18 C
Bangalore
Friday, December 6, 2019

ಅರಿವಿನ ಆಗರ ಶ್ರೀ ಖಾಸ್ಗತೇಶ್ವರ

Latest News

ಟಿ20 ವಿಶ್ವಕಪ್​ಗೆ ಕೆಲ ಯೋಚನೆಗಳಿವೆ

ಕೋಲ್ಕತ: ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಲುವಾಗಿ ನನ್ನಲ್ಲಿ ತಂಡದ ಕುರಿತಾಗಿ ಕೆಲ ಯೋಚನೆಗಳಿವೆ. ಅದನ್ನು ತಂಡದ ನಾಯಕ ವಿರಾಟ್...

ಬೇಸಿಗೆಗೆ ಸಿಗಲಿದೆ ನೀರು

ಸಂದೀಪ್ ಸಾಲ್ಯಾನ್ ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಬೇಸಿಗೆಯಲ್ಲೂ ನಿರಂತರ ನೀರು...

ನಿರ್ಮೋಹದಿಂದ ಆತ್ಮಕ್ಕೆ ಲಾಭ

ತನುವ ತಣಿಸುವ ತುತ್ತು ಮನಕೆ ನಂಜಾದೀತು | ಮನಮೋಹ ಜೀವಕ್ಕೆ ಗಾಳವಾದೀತು || ಅನುಭವದ ಪರಿಣಾಮವೊಂದರಿಂದೊಂದಕ್ಕೆ || ಗಣಿಸಾತ್ಮ ಲಾಭವನು - ಮಂಕುತಿಮ್ಮ || ‘ದೇಹಪೋಷಣೆಗೆ ಸೇವಿಸುವ ಆಹಾರ ಮನಕ್ಕೆ ವಿಷವಾದೀತು....

19ರ ವಯಸ್ಸು ನಾನ್-ಸೆನ್ಸು

ಹದಿಹರೆಯದಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸುವುದು ಎಂಬುದೇ ಪಾಲಕರಿಗೆ ತಲೆನೋವಾಗುತ್ತದೆ. ಅದರಲ್ಲೂ 19ನೇ ವಯಸ್ಸಿಗೆ ಕಾಲಿಟ್ಟ ಮಕ್ಕಳು ತಮ್ಮದೇ ಲೋಕದಲ್ಲಿ ತೇಲುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಪ್ರೀತಿ ಚಿಗುರೊಡೆದರೆ...

ಅಮೃತ ಬಿಂದು

ಘೃತಂ ದಧಿ ಪಯಸ್ತಕ್ರಂ ಮಾಹಿಷಂ ಚಾವಿಕಂ ತ್ಯಜೇತ್ | ಗವ್ಯಂ ತು ಸರ್ದಾ ಗ್ರಾಹ್ಯಂ ರಸಶುದ್ಧಿರಿಯಂ ಮತಾ || ಎಮ್ಮೆ ಮತ್ತು ಕುರಿಗಳ ಹಾಲು, ಮೊಸರು, ಮಜ್ಜಿಗೆ,...

| ಪ್ರಶಾಂತ್​ ರಿಪ್ಪನ್​ಪೇಟೆ

ಮನುಷ್ಯಜೀವನದ ಸಾರ್ಥಕ್ಯಕ್ಕೆ ಜ್ಞಾನ ಅತ್ಯಂತ ಆವಶ್ಯಕ. ಜ್ಞಾನದ ಮೂಲವೇ ಗುರು. ಅಂತಹ ಗುರುವಿನ ಮಾರ್ಗದರ್ಶನದಲ್ಲಿ ಆತ್ಮಸಾಕ್ಷಾತ್ಕಾರ ಪಡೆದ ಹಲವು ಉದಾಹರಣೆಗಳು ಇತಿಹಾಸದಲ್ಲಿವೆ. ಆದರೆ ಗುರುವಿಲ್ಲದೆ ಅರಿವಿನ ಆಗರವಾದ ಅಪರೂಪದ ಶಿವಯೋಗಿ ಶ್ರೀ ಖಾಸ್ಗತೇಶ್ವರ ಸ್ವಾಮಿಗಳು.

ಮಠದ ಇತಿಹಾಸ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಶಿವಯೋಗಿಗಳು ಈ ಭಾಗದ ಭಕ್ತರ ಪಾಲಿಗೆ ನಡೆದಾಡುವ ದೇವರು. ಖಾಸ್ಗತ ಎಂಬ ಪದದ ಅರ್ಥವೇ ಗುರುವಿಲ್ಲದೆ ತನ್ನನ್ನು ತಾನು ಅರಿತವನು, ಆತ್ಮಸಾಕ್ಷಾತ್ಕಾರ ಮಾಡಿಕೊಂಡವನು ಎಂದು. ಸ್ವತಃ (ಖಾಸ), ಸದ್ಗತಿ (ಗತಿ) ಪಡೆದವನು ಎಂದರ್ಥ. ಐದು ಶತಮಾನಗಳ ಇತಿಹಾಸ ಹೊಂದಿರುವ ತಾಳಿಕೋಟೆ ವಿರಕ್ತಮಠವು ಇಲ್ಲಿಯವರೆಗೆ 14 ಪೀಠಾಧಿಪತಿಗಳನ್ನು ಕಂಡಿದೆ. ಇಂತಹ ಸುದೀರ್ಘ ಪರಂಪರೆಯಲ್ಲಿ 13ನೆಯ ಪೀಠಾಧಿಪತಿ ಶ್ರೀ ಖಾಸ್ಗತೇಶ್ವರ ಸ್ವಾಮಿಗಳು.

