ಚಿನ್ನ-ಬೆಳ್ಳಿ ಬೆಲೆಯಲ್ಲಿ ಅಲ್ಪಪ್ರಮಾಣದ ಏರಿಕೆ..ಬೆಲೆ ಎಷ್ಟಿದೆ ಗೊತ್ತಾ?

ನವದೆಹಲಿ: ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆ ಭಾರತೀಯರ ಅತ್ಯಂತ ಪ್ರೀತಿಪಾತ್ರವಾದ ಬೆಳ್ಳಿ-ಬಂಗಾರಕ್ಕೆ ಬೇಡಿಕೆ ಬರುತ್ತಿದೆ. ಪಾತಾಳಕ್ಕಿಳಿದಿದ್ದ ಬೆಲೆ ಮತ್ತೆ ಮೇಲ್ಮುಖ ಮಾಡಿದೆ. ಸೋಮವಾರ( ಆ.5) ಮಲ್ಟಿ ಕಮಾಂಡಿಟಿ ಎಕ್ಸ್ಚೇಂಜ್ (ಎಂಸಿಎ) ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯನ್ನು ದಾಖಲಿಸಿವೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ: ಕವಿತಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನಿರೀಕ್ಷೆಗಿಂತ ವೇಗವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ ಚಿನ್ನದ ಬೆಲೆಯಲ್ಲಿ ಮತ್ತೊಂದು ಬದಲಾವಣೆ ಕಂಡುಬಂದಿದೆ. ಚಿನ್ನದ ಬೆಲೆ ಈಗಾಗಲೇ 70 ಸಾವಿರ ರೂಪಾಯಿ ದಾಟಿದ್ದು, ಬೆಳ್ಳಿ ಕೂಡ ಅದೇ ಹಾದಿಯಲ್ಲಿ ಮುಂದುವರಿಯುತ್ತಿದೆ.

ದೇಶದಲ್ಲಿ 22ಕ್ಯಾರೆಟ್​ ಚಿನ್ನದ ಬೆಲೆ 64,700ರೂ./10 ಗ್ರಾಂ. 24ಕ್ಯಾರೆಟ್​ ಚಿನ್ನದ ಬೆಲೆ 70,580ರೂ./10 ಗ್ರಾಂಗೆ ಇದೆ. ಬೆಳ್ಳಿಯು 851ರೂ. ಅಥವಾ ಶೇ.1.03 ರಷ್ಟು ಅಲ್ಪ ಏರಿಕೆಯಾಗಿದೆ. ಹಿಂದಿನ 82,493ರೂ.ಗೆ ವಿರುದ್ಧವಾಗಿ ಎಂಸಿಎಕ್ಸ್‌ನಲ್ಲಿ ಕೆಜಿಗೆ 83,344ರೂ.ದಾಖಲಿಸಿದೆ.

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯ ಹಿಂದೆ ಅಂತಾರಾಷ್ಟ್ರೀಯ ಕಾರಣಗಳು ಸ್ಪಷ್ಟವಾಗಿವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಮೆಕ್ಸ್ ಸೂಚ್ಯಂಕದಲ್ಲಿ ಒಂದು ಔನ್ಸ್ (ಸುಮಾರು 31 ಗ್ರಾಂ) ಚಿನ್ನದ ಬೆಲೆ 2400 ಡಾಲರ್ ದಾಟಿದೆ. ಈಗ ಈ ಪ್ರವೃತ್ತಿ ಮುಂದುವರೆದಿದೆ. ಇದರ ಪರಿಣಾಮ ದೇಸೀಯ ಮಾರುಕಟ್ಟೆಗಳ ಮೇಲೂ ಖಂಡಿತಾ ಗೋಚರಿಸುತ್ತದೆ. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ.

ಕಳೆದ ತಿಂಗಳು ಬಜೆಟ್ ಮಂಡನೆ ವೇಳೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು. ಚಿನ್ನದ ಆಮದು ಮೇಲಿನ ಸುಂಕವನ್ನು ಕಡಿತಗೊಳಿಸಿದ ನಂತರ ಸುಮಾರು 4,000 ಸಾವಿರ ರೂಪಾಯಿ ಇಳಿಕೆಯಾಗಿತ್ತು. ಆದರೆ ಚಿನ್ನದ ಬೆಲೆ ಶ್ರಾವಣ ಬರುತ್ತಿದ್ದಂತೆ ಮತ್ತೆ ಏರಿಕೆಯಾಗತೊಡಗಿದೆ.

ಪ್ರಸ್ತುತ ಚಿನ್ನದ ಬೆಲೆ 10 ಗ್ರಾಂಗೆ 71 ಸಾವಿರ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದೆ. ಶ್ರಾವಣದಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಆರ್‌ಬಿಐ ಬಡ್ಡಿದರವನ್ನು ಸ್ಥಿರವಾಗಿರಿಸುವ ಸಾಧ್ಯತೆಯಿದ್ದು, ಇದು ಚಿನ್ನದ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಶ್ವದಾದ್ಯಂತ ಹೂಡಿಕೆದಾರರಿಗೆ ಚಿನ್ನ ಸುರಕ್ಷಿತ ಸ್ವರ್ಗ ಎಂದು ಹೇಳಲಾಗುತ್ತದೆ. ಷೇರು ಮಾರುಕಟ್ಟೆಗಳು ಮತ್ತು ರಾಷ್ಟ್ರೀಯ ಆರ್ಥಿಕತೆಗಳು ಕುಸಿಯುತ್ತಿರುವಾಗ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ.

ಸೆನ್ಸೆಕ್ಸ್ ಭಾರಿ ಕುಸಿತ- ಷೇರು ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ!

Share This Article

ಬೆಳಿಗ್ಗೆ ಈ ಹಣ್ಣುಗಳನ್ನು ತಿಂದರೆ ಸಾಕು…ಆರೋಗ್ಯ ಸಮಸ್ಯೆಗಳೆಲ್ಲಾ ದೂರವಾಗುತ್ತವೆ

ಬೆಂಗಳೂರು: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ವೈದ್ಯರು ಕೂಡ ಹಣ್ಣುಗಳನ್ನು…

ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ?

ನವದೆಹಲಿ:  ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಅಲೋವೆರಾವು ಹಲವಾರು…

ಚಹಾ ಕುಡಿಯುವುದರಿಂದ ಹೆಚ್ಚುತ್ತದೆ ಕೊಲೆಸ್ಟ್ರಾಲ್! ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಒಳ್ಳೆಯದಲ್ಲ…

ಬೆಂಗಳೂರು:    ಬೆಳಿಗ್ಗೆ ಚಹಾದೊಂದಿಗೆ ದಿನ ಪ್ರಾರಂಭಿಸುವ ಅನೇಕ ಜನರಿದ್ದಾರೆ. ಸ್ವಲ್ಪ ತಲೆನೋವು ಬಂದರೂ ಟೈಂ ಪಾಸ್…