ಉಗ್ರರ ಬಗ್ಗೆ ಕಾಂಗ್ರೆಸ್​ ಮೃದುಧೋರಣೆ ತೋರಿದ್ದೇ ಭಯೋತ್ಪಾದನಾ ದಾಳಿ ಹೆಚ್ಚಾಗಲು ಕಾರಣ: ಪ್ರಧಾನಿ ಟೀಕೆ

ಅಮ್ರೋಹಾ (ಉತ್ತರ ಪ್ರದೇಶ): ಕಾಂಗ್ರೆಸ್​, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜಪಕ್ಷ ಉಗ್ರರ ಬಗ್ಗೆ ಮೃದು ಧೋರಣೆ ಅನುಸರಿಸಿದ್ದರಿಂದ, ದೇಶದಲ್ಲೆಡೆ ಭಯೋತ್ಪಾದನಾ ದಾಳಿಗಳು ಹೆಚ್ಚಾಗಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಆದರೆ, ಐದು ವರ್ಷಗಳ ಹಿಂದೆ ನೀವೆಲ್ಲರೂ ದೆಹಲಿಯಲ್ಲಿ ಕಾವಲುಗಾರನನ್ನು ನೇಮಿಸಿದಿರಿ. ನರಕಕ್ಕೆ ಹೋದರೂ ಮೋದಿ ಬಿಡುವುದಿಲ್ಲ ಎಂಬ ಭೀತಿ ಉಗ್ರರಲ್ಲಿದೆ. ಆದ್ದರಿಂದ, ಈಗ ದೇಶದೆಲ್ಲಡೆ ಭಯೋತ್ಪಾದನಾ ದಾಳಿಗಳು ಕಡಿಮೆಯಾಗಿವೆ ಎಂದು ಹೇಳಿದರು.

ಉಗ್ರರೊಂದಿಗೆ ಮಾತುಕತೆ ನಡೆಸಬೇಕಾ ಅಥವಾ ಅವರನ್ನು ಜೈಲಿಗಟ್ಟಬೇಕಾ? ದುರುದೃಷ್ಟವಶಾತ್​, ಉಗ್ರರ ವಿರುದ್ಧ ಅವರದ್ದೇ ಭಾಷೆಯಲ್ಲಿ ಮಾತನಾಡಿದರೆ ನಮ್ಮ ದೇಶದ ಕೆಲಜನರಿಗೆ ಅದು ಸಹ್ಯವಾಗುವುದಿಲ್ಲ. ಹಿಂಸಾವಾದಿಗಳಿಗೆ ಆಶ್ರಯ ನೀಡಿರುವುದಕ್ಕಾಗಿ ಜಾಗತಿಕವಾಗಿ ಪಾಕಿಸ್ತಾನ ಬೆತ್ತಲಾಗುತ್ತಿದ್ದರೆ, ಇವರು ಪಾಕ್​ ಪರ ವಹಿಸಿ ಮಾತನಾಡುತ್ತಾರೆ. ಇಂತಹ ಮೃದು ಧೋರಣೆ ಉಗ್ರರಿಗೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.