ಒಂದೇ ಏಟಿಗೆ ತಂದೆ ಹತ್ಯೆಗೈಯಲು ಯೂಟ್ಯೂಬ್​ನಲ್ಲಿ ಸರ್ಚ್​! ಕಡೆಗೂ ಪಾಪಿ ಪುತ್ರ ಪೊಲೀಸರ ಬಲೆಗೆ | Murder

blank

Father Murder: ಮಾದಕ ವ್ಯಸನಿಯಾಗಿದ್ದಲ್ಲದೇ, ಪೋಕರ್, ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್‌ನಲ್ಲಿ ಹಣವನ್ನು ಕಳೆಯುತ್ತಿದ್ದ ಪುತ್ರನಿಗೆ ತಂದೆ ಬುದ್ದಿ ಮಾತು ಹೇಳಿದ್ದೇ ಇಂದು ಅವರ ಸಾವಿಗೆ ಕಾರಣವಾದ ಘಟನೆ ಆಂಧ್ರಪ್ರದೇಶದ ಎನ್​ಟಿಆರ್​ ಜಿಲ್ಲೆಯಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಭ್ರಷ್ಟ ಮುಕ್ತ ವ್ಯವಸ್ಥೆಗೆ ಎಲ್ಲರೂ ಸಹಕರಿಸಿ; ಉಪ ಲೋಕಾಯುಕ್ತ ಬಿ.ವೀರಪ್ಪ ಮನವಿ; ಒಂದೇ ದಿನ 316 ಕೇಸ್ ದಾಖಲು, 113 ಸ್ಥಳದಲ್ಲೇ ಕ್ಲೋಸ್

ಮೃತ ಶ್ರೀನಿವಾಸ ರಾವ್ ಈ ಹಿಂದೆ ಪುತ್ರ ಪುಲ್ಲರಾವ್ ಮಾಡಿಕೊಂಡಿದ್ದ ನಾಲ್ಕು ಲಕ್ಷ ರೂ. ಸಾಲವನ್ನು ತೀರಿಸಿದ್ದರು. ಮಾದಕ ವ್ಯಸನಿ ಮತ್ತು ಸಾಲದ ಚಟ ಹೊಂದಿದ್ದ ಮಗನಿಗೆ ಎಷ್ಟೇ ಬುದ್ದಿ ಹೇಳಿದರೂ ಪ್ರಯೋಜನವಿಲ್ಲ ಎಂಬ ಬೇಸರದಲ್ಲಿದ್ದ ಶ್ರೀನಿವಾಸ ರಾವ್​, ಇದೇ ವಿಷಯಕ್ಕೆ ಮಗನೊಂದಿಗೆ ಜಗಳವಾಡಿದ್ದಾರೆ. ತಂದೆಯ ಬುದ್ದಿ ಮಾತುಗಳಿಗೆ ಬೇಸತ್ತ ಪುಲ್ಲರಾವ್, ಹೇಗಾದರೂ ಮಾಡಿ ಒಂದೇ ಏಟಿಗೆ ತಂದೆಯನ್ನು ಮುಗಿಸಲು ಹಲವಾರು ದಾರಿಯನ್ನು ಹುಡುಕಿದ್ದಾನೆ.

ಇದಕ್ಕಾಗಿ ಯೂಟ್ಯೂಬ್ ಮೊರೆ ಹೋದ ಪಾಪಿ ಪುತ್ರ, ಸರಣಿ ಕೊಲೆಯ ವಿಡಿಯೋಗಳನ್ನು ವೀಕ್ಷಿಸಿ, ಅದರಿಂದ ಪ್ರೇರಣೆಗೊಂಡಿದ್ದ. ತಾನು ಹೂಡಿದ್ದ ಸಂಚಿನಂತೆ ಈ ತಿಂಗಳ 8ರಂದು ಹೊಲದಲ್ಲಿ ತನ್ನ ತಂದೆಯನ್ನು ಹತ್ಯೆಗೈದ ಪುಲ್ಲರಾವ್​, ತಂದೆಯ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ಹೇಳುವ ಮೂಲಕ ಊರಿನ ಜನರ ದಿಕ್ಕನೇ ಬದಲಿಸಿದ್ದ. ಇದರಲ್ಲಿ ತನ್ನ ಕೈವಾಡವಿದೆ ಎಂಬ ಶಂಕೆ ಪೊಲೀಸರಿಗೆ ಗೊತ್ತಾಗಬಾರದು ಎಂಬ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಆತ ಕಣ್ಣೀರಿಟ್ಟಿದ್ದನು. ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿದಾಗ ಕೊಲೆಗಾರನ ನೆರಳು ಪೊಲೀಸರಿಗೆ ಸಿಕ್ಕಿತು.

ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಿಲಯನ್ಸ್ ಫೌಂಡೇಶನ್ ಕ್ರೀಡಾಪಟುಗಳಿಂದ ಇತಿಹಾಸ ಸೃಷ್ಟಿ; 20 ಚಿನ್ನ ಸಹಿತ 43 ಪದಕ ಗೆಲುವಿನ ಸಾಧನೆ

ಈ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ಮೃತ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ಇದು ಸಹಜ ಸಾವಲ್ಲ, ಕೊಲೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ತಕ್ಷಣವೇ ಪುತ್ರ ಪುಲ್ಲಾರಾವ್​ನನ್ನು ವಿಚಾರಣೆಗೆ ಒಳಪಡಿಸಿ, ತನಿಖೆ ನಡೆಸಿದ ಪೊಲೀಸರಿಗೆ ಈತನೇ ಕೊಲೆಗಾರ ಎಂಬುದು ಸಾಬೀತಾಗಿದೆ. ತಾನೇ ಕೊಲೆಗೈದಿದ್ದು ಎಂದು ಸತ್ಯ ಬಾಯ್ಬಿಟ್ಟ ಬೆನ್ನಲ್ಲೇ ಆರೋಪಿಯನ್ನು ಮೈಲವರಂ ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Share This Article

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಹೀಗೆ ಮಾಡಿ ನೋಡಿ..Gastric Problem

Gastric Problem: ಪ್ರಸ್ತುತ ಯುಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ…

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…