ವಿ.ಸೋಮಣ್ಣ, ಡಿಕೆಶಿ ಜತೆ ಜತೆಯಲಿ; ಕಾಂಗ್ರೆಸ್​ ಸೇರ್ತಾರಾ ಸಚಿವರು?

ಬೆಂಗಳೂರು: ಸಚಿವ ವಿ ಸೋಮಣ್ಣ ಕಾಂಗ್ರೆಸ್​ಗೆ ಸೇರುತ್ತಾರಾ ಎನ್ನುವ ರೀತಿಯ ಸುದ್ದಿ ಅನೇಕ ದಿನಗಳಿಂದ ಕೇಳಿ ಬರುತ್ತಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಈ ನಡುವೆಯೇ ಈ ಫೋಟೋ ಕಂಡುಬಂದಿದ್ದು ಚುನಾವಣೆ ಹತ್ತಿರ ಇರುವಾಗ ಅಖಾಡಕ್ಕೆ ಬೆಂಕಿ ಹಾಕಿದಂತೆ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮತ್ತು ಸಚಿವ ವಿ ಸೋಮಣ್ಣ ವಿಮಾನದಲ್ಲಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಪ್ರಯಾಣ ಬೆಳೆಸಿದ್ದು ಇದೀಗ ಆ ಫೋಟೊ ಭಾರಿ ವೈರಲ್​ ಆಗಿದೆ. … Continue reading ವಿ.ಸೋಮಣ್ಣ, ಡಿಕೆಶಿ ಜತೆ ಜತೆಯಲಿ; ಕಾಂಗ್ರೆಸ್​ ಸೇರ್ತಾರಾ ಸಚಿವರು?