ಬಾಗಲಕೋಟೆ ಜಿಲ್ಲೆ ಶಿರೂರು ಗ್ರಾಮದ ಸಂಗಯ್ಯ ಮತ್ತು ನೀಲಮ್ಮ ದಂಪತಿಯ ಪುಣ್ಯಸಂಜಾತರಾಗಿ 1863ರಲ್ಲಿ ಜನಿಸಿದ ಖಾಸ್ಗತೇಶ್ವರ ಸ್ವಾಮಿಗಳಿಗೆ ಕೇವಲ 13ನೇ ವಯಸ್ಸಿನಲ್ಲಿಯೇ ಪಟ್ಟಾಧಿಕಾರವಾಯಿತು. ನಂತರ ಶ್ರೀಮಠದ ಭಿಕ್ಷಪ್ಪಯ್ಯನ ಗದ್ದುಗೆಯಲ್ಲಿ (ತಪಸ್ಸಿನ ಗದ್ದುಗೆ) ಆರು ತಿಂಗಳು ಅನುಷ್ಠಾನವನ್ನುಗೈದು ಆಧ್ಯಾತ್ಮಿಕಶಕ್ತಿ ಸಂಪಾದಿಸಿದರು. ಖಾಸ್ಗತೇಶ್ವರರ ಮೊದಲ ಹೆಸರು ವಿರಕ್ತಪ್ಪ. ಅವರು ಲೋಕಸಂಚಾರ ಮಾಡುತ್ತ ಹುಬ್ಬಳ್ಳಿಗೆ ಬಂದಾಗ ಆರೂಢ ಪರಂಪರೆಯ ಗುರು ಶ್ರೀ ಸಿದ್ಧಾರೂಢರ ದರ್ಶನವಾಯಿತು. ಶಿವಯೋಗಿಗಳನ್ನು ಕಂಡ ಸಿದ್ಧಾರೂಢರು; ‘ಕಾಮ, ಕ್ರೋಧಾದಿ ಅರಿಷಡ್ವರ್ಗಗಳನ್ನು ಗೆದ್ದಿರುವ ನೀನು ಸ್ವಯಂ ಸದ್ಗತಿ ಹೊಂದುವೆ’ ಎಂದು ಹೇಳಿ ಖಾಸ್ಗತ ಎಂಬ ಬಿರುದನ್ನು ನೀಡಿದರು. ಆ ನಂತರ ಶ್ರೀಗಳು ಖಾಸ್ಗತೇಶ್ವರ ಶಿವಯೋಗಿ ಎಂದೇ ಪ್ರಸಿದ್ಧರಾದರು.

ಬಾಲ್ಯದಿಂದಲೂ ಅಧ್ಯಾತ್ಮದ ಒಲವು ಹೊಂದಿದ್ದ ಶ್ರೀಗಳು ಧಾರ್ವಿುಕ ಸಾಧನೆಯ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿ ಹೊಂದಿದ್ದರು. ಸ್ವತಃ ಮುಕ್ತಿ ಫೌಜ್ ಎಂಬ ಸಾಮಾಜಿಕ ನಾಟಕವೊಂದನ್ನು ಬರೆದು ಅಭಿನಯಿಸಿದ್ದರು. ಸಾಮಾಜಿಕ ಅರಿವು ಮೂಡಿಸುವ ಹಲವು ಕಾರ್ಯಗಳನ್ನೂ ಖಾಸ್ಗತೇಶ್ವರರು ಮಾಡಿದ್ದಾರೆ. ಕಾಲರಾ, ಪ್ಲೇಗ್​ನಂತಹ ಸಾಂಕ್ರಾಮಿಕ ರೋಗಗಳು ತಲೆದೋರಿದಾಗ ಸ್ವತಃ ಮುಂದೆ ನಿಂತು ಗ್ರಾಮಸ್ಥರಿಗೆ ಆರೈಕೆ ಮಾಡಿ, ಮೃತರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಜತೆಗೆ ಮುಸ್ಲಿಂ ಬಾಂಧವರ ಮಸೀದಿಯಲ್ಲಿ ಆಚರಿಸುತ್ತಿದ್ದ ಎಲ್ಲ ಹಬ್ಬಗಳಲ್ಲೂ ಪಾಲ್ಗೊಂಡು ಪ್ರಾರ್ಥಿಸುತ್ತಿದ್ದರು. ಖಾಸ್ಗತೇಶ್ವರರನ್ನು ಸರ್ವ ಜನಾಂಗದವರೂ ಭಕ್ತಿಯಿಂದ ಆರಾಧಿಸುತ್ತಾರೆ. ಇಂದಿಗೂ ತಾಳಿಕೋಟೆಯಲ್ಲಿ ಖಾಸ್ಗತೇಶ್ವರ ಮಠ ಮತ್ತು ಮಸೀದಿ ಒಂದೇ ಗೋಡೆಯ ಅಕ್ಕಪಕ್ಕದಲ್ಲಿದೆ. ಇಲ್ಲಿ ಯಾವುದೇ ಧರ್ಮ ಸಂಘರ್ಷವಿಲ್ಲದೆ ಉಭಯ ಕೋಮಿನವರು ಸಮನ್ವಯದಿಂದ ಹಬ್ಬ, ಜಾತ್ರೆಗಳನ್ನು ಆಚರಿಸುತ್ತಾರೆ.

