ಆ.6ಕ್ಕೆ ಪಾರ್ಕರ್ ಸೋಲಾರ್ ಅನ್ವೇಷಣೆಗೆ ಚಾಲನೆ

ಸೂರ್ಯನ ವಾತಾವರಣ(ಕರೋನಾ) ಅಧ್ಯಯನಕ್ಕಾಗಿ ಕಳೆದ 7 ವರ್ಷಗಳಿಂದ ಸಿದ್ಧತೆ ನಡೆಸಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಮಹತ್ವಾಕಾಂಕ್ಷಿ ಯೋಜನೆ ‘ ಪಾರ್ಕರ್ ಸೋಲಾರ್ ಅನ್ವೇಷಣೆ ’ ಭಾಗವಾದ ರಾಕೆಟ್ ಉಡಾವಣೆಯನ್ನು 2 ದಿನ ಮುಂದೂಡಿದೆ. ಫ್ಲಾರಿಡಾದ ಟಿಟುಸ್​ವಿಲ್ಲೆಯಲ್ಲಿನ ಆಸ್ಟ್ರೋಟೆಕ್ ಬಾಹ್ಯಾಕಾಶ ನೌಕೆ ಅಭಿವೃದ್ಧಿ ಕೇಂದ್ರದಲ್ಲಿ ನಿರ್ವಣಗೊಳ್ಳುತ್ತಿರುವ ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ನಾಸಾ ಹೇಳಿದೆ. ನೌಕೆಯನ್ನು ಹೊತ್ತೊಯ್ಯುವ ಯುನೈಟೆಡ್ ಲಾಂಚ್ ಅಲಯನ್ಸ್ ಡೆಲ್ಟಾ4 – ಹೆವಿ ರಾಕೆಟ್​ಗೆ ನೌಕೆಯ ಸಂಪರ್ಕ ಕಲ್ಪಿಸುವ ವ್ಯವಸ್ಥೆಯ ಪರಿಶೀಲನೆ ಅಗತ್ಯವಿದೆ. ಆಗಸ್ಟ್ 6ರ ಮುಂಜಾನೆ 4.08ಕ್ಕೆ ಉಡಾವಣೆ ಮಾಡಲಾಗುವುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. 1958ರಲ್ಲಿ ಸೌರವ್ಯೂಹದ ಹೊರಪದರದಲ್ಲಿ ಪ್ರಯಾಣಿಸುವ ಸೌರ ಗಾಳಿಯ ಪ್ರಭಾವವನ್ನು ಅನ್ವೇಷಿಸಿದ ವಿಜ್ಞಾನಿ ಯುಗೀನ್ ಪಾರ್ಕರ್ ಸ್ಮರಣಾರ್ಥ ಯೋಜನೆಗೆ ಪಾರ್ಕರ್ ಸೋಲಾರ್ ಎಂದು ನಾಮಕರಣ ಮಾಡಲಾಗಿದೆ.

7 ಬಾರಿ ಶುಕ್ರನಿಗೂ ಪ್ರದಕ್ಷಿಣೆ!

ಒಂದು ಗ್ರಹದ ಅಧ್ಯಯನಕ್ಕೆ ಅದರ ಕಕ್ಷೆಯಲ್ಲಿ ಅಥವಾ ವಾತಾವರಣದಲ್ಲಿ ಹಲವು ಕಾಲದವರೆಗೆ ಸುತ್ತುವುದು ನೌಕೆಗೆ ಅನಿವಾರ್ಯವಾಗುತ್ತದೆ. ಆ ಕಕ್ಷೆಯಲ್ಲಿ ತಿರುಗುವಾಗ ಹಲವು ಬಾಹ್ಯಾಕಾಶ ವಸ್ತುಗಳು ನೌಕೆಗೆ ಡಿಕ್ಕಿ ಹೊಡೆಯಬಹುದು. ಅನ್ಯಗ್ರಹಗಳು, ಬಾಹ್ಯಾಕಾಶದಲ್ಲಿನ ವಸ್ತುಗಳು ನೌಕೆ ಮೇಲೆ ಪ್ರಭಾವ ಬೀರಿ ತಮ್ಮತ್ತ ಸೆಳೆಯಬಹುದು. ಇಂಥ ಸಮಯದಲ್ಲಿ ವಿಜ್ಞಾನಿಗಳ ಲೆಕ್ಕಾಚಾರ ತಪು್ಪತ್ತದೆ. ಆದರೆ ಯಾನ್​ಪಿಂಗ್ ಗುವೊ ಪಾರ್ಕರ್ ಸೋಲಾರ್ ನೌಕೆಯನ್ನು ಸೂರ್ಯನ ಸುತ್ತಲೇ ಇರುವಂತೆ ಕಾಯ್ದುಕೊಳ್ಳಲು ಶುಕ್ರ ಗ್ರಹದ ಪ್ರಭಾವ ಬಳಸಲಿದ್ದಾರೆ. ಹಾಗಾಗಿಯೇ ಸೂರ್ಯನ ಸುತ್ತುವ ಜತೆಗೆ ಏಳು ಬಾರಿ ನೌಕೆ ಶುಕ್ರನಿಗೂ ಪ್ರದಕ್ಷಿಣೆ ಬಂದು ತನ್ನ ಅಧ್ಯಯನ ಮಾರ್ಗವನ್ನು ಪುನಃ ಕಾಯ್ದುಕೊಳ್ಳಲಿದೆ.

# 16 ವರ್ಷ ಸೂರ್ಯನ ತಲುಪಲು ಅತಿ ಕಡಿಮೆ ಅವಧಿಯ ರಾಕೆಟ್ ಮಾರ್ಗದ ಬಗ್ಗೆ ಸಂಶೋಧನೆ

# 7 ವರ್ಷ ಸೂರ್ಯನ ಸುತ್ತಲಿದೆ ಗಗನನೌಕೆ

Leave a Reply

Your email address will not be published. Required fields are marked *