ಇಂದು ಸೋಜಗ-2 ಕೃತಿ ಲೋಕಾರ್ಪಣೆ: ವಿಜಯವಾಣಿ ಸಂಸ್ಕೃತಿ ಪುರವಣಿಯಲ್ಲಿ ಪ್ರಕಟಿತ ಲೇಖನಗಳ ಗುಚ್ಛ

ಬೆಂಗಳೂರು: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಷನ್ ಹಾಗೂ ಶ್ರೀ ಶೈಲ ಜಗದ್ಗುರುಗಳವರ ಕಾರ್ಯಕ್ರಮ ಸೇವಾ ಸಮಿತಿ ವತಿಯಿಂದ ಗುರುಪೌರ್ಣಿಮೆ ಮಹೋತ್ಸವದ ಅಂಗವಾಗಿ ಶುಕ್ರವಾರ (ಜು.12) ಏರ್ಪಡಿಸಿರುವ ಸಮಾರಂಭದಲ್ಲಿ ಪತ್ರಕರ್ತ ಪ್ರಶಾಂತ್ ರಿಪ್ಪನ್​ಪೇಟೆ ವಿರಚಿತ ‘ಸೋಜಗ-2’ (ವಿಜಯವಾಣಿಯಲ್ಲಿ ಪ್ರಕಟಿತ ಅಂಕಣ ಬರಹಗಳ ಸಂಕಲನ) ಕೃತಿ ಬಿಡುಗಡೆಗೊಳ್ಳಲಿದೆ.

ಶ್ರೀಶೈಲ ಮಹಾಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿರುವ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ದಿಗ್ವಿಜಯ 247 ನ್ಯೂಸ್’ ಸಂಪಾದಕ ಸುಭಾಷ್ ಹೂಗಾರ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ರಾಜಾಪುರದ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಡೆಮಠ, ನಾಗಲಾಪುರ ಮಠ, ಪುರಿಗಾಲಿ ಮಠ ಹಾಗೂ ಬೆಳ್ಳಾವಿ ಮಠಗಳ ಶ್ರೀಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದಿಗ್ವಿಜಯ 247 ನ್ಯೂಸ್ ಸುದ್ದಿವಾಹಿನಿ ಕಾರ್ಯಕ್ರಮ ನಿರ್ವಪಕರಾಗಿರುವ ಪ್ರಶಾಂತ್ ರಿಪ್ಪನ್​ಪೇಟೆ ಅವರ ಲೇಖನಗಳ ಸಂಪಾದಿತ ಕೃತಿ ಈಗಾಗಲೇ ಪ್ರಕಟವಾಗಿತ್ತು. ಇದೀಗ ಸೋಜಗ ಅಂಕಣದಲ್ಲಿ ಪ್ರಕಟಗೊಂಡಿರುವ ಲೇಖನಗಳ ಹಾಗೂ ಇನ್ನಿತರ ಸಾಂರ್ದಭಿಕ ಲೇಖನಗಳನ್ನು ಸಂಗ್ರಹಿಸಿ ಸೋಜಗ-2 ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ. ‘ಸಂಸ್ಕೃತಿ’ ಪುರವಣಿಯ ಜನಪ್ರಿಯ ಅಂಕಣವಾಗಿರುವ ‘ಸೋಜಗ’ ಅಂಕಣದಲ್ಲಿ ನಾಡಿನ ಕೌತುಕ, ಧಾರ್ವಿುಕ ಆಚಾರ ವಿಚಾರಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ಲೇಖನಗಳು ಪ್ರಕಟವಾಗುತ್ತಿವೆ.

Leave a Reply

Your email address will not be published. Required fields are marked *