ನಡುರಸ್ತೆಯಲ್ಲೇ ಎಣ್ಣೆ ಕುಡಿದು ಪೊಲೀಸರಿಗೆ ಅವಾಜ್​ ಹಾಕಿದವನ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿ!

ಡೆಹ್ರಾಡೂನ್​: ವಾಹನನಿಬಿಡ ರಸ್ತೆ ಮಧ್ಯದಲ್ಲಿ ಕುಳಿತು ಮದ್ಯ ಸೇವಿಸಿದ್ದಲ್ಲದೆ, ಪೊಲೀಸರಿಗೆ ಬೆದರಿಕೆ ಹಾಕಿರುವ ಇನ್​​ಸ್ಟಾಗ್ರಾಂ ಇನ್ಫ್ಲ್ಯುಯೆನ್ಸರ್ ಬಾಬಿ ಕಟಾರಿಯಾ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್​ ಜಾರಿಯಾಗಿದ್ದು, ಶೀಘ್ರದಲ್ಲೇ ಆತನ ಬಂಧನವಾಗಲಿದೆ. ಮಿ. ಕಟಾರಿಯಾ ಜುಲೈ 28ರಂದು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದ. ರಸ್ತೆ ಮೇಲೆ ಎಂಜಾಯ್​ ಮಾಡುವ ಸಮಯವಿದು ಎಂದು ಅಡಿಬರಹ ನೀಡಿದ್ದ. ವಿಡಿಯೋದಲ್ಲಿ ಡೆಹ್ರಾಡೂನ್​ನ ವಾಹನ ನಿಬಿಡ ರಸ್ತೆಯ ಮಧ್ಯದಲ್ಲೇ ಕುರ್ಚಿ ಮತ್ತು ಟೇಬಲ್​ ಹಾಕಿಕೊಂಡು ಕುಳಿತು ಮದ್ಯ ಸೇವಿಸುತ್ತಿರುವ ದಶ್ಯವಿದೆ. View this … Continue reading ನಡುರಸ್ತೆಯಲ್ಲೇ ಎಣ್ಣೆ ಕುಡಿದು ಪೊಲೀಸರಿಗೆ ಅವಾಜ್​ ಹಾಕಿದವನ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿ!