ದತ್ತಾಂಶದ ಸುತ್ತಮುತ್ತ

Latest News

ಗಡಿ ಭಾಗಗಳಲ್ಲಿ ಕನ್ನಡ ಉಳಿಸುವ ಕೆಲಸವಾಗಲಿ

ಸಂಸದ ರಾಜಾ ಅಮರೇಶ್ವರ ನಾಯಕ ಸಲಹೆ | ಕರವೇಯಿಂದ ಕನ್ನಡ ರಾಜ್ಯೋತ್ಸವ ಲಿಂಗಸುಗೂರು: ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷೆಯ ಬಗ್ಗೆ...

ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದ ಆಫ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​!

ಇಂದೋರ್​: ಆತಿಥೇಯ ಟೀಮ್​ ಇಂಡಿಯಾ ಹಾಗೂ ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲನೇ ಪಂದ್ಯದಲ್ಲಿ ಆಫ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಅವರು...

ಪತಿಯ ಕಿರುಕುಳ ತಡೆಯಲಾಗದೆ ಟ್ವಿಟರ್ ಮೂಲಕ ಸಹಾಯ ಕೋರಿದ ಪತ್ನಿ: ಶಾರ್ಜಾದಲ್ಲಿ ಬೆಂಗಳೂರು ಮೂಲದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

ಶಾರ್ಜಾ: ಪತಿಯಿಂದ ತೀವ್ರವಾಗಿ ಕಿರುಕುಳಕ್ಕೆ ಒಳಗಾಗಿದ್ದ ಬೆಂಗಳೂರು ಮೂಲದ ಮಹಿಳೆಯನ್ನು ಇಲ್ಲಿನ ಪೊಲೀಸರು ರಕ್ಷಣೆ ಮಾಡಿದ್ದು, ಪತಿಯನ್ನು ಬಂಧಿಸಿದ್ದಾರೆ. ಈ ಮಹಿಳೆ ಅರಬ್​ ಸಂಯುಕ್ತ ಸಂಸ್ಥಾನದ ಶಾರ್ಜಾದಲ್ಲಿ...

ರಫೇಲ್​ ಒಪ್ಪಂದ ಕುರಿತ ಸುಪ್ರೀಂಕೋರ್ಟ್​ ನಿಲುವು ಮೋದಿ ಸರ್ಕಾರದ ವಿಶ್ವಾಸಾರ್ಹತೆಯನ್ನು ಮತ್ತೆ ಸಾಬೀತುಪಸಿದೆ: ಅಮಿತ್​ ಷಾ

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ಅರ್ಜಿ ಮರುಪರಿಶೀಲನೆಗೆ ಸುಪ್ರೀಂಕೋರ್ಟ್​ ನಿರಾಕರಿಸುವ ಮೂಲಕ ರಾಷ್ಟ್ರದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ನರೇಂದ್ರ...

ಊಟ ಮಾಡುವಾಗ ನೀರು ಕುಡೀತೀರಾ..?: ಹಾಗಾದ್ರೆ ಪೌಷ್ಟಿಕತಜ್ಞರ ಸಲಹೆ ಕಡೆಗೊಮ್ಮೆ ಗಮನಹರಿಸುವುದೊಳಿತು..

ನವದೆಹಲಿ: ಊಟಕ್ಕೂ ಮೊದಲು ಹಾಗೂ ಊಟದ ಬಳಿಕ ಯಾವ ಸಮಯದಲ್ಲಿ? ಎಷ್ಟು ಪ್ರಮಾಣದಲ್ಲಿ? ನೀರು ಕುಡಿಯಬೇಕೆಂಬ ಸಾಕಷ್ಟು ಚರ್ಚೆಗಳು ನಡೆದಿರುವುದನ್ನು ನಾವು ಕೇಳಿದ್ದೇವೆ....

ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ನಾವು ಪ್ರತಿದಿನವೂ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ. ವಾಟ್ಸ್ ಆಪ್ ಸಂದೇಶಗಳನ್ನು ಕಳುಹಿಸುವುದು, ಮೊಬೈಲಿನಲ್ಲಿ ವಿಡಿಯೋ ನೋಡುವುದು, ಆನ್​ಲೈನ್ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದು, ಆಪ್ ಬಳಸಿ ಟ್ಯಾಕ್ಸಿ ಕರೆಸುವುದು, ಎಟಿಎಂನಿಂದ ಹಣ ತೆಗೆಯುವುದು, ಬಸ್ ಕಂಡಕ್ಟರು ಟಿಕೆಟ್ ಮುದ್ರಿಸಿ ನೀಡುವುದು – ಇವೆಲ್ಲವೂ ಇದಕ್ಕೆ ಉದಾಹರಣೆ.

ಇಂತಹ ಪ್ರತಿಯೊಂದು ಕೆಲಸ ಮಾಡಿದಾಗಲೂ ಒಂದಷ್ಟು ವಿವರಗಳು ಸಂಬಂಧಪಟ್ಟ ವ್ಯವಸ್ಥೆಯಲ್ಲಿ ದಾಖಲಾಗುತ್ತವೆ, ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾವಣೆಯಾಗುತ್ತವೆ. ಮೊಬೈಲಿನಲ್ಲಿ ವೀಕ್ಷಿಸಿದ ವೀಡಿಯೋಗಳು, ಆನ್​ಲೈನ್ ಅಂಗಡಿಯಲ್ಲಿ ನೋಡಿದ ಹಾಗೂ ಖರೀದಿಸಿದ ವಸ್ತುಗಳು, ಟ್ಯಾಕ್ಸಿ ಬರಬೇಕಾದ ವಿಳಾಸ, ಗೂಗಲ್​ನಲ್ಲಿ ಹುಡುಕಿದ ವಿಷಯ, ಎಟಿಎಂನಿಂದ ಪಡೆದ ಹಣದ ಮೊತ್ತ, ಬಸ್ಸಿನಲ್ಲಿ ಪ್ರಯಾಣಿಸಿದ ದೂರ – ಹೀಗೆ. ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ಇಂತಹ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು. ಇದನ್ನು ಕನ್ನಡದಲ್ಲಿ ದತ್ತಾಂಶ ಎಂದು ಕರೆಯಬಹುದು. ಮನುಷ್ಯನ ದೇಹದಲ್ಲಿ ರಕ್ತ ಹೇಗೋ ಐಟಿ ಕ್ಷೇತ್ರದಲ್ಲಿ ದತ್ತಾಂಶವೂ ಅಷ್ಟೇ ಮುಖ್ಯ. ಇದನ್ನು ಪ್ರಪಂಚದ ಅತ್ಯಂತ ಮಹತ್ವದ ಸಂಪನ್ಮೂಲ ಎಂದು ಕರೆಯುವವರೂ ಇದ್ದಾರೆ. ಹಲವು ಸಂಸ್ಥೆಗಳ ಇಡೀ ವ್ಯವಹಾರ ನಿಂತಿರುವುದೇ ದತ್ತಾಂಶದ ಮೇಲೆ!

ಆದ್ದರಿಂದಲೇ ಐಟಿ ಜಗತ್ತಿನಲ್ಲಿ ದತ್ತಾಂಶ ಸಂಗ್ರಹಣೆಗೆ ಎಲ್ಲಿಲ್ಲದ ಮಹತ್ವ. ಜಾಲತಾಣದಲ್ಲಿ ನಾವು ಏನೇನು ಮಾಡುತ್ತೇವೆ, ಮ್ಯಾಪ್ ಹಾಕಿಕೊಂಡು ಎಲ್ಲೆಲ್ಲಿ ಹೋಗುತ್ತೇವೆ, ಸಮಾಜಜಾಲಗಳಲ್ಲಿ ಏನು ಹೇಳುತ್ತೇವೆ ಎನ್ನುವುದೆಲ್ಲ ದತ್ತಾಂಶದ ರೂಪದಲ್ಲಿ ಒಂದಲ್ಲ ಒಂದುಕಡೆ ಸಂಗ್ರಹವಾಗುತ್ತಿರುತ್ತದೆ. ಸಣ್ಣ-ದೊಡ್ಡ ಸಂಸ್ಥೆಗಳ ಕಾರ್ಯಾಚರಣೆ, ಆದಾಯ, ಲಾಭ-ನಷ್ಟಗಳ ವಿವರಗಳೂ ಇಂತಹ ದತ್ತಾಂಶದ ನೆರವಿನಿಂದಲೇ ರೂಪುಗೊಳ್ಳುತ್ತವೆ. ಹೀಗಾಗಿ ದತ್ತಾಂಶದ ಸಂಗ್ರಹಣೆ, ಸಂಸ್ಕರಣೆ ಮತ್ತು ಬಳಕೆ ಇಂದು ಮಾಹಿತಿ ತಂತ್ರಜ್ಞಾನದ ಪ್ರಮುಖ ಶಾಖೆಗಳಲ್ಲೊಂದಾಗಿ ಬೆಳೆದಿದೆ. ದತ್ತಾಂಶವನ್ನು ಸಂಗ್ರಹಿಸಿ ಸೂಕ್ತವಾಗಿ ಶೇಖರಿಸಿಡುವ ಡೇಟಾ ಇಂಜಿನಿಯರಿಂಗ್, ಸಂಗ್ರಹಿಸಿಟ್ಟ ದತ್ತಾಂಶವನ್ನು ವಿಶ್ಲೇಷಿಸಿ ಅರ್ಥೈಸುವ ಡೇಟಾ ಸೈನ್ಸ್ – ಇವೆಲ್ಲ ಈ ಶಾಖೆಯಡಿಯಲ್ಲಿ ಬರುತ್ತವೆ. ದತ್ತಾಂಶ ರೂಪುಗೊಂಡ ಕ್ಷಣದಿಂದ ಪ್ರಾರಂಭಿಸಿ ವಿಭಿನ್ನ ಉದ್ದೇಶಗಳಿಗಾಗಿ ಬಳಕೆಯಾಗುವವರೆಗೂ ಅದರ ಮೇಲ್ವಿಚಾರಣೆ ನೋಡಿಕೊಳ್ಳುವುದು ಇವುಗಳ ಕೆಲಸ. ಇಲ್ಲಿ ಕೆಲಸ ಮಾಡುವ ತಜ್ಞರು ಪ್ರತಿ ಕ್ಷಣದಲ್ಲೂ ಅಗಾಧ ಪ್ರಮಾಣದ ದತ್ತಾಂಶವನ್ನು ನಿಭಾಯಿಸುತ್ತಿರುತ್ತಾರೆ. ಅವರು ನಿಭಾಯಿಸುವ ದತ್ತಾಂಶ ಹಲವು ರೂಪಗಳಲ್ಲಿರಬಹುದು: ಅಂಗಡಿಯಲ್ಲೋ ಬ್ಯಾಂಕಿನಲ್ಲೋ ಸಂಗ್ರಹವಾಗುವ ದತ್ತಾಂಶ ನಿರ್ದಿಷ್ಟ ಸ್ವರೂಪದಲ್ಲಿದ್ದರೆ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳು ಹೇಗೆ ಬೇಕಾದರೂ ಇರುವುದು ಸಾಧ್ಯ. ಇಂತಹ ಯಾವುದನ್ನೇ ಆದರೂ ಸರಿಯಾಗಿ ಸಂಗ್ರಹಿಸುವುದು, ಬಳಕೆಗೆ ಒದಗಿಸುವುದು ತಜ್ಞರ ಕೆಲಸ. ಇಂದಿನ ದಿನಗಳಲ್ಲಿ ಬಳಕೆದಾರರ ಖಾಸಗಿತನದ ಬಗೆಗೆ ಸಾಕಷ್ಟು ಚರ್ಚೆ ಆಗುತ್ತಿರುತ್ತದೆ. ತಮ್ಮ ಬಳಕೆದಾರರ ಕುರಿತು ಸಂಸ್ಥೆಗಳು ಯಾವೆಲ್ಲ ದತ್ತಾಂಶವನ್ನು ಕಲೆಹಾಕಬಹುದು ಮತ್ತು ಕಲೆಹಾಕಬಾರದು ಎನ್ನುವ ಬಗ್ಗೆ ಕಾನೂನುಗಳೂ ರೂಪುಗೊಂಡಿವೆ. ಇಂತಹ ಕಾನೂನುಗಳನ್ನು ಅನುಸರಿಸುವುದು, ಸಂಗ್ರಹಿಸಿದ ದತ್ತಾಂಶ ದುಷ್ಕರ್ವಿುಗಳ ಕೈಸೇರದ ಹಾಗೆ ಜೋಪಾನ ಮಾಡಿಕೊಳ್ಳುವುದು ಈ ಕ್ಷೇತ್ರದಲ್ಲಿ ಕೆಲಸಮಾಡುವ ತಜ್ಞರ ಜವಾಬ್ದಾರಿಗಳು.

