿದೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಚೆಲುವಿಗೆ, ಮುಗ್ಧತೆಗೆ ಬೋಲ್ಡ್ ಆದರಂತೆ ಈ ನಿರ್ದೇಶಕ …
ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಬರೆದುಕೊಂಡಿರುವ ಅವರು, “ಇವತ್ತಿಗೆ ಯಾವ ಸ್ಥಿತಿಗೆ ಬಂದಿದ್ದೇನೆಂದರೆ, ಮನೆಯಲ್ಲಿ ಇರುವುದು ಅಭ್ಯಾಸವಾಗಿ ಹೋಗಿದೆ’ ಎಂದು ಹೇಳಿದ್ದಾರೆ. ಸೋನಾ ಅವರ ಈ ಪೋಸ್ಟ್ಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ.
ಮೊದಲ ಲಾಕ್ಡೌನ್ ಮುಗಿದು, ಬಾಲಿವುಡ್ನ ಹಲವು ಜನಪ್ರಿಯ ನಟಿಯರು ಚಿತ್ರೀಕರಣಕ್ಕೆ ಹಾಜರಾದರೂ, ಅದ್ಯಾಕೋ ಸೋನಾ ಸಿನ್ಹಾ ಮಾತ್ರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿಲ್ಲ. 2019ರಲ್ಲಿ ಸೋನಾ ಅಭಿನಯದ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಹಾಗೆ ಬಿಡುಗಡೆಯಾದ ಕೊನೆಯ ಚಿತ್ರ ಎಂದರೆ ಅದು, ಸಲ್ಮಾನ್ ಖಾನ್ ಅಭಿನಯದ “ದಬಾಂಗ್ 3′. ಆ ನಂತರ “ಭುಜ್’ ಎಂಬ ಚಿತ್ರದಲ್ಲಿ ಸೋನಾ ಅಭಿನಯಿಸಿದ್ದಾರಾದರೂ, ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಕಳೆದ ವರ್ಷವೇ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ನಿಂದಾಗಿ ಚಿತ್ರವನ್ನು ಇದೇ ಆಗಸ್ಟ್ 15ರಂದು ಡಿಸ್ನಿ ಹಾಟ್ಸ್ಟಾರ್ ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಕೋವಿಡ್ ಸೆಂಟರ್ಗೆ ಎರಡು ಕೋಟಿ ಕೊಟ್ಟ ಅಮಿತಾಭ್ ಬಚ್ಚನ್
ಈ ಮಧ್ಯೆ, ಸೋನಾ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಳ್ಳದ ಕಾರಣ, ಕಳೆದ ಒಂದು ವರ್ಷದಿಂದ ಮನೆಯಲ್ಲೇ ಇರುವಂತಾಗಿದೆ.
ಲಾಕ್ಡೌನ್ ನಿಂದ ಸಾಕಾಗಿದೆ, ನಂಗೇನು ಅಪ್ಪ ಅಮ್ಮ ದುಡ್ಡು ಕೊಡೋಲ್ಲ, ಕೆಲಸ ಮಾಡಲೇಬೇಕು ಎಂದ ನಟಿ ಶ್ರುತಿ ಹಾಸನ್