ವಿದ್ಯಾಭ್ಯಾಸಕ್ಕೆ 25 ಲಕ್ಷ ರೂ. ಅನುದಾನ

ಸೋಮವಾರಪೇಟೆ: ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಿವಮೊಗ್ಗದ ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ 25 ಲಕ್ಷ ರೂ.ಗಳ ಚೆಕ್‌ಅನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು.

ಜಿಲ್ಲೆಯ ಪ್ರಾಕೃತಿಕ ವಿಕೋಪಕ್ಕೀಡಾದ ಪ್ರದೇಶಗಳಿಗೆ ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ, ಸಂತ್ರಸ್ತ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಸ್ಕಾಲರ್‌ಶಿಪ್ ಸೇರಿದಂತೆ ಇನ್ನಿತರ ಅಗತ್ಯಗಳಿಗಾಗಿ ಅಸೋಸಿಯೇಷನ್‌ನ ಸದಸ್ಯರು ಮತ್ತು ಕೆಲಸಗಾರರಿಂದ ಸಂಗ್ರಹಿಸಲಾಗಿದ್ದ 25,11,497 ರೂ.ಗಳ ಚೆಕ್‌ಅನ್ನು ಅಸೋಸಿಯೇಷನ್‌ನ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ ಅವರು ಹಸ್ತಾಂತರಿಸಿ, ಹಣವನ್ನು ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವಂತೆ ಮನವಿ ಮಾಡಿದರು.

ಐಐಎಫ್ ಚಾಪ್ಟರ್ ಅಧ್ಯಕ್ಷ ಬೆನಕಪ್ಪ, ಪ್ರಾರ್ಥನ ಇಂಡಸ್ಟ್ರೀಸ್‌ನ ಮಾಲೀಕ ಕೆ.ವಿ. ನಾರಾಯಣ್, ಶಾಂತಲ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಡಿ.ಬಿ. ಅಶೋಕ್ ಅವರು ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಗಣಪತಿ ಇತರರಿದ್ದರು.