Rashmika Mandanna : ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ನಾಯಕಿಯಾಗಿ ಅಗ್ರ ಸ್ಥಾನಕ್ಕೇರಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸಿನಿಮಾ ಇಂಡಸ್ಟ್ರಿಯಲ್ಲಿ ಅದೃಷ್ಟ ಎಂದರೆ ಹೇಗಿರಬೇಕು ಅಂದರೆ, ರಶ್ಮಿಕಾ ರೀತಿ ಇರಬೇಕು. ಏಕೆಂದರೆ, ನಟಿಸಿದ ಮೊದಲ ಚಿತ್ರ ಕಿರಾಕ್ ಪಾರ್ಟಿ ಸೂಪರ್ ಡೂಪರ್ ಹಿಟ್ ಆಯಿತು. ಅಲ್ಲದೆ, ಈ ಚಿತ್ರದಿಂದಲೇ ತೆಲುಗು ಚಿತ್ರದಿಂದ ಹೊಸ ಹೊಸ ಆಫರ್ಗಳು ಬರಲು ಶುರುವಾಯಿತು. ಟಾಲಿವುಡ್ನಲ್ಲೂ ಸ್ಟಾರ್ ಹೀರೋಯಿನ್ ಮಾಡಿತು. ಆದರೆ, ಕಾಲಿವುಡ್‌ನಲ್ಲಿ ಎರಡು ಚಿತ್ರಗಳನ್ನು ಮಾಡಿದರೂ ರಶ್ಮಿಕಾಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿಲ್ಲ. ಇದಾದ ಬಳಿಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಸೌತ್ ಬ್ಯೂಟಿ, ಅಲ್ಲಿಯೂ ಕ್ರೇಜಿ ಹೀರೋಯಿನ್ ಆಗಿದ್ದಾರೆ. ಬಾಲಿವುಡ್ನಲ್ಲಿ ಸಾಲು ಸಾಲು ಆಫರ್ಗಳು ಬರುತ್ತಿರುವುದರಿಂದ ದಕ್ಷಿಣದಲ್ಲಿ ಹೆಚ್ಚು ಸಿನಿಮಾ ಮಾಡಲು ರಶ್ಮಿಕಾಗೆ ಅವಕಾಶವಿಲ್ಲದಂತಾಗಿದೆ.
ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ-2 ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ನಟಿ ರಶ್ಮಿಕಾ, ತನ್ನನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಅದನ್ನು ತೋರಿಸಲೆಂದೇ Irreplaceable ಎಂದು ಕೈ ಮೇಲೆ ಹಚ್ಚೆ ಕೂಡ ಹಾಕಿಸಿಕೊಂಡಿದ್ದೇನೆ ಎಂದರು. ನನ್ನನ್ನು ನಾನೇ ಹೆಚ್ಚು ಇಷ್ಟಪಡುತ್ತೇನೆ. ಚಿತ್ರರಂಗದಲ್ಲಿ ಅಭಿಮಾನಿಗಳು ನನಗೆ ಉನ್ನತ ಸ್ಥಾನವನ್ನು ನೀಡಿದ್ದಾರೆ ಎಂದರು.
ಮಾತು ಮುಂದುವರಿಸಿದ ರಶ್ಮಿಕಾ, ಚಿತ್ರರಂಗದಲ್ಲಿ ಪುರುಷ ಪ್ರಾಬಲ್ಯ ಇರುವುದು ನಿಜ. ಆದರೆ, ಈಗ ಆ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗುತ್ತಿದೆ. ಈಗ ಪ್ರತಿಭೆ ಇದ್ದವರಿಗೆ ಅಭಿಮಾನಿಗಳಿಂದ ಹೆಚ್ಚಿನ ಬೆಂಬಲ ಸಿಗುತ್ತದೆ. ತೆಲುಗಿನಲ್ಲಿ ಒಳ್ಳೆ ಅವಕಾಶಗಳು ಬರುತ್ತಿದ್ದು, ಹಿಂದಿ ಹಾಗೂ ಇತರೆ ಭಾಷೆಗಳತ್ತ ಗಮನ ಹರಿಸುವುದರಿಂದ ತೆಲುಗಿನಲ್ಲಿ ಹೆಚ್ಚು ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಹೀಗಾಗಿ ತೆಲುಗು ಚಿತ್ರರಂಗದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ಬೈಯುತ್ತಾ, ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಅಭಿಮಾನಿಗಳು ಬೈಯ್ಯುವುದು ನನ್ನ ಮೇಲಿನ ಅಭಿಮಾನದಿಂದಲೇ ಎಂಬುದು ನನಗೆ ಅರ್ಥವಾಗುತ್ತದೆ. ಅದೇ ರೀತಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಯಾಕೆ ನಟಿಸುತ್ತಿಲ್ಲ ಎಂದು ಕೇಳುತ್ತಾರೆ. ಸೂಕ್ತ ಕತೆ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ರಶ್ಮಿಕಾ ಹೇಳಿದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ನಟನೆಯ ಪುಷ್ಪ-2 ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)
ನವೆಂಬರ್ 1, ಬೆಳಗ್ಗೆ 9 ಗಂಟೆಗೆ… ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡ ಮಹಿಳಾ ಅಘೋರಿ! Lady Aghori
ಕೋಳಿಗಳು ಮುಂಜಾನೆ ಹೊತ್ತಲ್ಲೇ ಹೆಚ್ಚು ಕೂಗುತ್ತವೆ ಏಕೆ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ… Chickens Clucking