ತಮಿಳುನಾಡು: ಪಾಲಕರು ತಮ್ಮ ಮಕ್ಕಳು ಸಮಾಜದಲ್ಲಿ ಉನ್ನತಿ ಸಾಧಿಸಬೇಕೆಂದು ಬಯಸುತ್ತಾರೆ. ತಮ್ಮ ಸಂತೋಷವನ್ನು ಬದಿಗೊತ್ತಿ ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಾರೆ. ಹೀಗೆ ಜೀವನವಿಡೀ ತನ್ನ ಸಂಸಾರಕ್ಕಾಗಿ ದುಡಿದ ತಂದೆಗೆ ಎಂದಿಗೂ ಮರೆಯಲಾಗದ ಉಡುಗೊರೆಗಳನ್ನು ನೀಡಿ ಮಗ ಸಂತಸ ಪಡಿಸಿದ್ದಾನೆ.
ಕಷ್ಟಪಟ್ಟು ಓದಿಸಿ, ಸೈಕಲ್ ಮೇಲೆ ಖರ್ಜೂರ ಮಾರಿ ಸಂಸಾರ ನಡೆಸುತ್ತಾ ದೊಡ್ಡ ಮಟ್ಟಕ್ಕೆ ತಂದ ತಂದೆಗೆ ಸರ್ಪ್ರೈಸ್ ಕೊಡಲು ಮಗ ಬಯಸಿದ್ದ.ಹುಟ್ಟುಹಬ್ಬದಂದು ತಂದೆಗೆ 2.5 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರು ಹಾಗೂ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡುವ ಮೂಲಕ ಮಗ ಪ್ರೀತಿ ತೋರಿಸಿದ್ದಾನೆ.
ತನ್ನ ತಂದೆಗೆ ಇಷ್ಟು ದುಬಾರಿ ಕಾರು ಮತ್ತು ವಾಚ್ ಗಿಫ್ಟ್ ಕೊಟ್ಟಿದ್ದು ಯಾಕೆ? ಇದರ ಹಿಂದೆ ಏನಾದರೂ ಕಾರಣವಿದೆಯೇ? ಬಾಲಾ ಸಿಂಗ್ ಅವರ ಮಗ ಚಾನೆಲ್ ಸಂದರ್ಶನದಲ್ಲಿ ಅದರ ಬಗ್ಗೆ ವಿವರವಾಗಿ ಹೇಳಿದ್ದಾರೆ.
ನಾವು 42 ವರ್ಷಗಳಿಂದ ತಮಿಳುನಾಡಿನಲ್ಲಿ 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅಂಗಡಿಯನ್ನು ನಡೆಸುತ್ತಿದ್ದೇವೆ. ನನ್ನ ತಂದೆ 14 ನೇ ವಯಸ್ಸಿನಿಂದ ಕೆಲಸ ಮಾಡಲು ಪ್ರಾರಂಭಿಸಿದರು. ಹಳೆಯ ಕಬ್ಬಿಣದ ಸಾಮಾನುಗಳ ವ್ಯಾಪಾರವನ್ನು ಪ್ರಾರಂಭಿಸಿದರು. ಅದಕ್ಕಾಗಿ ಸೈಕಲ್ ಮೇಲೆ ಬೀದಿ ಬೀದಿ ಸುತ್ತಿ ಕಬ್ಬಿಣದ ಸಾಮಾನುಗಳಿಗೆ ಖರ್ಜೂರ ವ್ಯಾಪಾರ ಮಾರುತ್ತಿದ್ದರು ಎಂದಿದ್ದಾರೆ.
ನನ್ನ ತಂದೆಯ ಊರು ತಿರುನೆಲ್ವೇಲಿಯ ಹತ್ತಿರವಿರುವ ಕೊಪಿಸೆಟಿಪಾಳ್ಯಂ. ವ್ಯಾಪಾರ ಮಾಡಲು ಪ್ರತಿದಿನ 40 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು. ಅಮ್ಮ ಸತ್ತು 22 ವರ್ಷ ಆಗುತ್ತೆ. ನನ್ನ ತಂದೆ ಮರುಮದುವೆಯಾಗದೆ ನನ್ನನ್ನು ಮತ್ತು ನನ್ನ ತಂಗಿಯನ್ನು ಬೆಳೆಸಿದರು. ಚಿಕ್ಕಂದಿನಿಂದಲೂ ಅಪ್ಪನಿಗೆ ಒಳ್ಳೆ ಶೂ, ವಾಚ್, ಕಾರು ಬೇಕು ಎಂಬ ಆಸೆ ಇತ್ತು.. ಹುಟ್ಟುಹಬ್ಬದಂದು ಬೆಲೆ ಬಾಳುವ ಶೂ, ರೋಲೆಕ್ಸ್ ವಾಚ್, ಬಿಎಂಡಬ್ಲ್ಯು ಕಾರನ್ನು ಕೊಟ್ಟು ಖುಷಿ ಪಡಿಸಿದ್ದೆ ಎಂದಿದ್ದಾರೆ
ಮಗ ಕೊಟ್ಟ ಗಿಫ್ಟ್ ಬಗ್ಗೆ ತಂದೆ ಜಗನ್ನಾಥನ್ ಖಾಸಗಿವಾಹಿನಿ ಜತೆ ಮಾತನಾಡಿ.’ನನ್ನ ಮಗ ಇಷ್ಟೊಂದು ದುಬಾರಿ ಗಿಫ್ಟ್ ಕೊಡುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದು ನನ್ನ ಜೀವನಕ್ಕೆ ಸಾಕು ಎಂದರು. ಸದ್ಯ ಅಪ್ಪ-ಮಗನ ಬಾಂಧವ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.