22.5 C
Bengaluru
Sunday, January 19, 2020

ಸೋಮೇಶ್ವರಕ್ಕೆ ಉಳ್ಳಾಲ ಮಾದರಿ

Latest News

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ವೇಣುವಿನೋದ್ ಕೆ.ಎಸ್, ಮಂಗಳೂರು
ಎಡಿಬಿ ನೆರವಿನಲ್ಲಿ ಕಡಲ್ಕೊರೆತ ತಡೆಗೆ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಅದೇ ಮಾದರಿಯಲ್ಲಿ ಸೋಮೇಶ್ವರದಲ್ಲೂ ಎಡಿಬಿ ನೆರವಿನ ಟ್ರಾಂಚ್-2 ಯೋಜನೆಗೆ ಸಿದ್ಧತೆ ಅಂತಿಮಗೊಂಡಿದೆ.
ಆದರೆ, 2019ರ ಸೆಪ್ಟಂಬರ್‌ಗೆ ಎಡಿಬಿ ಪ್ರಾಜೆಕ್ಟ್ ಪೂರ್ಣಗೊಳಿಸಲು ಅಂತಿಮ ಅವಧಿ ಆಗಿರುವುದರಿಂದ ಅದರ ಮೊದಲು ಕೆಲಸ ಪೂರ್ತಿಗೊಳಿಸುವ ಸವಾಲು ಕೂಡ ಎದುರಾಗಿದೆ. ಪ್ರಸ್ತುತ ಟ್ರಾಂಚ್ 2ರಲ್ಲಿ ಒಟ್ಟು 150 ಕೋಟಿ ರೂ.ವೆಚ್ಚದಲ್ಲಿ ಬರ್ಮ್ ಹಾಗೂ ರೀಫ್ ನಿರ್ಮಾಣ ಮತ್ತು ಮುಕ್ಕಚ್ಚೇರಿಯಲ್ಲಿ ಸೀ-ವಾಲ್ ನಿರ್ಮಾಣ ಆಗಬೇಕಿದೆ. ಟೆಂಡರ್ ಅನುಮೋದನೆಯಾಗಿದ್ದು ಗುತ್ತಿಗೆದಾರರು ಇನ್ನು ಕೆಲ ದಿನಗಳಲ್ಲಿ ಕೆಲಸ ಶುರು ಮಾಡಲಿದ್ದಾರೆ. ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ 2012ರಿಂದ 223.32 ಕೋಟಿ ರೂ.ವೆಚ್ಚದಲ್ಲಿ ಇನ್‌ಶೋರ್ ಬರ್ಮ್ ನಿರ್ಮಾಣ, ಬ್ರೇಕ್ ವಾಟರ್ ಸದೃಢಗೊಳಿಸುವುದು ಹಾಗೂ ಎರಡು ರೀಫ್ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು.

ಏನಿದು ಯೋಜನೆ ?
ಉಳ್ಳಾಲದಲ್ಲಿ ಸದ್ಯ ಕಡಲ್ಕೊರೆತ ಸಂಪೂರ್ಣ ನಿಂತಿದೆ, ರೀಫ್ ನಿರ್ಮಿಸಿದ ಕಡೆಯಲ್ಲಿ ಬೀಚ್ ಕೂಡಾ ಅಭಿವೃದ್ಧಿಯಾಗಿದ್ದು, ಈ ವರ್ಷ ಕಡಲ್ಕೊರೆತದ ದೂರುಗಳು ಬಂದಿಲ್ಲ. ಆದರೆ ಅದರ ದಕ್ಷಿಣಕ್ಕಿರುವ ಮುಕ್ಕಚ್ಚೇರಿ ಹಾಗೂ ಸೋಮೇಶ್ವರಗಳಲ್ಲಿ ಕಡಲ್ಕೊರೆತ ಈ ವರ್ಷ ತೀವ್ರವಾಗಿವೆ. ಸೋಮೇಶ್ವರದಲ್ಲಿ 26.33 ಕೋಟಿ ರೂ.ವೆಚ್ಚದಲ್ಲಿ 10 ಇನ್‌ಶೋರ್ ಬರ್ಮ್‌ಗಳ ನಿರ್ಮಾಣ, 104.82 ಕೋಟಿ ರೂ. ವೆಚ್ಚದಲ್ಲಿ ಸಮುದ್ರದಲ್ಲಿ ಎರಡು ರೀಫ್‌ಗಳ ನಿರ್ಮಾಣ ಹಾಗೂ ಮುಕ್ಕಚ್ಚೇರಿಯಲ್ಲಿ 22.08 ಕೋಟಿ ರೂ. ವೆಚ್ಚದಲ್ಲಿ ಸೀ-ವಾಲ್(ಕಡಲ ತಡೆಗೋಡೆ)ನಿರ್ಮಾಣ ಯೋಜನೆಯಲ್ಲಿ ಸೇರಿವೆ. ಇನ್‌ಶೋರ್ ಬರ್ಮ್ ಎಂದರೆ ಸಮುದ್ರ ತೀರದಲ್ಲಿ ಜಿಯೋಟೆಕ್ಸ್‌ಟೈಲ್ ಎನ್ನುವ ವಿಶೇಷ ಬಟ್ಟೆಯಿಂದ ತಯಾರಿಸಿದ ಬ್ಯಾಗ್‌ಗಳಲ್ಲಿ ಟನ್‌ಗಟ್ಟಲೆ ಮರಳು ತುಂಬಿ ವ್ಯವಸ್ಥಿತವಾಗಿ ಜೋಡಿಸಿಡುವುದು, ಅದರ ಮುಂಭಾಗ ಎಂದರೆ ಅಲೆಗಳು ಅಪ್ಪಳಿಸುವ ಭಾಗಕ್ಕೆ ಕಲ್ಲು ಮತ್ತು ಟೆಟ್ರಾಪಾಡ್‌ಗಳನ್ನು ಹಾಕುವ ಮೂಲಕ ಅಲೆಗಳ ಬಲವನ್ನು ಕ್ಷೀಣಿ ಸುವಂತೆ ಮಾಡುವುದು ಯೋಜನೆ.

ಸಮುದ್ರದಲ್ಲಿ 2 ರೀಫ್ ನಿರ್ಮಾಣ
ರೀಫ್ ಎಂದರೆ ಸಮುದ್ರದಿಂದ ತುಸು ದೂರ ಬ್ರೇಕ್ ವಾಟರ್ ಮಾದರಿಯಲ್ಲೇ, ತೀರಕ್ಕೆ ಸಮಾಂತರವಾಗಿ ಕಲ್ಲುಗಳನ್ನು ಬಳಸಿಕೊಂಡು ರಚನೆ ಮಾಡಲಾಗುತ್ತದೆ. ಸೋಮೇಶ್ವರದಲ್ಲಿ ದಕ್ಷಿಣ ಮತ್ತು ಉತ್ತರ ಎರಡು ರೀಫ್‌ಗಳನ್ನು ತೀರದಿಂದ 600 ಮೀಟರ್ ದೂರದ ಸಮುದ್ರದಲ್ಲಿ ನಿರ್ಮಿಸಲಾಗುತ್ತದೆ. ಇದರಿಂದ ಕಡಲ ಅಬ್ಬರದ ಅಲೆಗಳು ಬಲ ಕ್ಷೀಣಿಸಿಕೊಳ್ಳುವುದರಿಂದ ಉತ್ತಮ ತೀರ ನಿರ್ಮಾಣಗೊಳ್ಳುತ್ತದೆ. ಮುಕ್ಕಚ್ಚೇರಿಯಲ್ಲಿ 635 ಮೀಟರ್ ಕಡಲ್ಕೊರೆತ ತಡೆಗೋಡೆ ನಿರ್ಮಿಸುವುದು ಯೋಜನೆಯಲ್ಲಿ ಸೇರಿದೆ. ಇದು ಸಾಂಪ್ರದಾಯಿಕ ತಡಗೋಡೆಯಲ್ಲ. ಬದಲಿಗೆ ಸಾಗರ ಭೂವಿಜ್ಞಾನ ತಜ್ಞರು ನೀಡಿರುವ ವಿನ್ಯಾಸ. ಅದರಂತೆ ಸಮುದ್ರ ತೀರದ ತಳದಲ್ಲಿ ಜಿಯೊಟೆಕ್ಸ್‌ಟೈಲ್ ಲೇಯರ್ ಹಾಕುತ್ತಾರೆ. ಅದು ಜಾರದಂತೆ ಅದರ ಮೇಲೆ ಕಲ್ಲುಗಳನ್ನು ಹಾಕಲಾಗುತ್ತದೆ. ಬಳಿಕ ಒಂದು ಅಲೆಗಳು ಅಪ್ಪಳಿಸುವ ಕೋನದಲ್ಲೇ ಅದರ ಬಲ ಕಡಿಮೆಯಾಗುವ ರೀತಿಯಲ್ಲಿ ಕಲ್ಲು ಜೋಡಿಸಿ, ಕೊನೆಯಲ್ಲಿ ಸೀ-ವಾಲ್ ರಚಿಸಲಾಗುತ್ತದೆ.

ಉಳಿದಿರುವುದು 13 ತಿಂಗಳು
2011ರಿಂದ 2020ರವರೆಗೆ ಈ ಕಾಮಗಾರಿಗಳನ್ನು (ಟ್ರಾಂಚ್-1,2) ಮುಗಿಸಲು ಎಡಿಬಿ ಅವಧಿ ನೀಡಿದೆ. ಅದರಂತೆ ಇನ್ನುಉಳಿದಿರುವುದು ಕೇವಲ 13 ತಿಂಗಳು. ಅದರ ಮೊದಲು ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಅದರಲ್ಲೂ ಮೂರು ತಿಂಗಳು ಮಳೆಗಾಲ ಇರುವುದರಿಂದ ಕೆಲಸ ಚುರುಕಾಗಬೇಕಿದೆ. ಬರ್ಮ್ ನಿರ್ಮಾಣ ಧರ್ತಿ ಇನ್‌ಫ್ರಾ, ರೀಫ್ ನಿರ್ಮಾಣಕ್ಕೆ ಡಿವಿಪಿ ಇನ್‌ಫ್ರಾ ಹಾಗೂ ಆರ್‌ಡಿಎಸ್ ಜಂಟಿಯಾಗಿ ಗುತ್ತಿಗೆ ಪಡೆದಿವೆ. ಸೀವಾಲ್ ನಿರ್ಮಾಣವನ್ನು ಧರ್ತಿ ಹಾಗೂ ಆರ್‌ಸಿಸಿಎಲ್ ಸಂಸ್ಥೆ ಗುತ್ತಿಗೆಗೆ ಪಡೆದುಕೊಂಡಿವೆ.

ನದಿ ಮರಳು ಸಿಗದೆ ಸಮಸ್ಯೆ
ಸಾಮಾನ್ಯವಾಗಿ ನದಿಗಳಲ್ಲಿ ಮರಳು ಹರಿದು ಸಮುದ್ರ ಸೇರುತ್ತದೆ. ಅದೇ ಮರಳನ್ನು ಸಮುದ್ರ ತಳ್ಳಿ ಬೀಚ್‌ಗೆ ಸೇರಿಸುತ್ತದೆ. ಅದರಿಂದಾಗಿ ಕಡಲ ಕಿನಾರೆ ನಿರ್ವಹಣೆಯಾಗಬೇಕು. ಆದರೆ ಕಳೆದ ಹಲವು ವರ್ಷಗಳಿಂದ ಕಡಲಿಗೆ ನದಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮರಳು ಬರುತ್ತಿಲ್ಲ. ಜನರು ನದಿಗಳಿಂದ ಬೇಕಾಬಿಟ್ಟಿ ಮರಳು ತೆಗೆಯದಿರುವುದು ಕೂಡ ಕಡಲ್ಕೊರೆತಕ್ಕೆ ಪರೋಕ್ಷ ಕಾರಣ ಎಂದು ತಜ್ಞರು ಹೇಳುತ್ತಾರೆ.

ಉಳ್ಳಾಲದಲ್ಲಿ (ಟ್ರಾಂಚ್-1) ನಾವು ಈ ಎಲ್ಲ ಕಾಮಗಾರಿಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೇವೆ, ಆಗ ನಮಗೆ ಕಷ್ಟವಾಗಿದ್ದು ನಿಜ. ಆದರೆ ಅದರ ಅನುಭವ ಇರುವುದರಿಂದ ಈ ಬಾರಿ ವೇಗವಾಗಿ ಕೆಲಸ ಮಾಡಲು ಸಾಧ್ಯವಿದೆ, ಇನ್ನು 10 ದಿನದಲ್ಲಿ ಕೆಲಸ ಶುರುವಾಗಲಿದೆ.
-ಗೋಪಾಲ ನಾಯಕ್, ಜಂಟಿ ನಿರ್ದೇಶಕ, ಸುಸ್ಥಿರ ಕರಾವಳಿ ರಕ್ಷಣಾ, ನಿರ್ವಹಣಾ ಹೂಡಿಕೆ ಯೋಜನೆ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...