ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ: ತಾಲೂಕಿನ ದೇಸೂರ ಗ್ರಾಮದ ಹೊರ ವಲಯದಲ್ಲಿ ನಡೆಯುತ್ತಿರುವ ಖಾನಾಪೂರ-ಬೆಳಗಾವಿ ರಸ್ತೆ ಕಾಮಗಾರಿಯಲ್ಲಿ ಮಣ್ಣಿನ ಗುಡ್ಡ ಕುಸಿದು ಜಾರ್ಖಂಡ್ ಮೂಲದ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅರ್ಜುನ ಸಿಂಗ್(21),ದುರ್ಗೆಶ ಕುಮಾರ (22), ಸುಖಾನ (26) ಮೃತ ಕಾರ್ಮಿಕರು.
ತಾಲೂಕಿನ ದೇಸೂರ ಗ್ರಾಮದ ಬಳಿ ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿ ನಾಲ್ಕು (ಎ) ದಲ್ಲಿ ಖಾನಾಪೂರ- ಬೆಳಗಾವಿ ರಸ್ತೆಯಲ್ಲಿ ಸೇತುವೆ ನಿರ್ಮಿಸಲು ಮಣ್ಣು ಸಂಗ್ರಹಿಸಿದ್ದರು. ಈ ವೇಳೆ ಮಣ್ಣು ತೆಯುವ ಸಂದರ್ಭದಲ್ಲಿ ಏಕಾಏಕಿ ಕುಸಿದ್ದಿರಿಂದ ಕಳೆದ ಭಾಗವದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ.

ಈಗಾಗಲೇ ಇಬ್ಬರು ಕಾರ್ಮಿಕರ ಮೃತ ಶವಗಳು ಹೊರ ತೆಗೆಯಲಾಗಿದ್ದು, ಇನ್ನೊಬ್ಬ ಕಾರ್ಮಿಕನ ಶವ ಹೊರ ತೆಗೆಯಲು ಅಗ್ನಿಶಾಮ ಕ ಸಿಬ್ಬಂದಿ ಜೆಸಿಬಿ ಮೂಲಕ ಪ್ರಯತ್ನಿಸಲಾಗುತ್ತಿದೆ. ಮಣ್ಣಿನ ಕೆಳ ಭಾಗದಲ್ಲಿ ಎಷ್ಟು ಕಾರ್ಮಿಕರಿದ್ದಾರ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *