Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಭಾರತೀಯ ಯೋಧ ಉಗ್ರ ಸಂಘಟನೆ ಸೇರಿದ ಶಂಕೆ

Monday, 16.04.2018, 7:27 PM       No Comments

ಶ್ರೀನಗರ: ಭಾರತೀಯ ಸೇನೆಯಿಂದ ನಾಪತ್ತೆಯಾಗಿದ್ದ ಸೈನಿಕನೋರ್ವ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆ ಸೇರಿದ್ದಾನೆಂದು ಪೊಲೀಸ್​ ಮೂಲ ಸ್ಪಷ್ಟಪಡಿಸಿದೆ.

ಭಾರತೀಯ ಸೇನೆಯ ಲಘು ಪದಾತಿ ದಳದಲ್ಲಿ ( Light Infantry (JAKLI) ) ಕೆಲಸ ಮಾಡುತ್ತಿದ್ದ ಇಡ್ರೀಸ್​ ಮಿರ್​ ಎಂಬ ಯೋಧ ತಿಂಗಳ ಹಿಂದೆ ದಕ್ಷಿಣ ಕಾಶ್ಮೀರದಿಂದ ನಾಪತ್ತೆಯಾಗಿದ್ದ. ಭಾನುವಾರ ನಾಪತ್ತೆಯಾಗಿದ್ದ ಸ್ಥಳೀಯರಿಬ್ಬರ ಜತೆ ಉಗ್ರ ಸಂಘಟನೆ ಸೇರಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ, ಭಾರತೀಯ ಸೇನೆ ಆತ ನಾಪತ್ತೆಯಾಗಿರುವುದನ್ನು ಸ್ಪಷ್ಟಪಡಿಸಿದ್ದರೂ ಉಗ್ರ ಸಂಘಟನೆ ಸೇರಿದ್ದರ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದೆ. ಪೊಲೀಸರ ಪ್ರಕಾರ ಮಿರ್​ನನ್ನು ಜಾರ್ಖಂಡ್​​ಗೆ ನಿಯೋಜಿಸಲಾಗಿತ್ತು. ಅದರ ಬಗ್ಗೆ ಮಿರ್​ ಅತೃಪ್ತಿಗೊಂಡಿದ್ದನು. (ಏಜನ್ಸೀಸ್)

Leave a Reply

Your email address will not be published. Required fields are marked *

Back To Top