ಪಿರಿಯಾಪಟ್ಟಣ: ನೈಜ ಸಂಪನ್ಮೂಲಗಳ ಬಳಕೆಯಿಂದ ಹೆಚ್ಚಿನ ಆವಿಷ್ಕಾರಗಳು ಆಗಬೇಕಿದೆ ಎಂದು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ರಘುಪತಿ ತಿಳಿಸಿದರು.
ಪಟ್ಟಣದ ಮಾನಸ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಮತ್ತು ಕ್ರೀಡಾ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ನೀರು ಇನ್ನೂ ದುಬಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಳೆ ನೀರನ್ನು ಇಂಗು ಗುಂಡಿ ಮಾಡಿ ಸಂರಕ್ಷಿಸುವ ಮೂಲಕ ಕುಡಿಯುವ ನೀರನ್ನಾಗಿ ಉಪಯೋಗಿಸಲು ಎಲ್ಲರೂ ಮುಂದಾಗಬೇ ಕಿದೆ. ಜತೆಗೆ ಸೌರಶಕ್ತಿಯನ್ನು ಹೆಚ್ಚಾಗಿ ಬಳಕೆ ಮಾಡಿದಲ್ಲಿ ನೈಸರ್ಗಿಕ ಸಂಪತ್ತು ಉಳಿಯಲಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಆಗಬೇಕಿದೆ ಎಂದರು.
ಶಾಲೆ ಮುಖ್ಯಶಿಕ್ಷಕ ಪುಟ್ಟೇಗೌಡ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮ ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ನಟರಾಜ್, ನಿರ್ದೇಶಕರಾದ ಸ್ವರೂಪ್, ರೇಖಾ ಸ್ವರೂಪ್, ವಿಶಾಲಾಕ್ಷಮ್ಮ ,ಶಿಕ್ಷಕರಾದ ಗಿರೀಶ್ ಮತ್ತಿತರರು ಹಾಜರಿದ್ದರು.