More

    ಸಾಮಾಜಿಕ ಜಾಲತಾಣದಲ್ಲಿ ಸೋಲಿನ ಚರ್ಚೆ

    ಮುದಗಲ್: ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಸೋಲಿನ ಕುರಿತು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿದ್ದಾರೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್ ಬಳಕೆದಾರರ ಮೈಕ್ರೋಫೋನ್ ದುರ್ಬಳಕೆ?; ವಾಟ್ಸ್​ಆ್ಯಪ್​ ವಿಶ್ವಾಸಾರ್ಹ ಜಾಲತಾಣವಲ್ಲ ಎಂದ ಮಸ್ಕ್

    ಡಿ.ಎಸ್.ಹೂಲಗೇರಿ 2,709 ಮತಗಳಿಂದ ಪರಾಭವಗೊಂಡು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದ್ದಾರೆ. ಸ್ವಲ್ಪ ಮತಗಳಿಂದ ಸೋತಿರುವ ಹೂಲಗೇರಿ, ಸುದ್ದಿಗೋಷ್ಠಿ ನಡೆಸಿ ಸೋಲಿಗೆ ಪಕ್ಷದಲ್ಲಿನ ಮುಖಂಡರೆ ಕಾರಣ ಎಂದು ದೂರಿದ್ದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಹೂಲಗೇರಿ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಿದೆ.

    ಡಿ.ಎಸ್.ಹೂಲಗೇರಿ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಇರುವ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು ಹೆಸರಿನ ವಾಟ್ಸಾೃಪ್ ಗ್ರೂಪಿನಲ್ಲಿ ಹೂಲಗೇರಿ ನಡೆ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಿದ್ದೆ ನಿಮ್ಮ ಸೋಲಿಗೆ ಕಾರಣ. ಕೆಲಸಕ್ಕೆ ಬಾರದವರಿಗೆ ಮಾನ್ಯತೆ ಕೊಟ್ಟು ಹಗಲು, ರಾತ್ರಿ ದುಡಿದ ಕಾರ್ಯಕರ್ತರ ಮಾತಿಗೆ ಕಿಮ್ಮತ್ತು ಕೊಟ್ಟಿಲ್ಲ. ನಿಮ್ಮ ನಿರ್ಲಕ್ಷವೇ ಸೋಲಿಗೆ ಕಾರಣ ಎಂದಿದ್ದಾರೆ.

    ಗ್ರೂಪಿನಲ್ಲಿರುವ ಮಾಜಿ ಶಾಸಕ ಹೂಲಗೇರಿ ಹಾಗೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೂಲಗೇರಿ ಸಹೋದರನ ಮಗ ಪ್ರವೀಣ ಮತ್ತು ಕಾಂಗ್ರೆಸ್ ಪದಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts