ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಸವಣೂರು: ಕಾಯ್ಮಣ ಗ್ರಾಮದ ಅಂಕಜಾಲು ಎಂಬಲ್ಲಿ ತಾಯಿಯನ್ನು ಮಗ ಕಲ್ಲಿನಿಂದ ಎಸೆದು ಹತ್ಯೆಗೈದಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಮಂಗಳವಾರ ಕೇಸು ದಾಖಲಾಗಿದೆ.

ಅಂಕಜಾಲು ಜನತಾ ಕಾಲನಿ ನಿವಾಸಿ ನಾವುರ ಎಂಬುವರ ಪತ್ನಿ ಚೀಂಕು(53) ಹತ್ಯೆಯಾದವರು. ಪುತ್ರ ಗೋಪಾಲ(33) ಆರೋಪಿ. ಮೂರು ದಿನಗಳ ಹಿಂದೆ ಗಂಡ-ಹೆಂಡತಿ ಕುಡಿದ ಮತ್ತಿನಲ್ಲಿ ಜಗಳ ಮಾಡುತ್ತಿದ್ದ ಸಂದರ್ಭ ಪುತ್ರ ಗೋಪಾಲ್ ಸಹ ಪಾನಮತ್ತನಾಗಿ ತಾಯಿ ಚೀಂಕುಗೆ ಅಡಕೆ ಪುಡಿ ಮಾಡುವ ಕಲ್ಲಿನಿಂದ ಹೊಟ್ಟೆಗೆ ಎಸೆದಿದ್ದ. ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಮಂಗಳವಾರ ಮೃತಪಟ್ಟರು ಎಂದು ತಿಳಿದು ಬಂದಿದೆ.

ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ಬೆಳ್ಳಾರೆ ಠಾಣಾ ಪಿಎಸೈ ಡಿ.ಎನ್ ಈರಯ್ಯ ತನಿಖೆ ನಡೆಸುತ್ತಿದ್ದಾರ