ಸವಣೂರ: ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ನ ಬಿ-317ದ ಅಧಿಕಾರಿ ಎಸ್.ಕೆ. ಮುದಗಲ್ ಹೇಳಿದರು.
ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸವಣೂರ ಟೌನ್ ಲಯನ್ಸ್ ಕ್ಲಬ್ನ 2024-25ನೇ ಸಾಲಿನ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಆಪ್ ಸವಣೂರ ಟೌನ್ ನೂತನ ಅಧ್ಯಕ್ಷರಾಗಿ ನಂದಿಕೇಶ್ವರ ಹಾವಣಗಿ, ಉಪಾಧ್ಯಕ್ಷರಾಗಿ ಡಾ. ಡಿ.ಎನ್. ಗುಂಜಳ, ಕಾರ್ಯದರ್ಶಿಯಾಗಿ ವಿರೂಪಾಕ್ಷಪ್ಪ ಸಿಂಧೂರ, ಖಜಾಂಚಿಯಾಗಿ ಮೋಹನ ರಾಯ್ಕರ್, ಬೋರ್ಡ್ ಆಫ್ ಡೈರೆಕ್ಟರ್ಸ್ ಎಸ್.ಎಂ. ಗಡೆಪ್ಪನವರ, ಸಿ.ಸಿ. ಅಂಗಡಿ, ಎ.ಎ. ಜಹಾಂಗೀರ, ಬಿ.ಜಿ. ಸಿಂಧೂರ, ಟಿ.ಕೆ. ಬಿರಾದಾರ, ಡಾ.ಎಂ.ವ್ಹಿ. ತೆಗ್ಗಿಹಳ್ಳಿ ಅಧಿಕಾರ ಸ್ವೀಕರಿಸಿದರು. ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಗುರುಬಳಗದ ಸದಸ್ಯರು, ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಚಾರ್ಯ ಎ.ಐ. ಬೆಲ್ಲದ ಕಾರ್ಯಕ್ರಮ ನಿರ್ವಹಿಸಿದರು.ಘಿ