ಇಂತಹ ತಜ್ಞರಿಗೆ ತಲೆನೋವು ತಂದೊಡ್ಡುವ ಸಂಗತಿಗಳೂ ಇವೆ. ‘ಡಾರ್ಕ್ ಡೇಟಾ’ ಎನ್ನುವುದು ಇಂತಹ ಸಂಗತಿಗಳಲ್ಲೊಂದು. ಸರಕಾರ, ಖಾಸಗಿ ಉದ್ದಿಮೆ, ಸ್ವಯಂಸೇವಾ ಸಂಸ್ಥೆ – ಹೀಗೆ ಯಾವ ಉದಾಹರಣೆ ತೆಗೆದುಕೊಂಡರೂ ಅಲ್ಲೆಲ್ಲ ಅನೇಕ ವಿಷಯಗಳಿಗೆ ಸಂಬಂಧಪಟ್ಟ ದತ್ತಾಂಶ ಅಪಾರ ಪ್ರಮಾಣದಲ್ಲಿ ಶೇಖರವಾಗುತ್ತಿರುತ್ತದೆ. ಇದನ್ನೆಲ್ಲ ಸರಿಯಾಗಿ ಬಳಸಿಕೊಂಡು ತನ್ನ ಕಾರ್ಯಾಚರಣೆಯನ್ನು ಉತ್ತಮಪಡಿಸಿಕೊಳ್ಳಬೇಕು ಎನ್ನುವ ಉದ್ದೇಶವೂ ಹಲವು ಕಡೆಗಳಲ್ಲಿರುತ್ತದೆ. ಹೀಗೆ ಶೇಖರವಾಗುತ್ತದಲ್ಲ, ಆ ದತ್ತಾಂಶ ಸರಿಯಾದ ಸಮಯದಲ್ಲಿ ಸರಿಯಾದ ಉದ್ದೇಶಕ್ಕೆ ಬಳಕೆಯಾಗದೆ ಹಾಗೆಯೇ ಉಳಿದುಕೊಂಡುಬಿಟ್ಟರೆ ಅದರಿಂದ ಯಾವ ಉಪಯೋಗವೂ ಆಗುವುದಿಲ್ಲ. ಜತೆಗೆ ಅದನ್ನು ಸಂಗ್ರಹಿಸಿ ಸಂಸ್ಕರಿಸಲು ವ್ಯಯಿಸಿದ ಶ್ರಮವೂ ದಂಡ. ಹೀಗೆ ಉಳಿದುಕೊಳ್ಳುವ ದತ್ತಾಂಶವನ್ನೇ ‘ಡಾರ್ಕ್ ಡೇಟಾ’ ಎಂದು ಕರೆಯುತ್ತಾರೆ. ಇಂತಹ ನಿರುಪಯುಕ್ತ ದತ್ತಾಂಶದ ಪ್ರಮಾಣವನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಸಂಸ್ಥೆಗಳ – ತಜ್ಞರ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.

ತಮಗೆ ಉಪಯುಕ್ತವೆನಿಸುವ ದತ್ತಾಂಶವನ್ನು ಗುರುತಿಸಿ ಸಂಗ್ರಹಿಸುವುದು, ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಬಹಳಷ್ಟು ಸಂಸ್ಥೆಗಳ ಉದ್ದೇಶ. ಇದಕ್ಕೆ ದೊರಕುವ ಮಹತ್ವ ಹೆಚ್ಚುತ್ತಿದ್ದಂತೆ ಈ ಕ್ಷೇತ್ರದಲ್ಲಿ ಕೆಲಸಮಾಡುವ ತಜ್ಞರಿಗಾಗಿ ಬೇಡಿಕೆಯೂ ಹೆಚ್ಚುತ್ತಿದೆ. ದತ್ತಾಂಶ ಸಂಗ್ರಹಣೆ ಹಾಗೂ ನಿರ್ವಹಣೆಯಲ್ಲಿ ಪರಿಣತರಾದ ಡೇಟಾ ಇಂಜಿನಿಯರುಗಳು, ಸಂಗ್ರಹಿಸಿದ ದತ್ತಾಂಶವನ್ನು ಅರ್ಥಪೂರ್ಣ ವರದಿ ಹಾಗೂ ನಕ್ಷೆಗಳ ರೂಪಕ್ಕೆ ಪರಿವರ್ತಿಸಿಕೊಡಬಲ್ಲ ಪರಿಣತರು, ಅದನ್ನು ವಿಶ್ಲೇಷಿಸಿ ಆಡಳಿತ ಮಂಡಲಿಗೆ ಅರ್ಥಮಾಡಿಸುವ ಡೇಟಾ ಸೈಂಟಿಸ್ಟ್​ಗಳು – ಇವರೆಲ್ಲರಿಗೂ ಭಾರೀ ಬೇಡಿಕೆಯಿದೆ. ದತ್ತಾಂಶದ ಸುತ್ತಮುತ್ತ ಪರಿಣತಿ ರೂಪಿಸಿಕೊಳ್ಳಲು ಆಸಕ್ತಿಯಿರುವವರು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಡಲು ಇದು ಸೂಕ್ತ ಸಮಯವೂ ಹೌದು.

- Advertisement -

Stay connected

278,458FansLike
561FollowersFollow
607,000SubscribersSubscribe

ವಿಡಿಯೋ ನ್ಯೂಸ್

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...