ಭೌತಿಕವಾಗಿ ಕೇವಲ 33 ವರ್ಷ ಜೀವಿಸಿದ್ದ ಖಾಸ್ಗತೇಶ್ವರರು 1896ರಲ್ಲಿ ಲಿಂಗೈಕ್ಯರಾದರು. ಅವರ ನಂತರ 14ನೇ ಪೀಠಾಧಿಪತಿಗಳಾದ ವಿರಕ್ತ ಮಹಾಸ್ವಾಮಿಗಳು ಈ ಪರಂಪರೆಯನ್ನು ಮುಂದುವರಿಸಿದ್ದು, ಸದ್ಯ ಪೀಠಕ್ಕೆ ಶ್ರೀಸಿದ್ಧಲಿಂಗ ದೇವರನ್ನು ಉತ್ತರಾಧಿಕಾರಿಗಳಾಗಿ ನೇಮಿಸಲಾಗಿದೆ.

ಗೋಪಾಲ ಕಾವಲಿ ಉತ್ಸವ: ಶ್ರೀ ಖಾಸ್ಗತೇಶ್ವರ ಸ್ವಾಮಿಗಳು ಕಾಶಿ, ಶ್ರೀಶೈಲ, ಗೋಕರ್ಣ ಹೀಗೆ ಲೋಕಸಂಚಾರ ಗೈಯುತ್ತ ಪಂಡರಪುರಕ್ಕೆ ಬಂದರು. ಅಲ್ಲಿನ ಗೋಪಾಲ ಕಾವಲಿ ಉತ್ಸವವನ್ನು ನೋಡಿ ಶ್ರೀಮಠದ ಜಾತ್ರೆಯ ವೇಳೆ ಗೋಪಾಲ ಕಾವಲ ಉತ್ಸವ ಆರಂಭಿಸಿದರು. ಕರ್ನಾಟಕದ ಮಟ್ಟಿಗೆ ಇದು ಅಪರೂಪದ ಉತ್ಸವ. ಗೋಪಾಲ ಕಾವಲಿ ಉತ್ಸವ ಎಂದರೆ ಹಸುವಿನ ಹಾಲು-ಮೊಸರು ಬೆರೆಸಿದ ಪಂಚಾಮೃತವನ್ನು ಮಡಕೆಯಲ್ಲಿ ಕಟ್ಟಿ ತೂಗು ಹಾಕಿರುತ್ತಾರೆ. ಜಾತ್ರೆಯ ದಿನ ಬೆಳಗಿನ ಜಾವ ಈ ಮಡಕೆಯನ್ನು ಒಡೆಯಲಾಗುತ್ತದೆ. ಆಗ ಅದರಲ್ಲಿದ್ದ ಪಂಚಾಮೃತ ಇಡೀ ಮಠದ ಪ್ರಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರ ಮೇಲೆ ಸಿಡಿಯುತ್ತದೆ. ಹೀಗೆ ಪಂಚಾಮೃತ ಮೈಮೇಲೆ ಬಿದ್ದರೆ ಅವರ ಎಲ್ಲ ಪಾಪಗಳು ನಾಶವಾಗಿ ಜೀವನದಲ್ಲಿ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ಕ್ಷಣಕ್ಕಾಗಿ ಇಡೀ ರಾತ್ರಿ ಭಕ್ತರು ಕಾಯುತ್ತಾರೆ. ಪ್ರತಿವರ್ಷ ಆಷಾಢಮಾಸದ ದ್ವಾದಶಿಯಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಈ ಉತ್ಸವ ಜರುಗಲಿದ್ದು, ಈ ವರ್ಷ ಇದೇ ಜು. 24ರಂದು ಗೋಪಾಲ ಕಾವಲಿ ಉತ್ಸವ ನಡೆಯಲಿದೆ. ಏಳು ದಿನ ನಿರಂತರ ಭಜನಾ ಸಪ್ತಾಹ ನಡೆಯಲಿದೆ. 25ರಂದು ಬೆಳಗ್ಗೆ ಆನೆ ಮೆರವಣಿಗೆ, ಸಂಜೆ ರಥೋತ್ಸವ ನಡೆಯಲಿದೆ. ಬರುವ ಭಕ್ತರಿಗೆ ಶ್ರೀಮಠದಿಂದ ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ.

Stay connected

278,727FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...