Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಬೆರಳ ತುದಿಯಲ್ಲಿ ಬೆರಗಿನ ಲೋಕ…

Saturday, 30.06.2018, 3:03 AM       No Comments

| ಸುನೀಲ್ ಬಾರ್ಕೂರ್​

ಇಂಟರ್​ನೆಟ್ ಎಂಬುದು ಈಗ ಸರ್ವಾಂತರ್ಯಾಮಿ. ಅದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಆಗಬಾರದು ಎಂಬ ಕಾರಣಕ್ಕೆ ವಯಸ್ಸಿನ ನಿರ್ಬಂಧ ಹೇರಲಾಗಿದೆ ನಿಜ. ಆದರೂ ಆ ನಿರ್ಬಂಧವನ್ನು ಭೇದಿಸಿ ಕೋಟ್ಯಂತರ ಮಕ್ಕಳು ವಯಸ್ಕರ ಬಳಕೆಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಮಕ್ಕಳಿಗೆ ಎಷ್ಟರಮಟ್ಟಿನ ಸ್ವಾತಂತ್ರ್ಯ ನೀಡಬೇಕೆಂಬುದು ಪಾಲಕರ ಜವಾಬ್ದಾರಿ ಎನ್ನುವುದು ನಿಜವಾದರೂ, ಯಾವ್ಯಾವ ಜಾಲತಾಣಗಳಲ್ಲಿ ವಿಹರಿಸಬೇಕು ಎಂಬುದನ್ನು ಅರಿತುಕೊಳ್ಳುವುದು ಮಕ್ಕಳ ಹೊಣೆಗಾರಿಕೆಯೂ ಹೌದು.

ಬದಲಾವಣೆ ಜಗದ ನಿಯಮ. ಹೊಸ ಹೊಸ ತಂತ್ರಜ್ಞಾನ ಬಂದು ನಮ್ಮೆಲ್ಲರ ಜೀವನ ಶೈಲಿಯೇ ಬದಲಾಗಿದೆ. ಇದಕ್ಕೆ ಸರಿಯಾದ ಉದಾಹರಣೆಗಳೆಂದರೆ ಇಂಟರ್​ನೆಟ್ ಮತ್ತು ಸ್ಮಾರ್ಟ್​ಫೋನ್. ಈ ಆವಿಷ್ಕಾರಗಳು ಜಗತ್ತನ್ನೇ ಬೆರಳ ತುದಿಯಲ್ಲಿ ತಂದು ನಿಲ್ಲಿಸಿವೆ. ಮಾಹಿತಿ ಪಡೆಯುವ ಮತ್ತು ಇತರರ ಜತೆ ಸಂಪರ್ಕ ಸಾಧಿಸುವ ಸಮಯ ನಾವು ಹಿಂದೆಂದೂ ಯೋಚಿಸಿರದ ರೀತಿಯಲ್ಲಿ ಕಡಿತ ವಾಗಿದೆ. ಇದು ನಿಜಕ್ಕೂ ಒಂದು ಅಚ್ಚರಿಯೇ. ಕಳೆದ ಕೆಲವು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆ ವೃದ್ಧಿಯಾಗಿರುವ ವೇಗವೇ ಇಂಟರ್​ನೆಟ್​ನ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಸಾರಿಸಾರಿ ಹೇಳುತ್ತಿದೆ. ಇಂಟರ್​ನೆಟ್ ಬಳಕೆದಾರರ ಸಂಖ್ಯೆಯ ವಿಷಯದಲ್ಲಿ 2016 ರ ವೇಳೆಗೆ 149ನೆ ಸ್ಥಾನದಲ್ಲಿದ್ದ ಭಾರತ, ಈ ಎರಡೇ ವರ್ಷಗಳಲ್ಲಿ ಎರಡನೆ ಸ್ಥಾನಕ್ಕೇರಿದೆ. ಹಿರಿಯರಲ್ಲಿ ಮಾತ್ರವಲ್ಲ, ಮಕ್ಕಳಲ್ಲೂ ಇದು ಜನಪ್ರಿಯವಾಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಗಣತಿಯೊಂದರ ಅಂಕಿಅಂಶಗಳೇ ಸಾಕ್ಷಿ. ಅದರ ಪ್ರಕಾರ ಭಾರತದ ಶಹರಗಳಲ್ಲಿರುವ 6ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 98ರಷ್ಟು ಮಕ್ಕಳು ಇಂಟರ್​ನೆಟ್ ಬಳಸುತ್ತಿದ್ದಾರೆ.

ಯಾವುದೇ ಆವಿಷ್ಕಾರವಿರಲಿ, ಒಳಿತುಗಳೊಡನೆ ಕೆಲವು ಕೆಡಕುಗಳನ್ನೂ ಹೊತ್ತು ತರುತ್ತವೆ. ಇಂಟರ್​ನೆಟ್ ಕೂಡ ಇದಕ್ಕೆ ಹೊರತಲ್ಲ. ಆದರೆ ಬೇರೆ ವಿಷಯಗಳಲ್ಲಿ ಅದು ಸಹನೀಯ ಪ್ರಮಾಣದಲ್ಲಿ ಇರುತ್ತದೆ. ಇಂಟರ್​ನೆಟ್ ವಿಷಯದಲ್ಲಿ ಅದರ ಪ್ರಮಾಣ ಕಳವಳಕಾರಿಯಾಗಿದೆ. ಇಂಟರ್​ನೆಟ್ ತಂದಿರುವ ಕೆಡಕುಗಳಿಗೆ ದಾಸರಾಗುತ್ತಿರುವವರ ಸಂಖ್ಯೆ ಅಷ್ಟು ದೊಡ್ಡದಿದೆ. ಅತಿಯಾದರೆ ಅಮೃತವೂ ವಿಷ ಅಂತಾರಲ್ಲ ಹಾಗೆ. ಮಕ್ಕಳೇ ನೀವು ಈ ವಿಷಯವನ್ನು ಶೀಘ್ರ ಅರಿತುಕೊಂಡಷ್ಟೂ ಒಳ್ಳೆಯದು.

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಫೇಸ್​ಬುಕ್ ತನ್ನ ಸದಸ್ಯರಿಗೆ 13 ವರ್ಷದ ವಯಸ್ಸಿನ ಮಿತಿ ಹೇರಿದೆ. ಅದೇಕೆ ಗೊತ್ತಾ? ಅಮೆರಿಕದಲ್ಲಿ ಮಕ್ಕಳ ಆನ್​ಲೈನ್ ಖಾಸಗಿ ಗೌಪ್ಯತಾ ರಕ್ಷಣಾ ಕಾಯಿದೆಯೊಂದಿದೆ. ಅದರ ಅನ್ವಯ ಹದಿಮೂರು ವರ್ಷದೊಳಗಿನ ಮಕ್ಕಳ ಯಾವುದೇ ಖಾಸಗಿ ವಿಷಯ ಗಳನ್ನು ಇಂಟರ್​ನೆಟ್​ನಲ್ಲಿ ಹಂಚಿಕೊಳ್ಳುವಂತಿಲ್ಲ. ಈ ವಿಷಯಗಳನ್ನು ಅರಿತು ಮಕ್ಕಳ ಅಮಾಯಕತೆಯನ್ನು ಬಂಡವಾಳವನ್ನಾಗಿಸಿಕೊಂಡು ಹಲವು ಕಂಪನಿಗಳು ಅವರನ್ನೇ ಗುರಿ ಮಾಡಿಕೊಳ್ಳುತ್ತಿರುವ ಹಲವು ಪ್ರಕರಣಗಳು ಅಲ್ಲಿ ಬೆಳಕಿಗೆ ಬಂದಿದ್ದರಿಂದ ಈ ರೀತಿ ಮಾಡಲಾಗಿದೆ. ಆದರೆ 2013ರಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದು ಅಲ್ಲಿನ ಆಡಳಿತ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರೇರೇಪಿಸಿತು. ರೆಬೆಕ್ಕಾ ಎಂಬ 12 ವರ್ಷದ ಬಾಲೆ ಸಾಮಾಜಿಕ ಜಾಲತಾಣದಲ್ಲಿ ಅದೇ ವಯಸ್ಸಿನ ತನ್ನಿಬ್ಬರು ಗೆಳತಿಯರ ಕಾಟ ತಾಳಲಾರದೆ ಮನೆಯ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಳು. ಈ ವಿಷಯ ತಿಳಿದು ಜನ ಆಕ್ರೋಶಗೊಂಡಿದ್ದರಿಂದ ಅಲ್ಲಿನ ಆಡಳಿತ ಮಧ್ಯ ಪ್ರವೇಶಿಸಬೇಕಾಯಿತು. ಮಕ್ಕಳಿಗೆ ಇಂಟರ್​ನೆಟ್​ನ ದುಷ್ಪರಿಣಾಮವನ್ನು ಸಾರಿ ಹೇಳಲು ಅಲ್ಲಿ ಪ್ರತಿ ವರ್ಷ ಅಂತರ್ಜಾಲ ಬೆದರಿಕೆ ನಿಮೂಲನಾ ದಿನವನ್ನೂ ಆಚರಿಸಲಾಗುತ್ತಿದೆ.

ಆದರೆ ನಮ್ಮಲ್ಲಿನ್ನೂ ಈ ರೀತಿಯ ಕಟ್ಟುನಿಟ್ಟಾದ ಕಾನೂನುಗಳು ಇರದ ಕಾರಣ ಮಕ್ಕಳೂ ತಮ್ಮ ಜನ್ಮ ದಿನಾಂಕವನ್ನು ತಪ್ಪಾಗಿ ನಮೂದಿಸಿ ಇಂತಹ ಜಾಲತಾಣಗಳಲ್ಲಿ ಸದಸ್ಯರಾಗುತ್ತಿದ್ದಾರೆ. ನಿಮ್ಮ ಗೆಳೆಯರ ಗುಂಪಿನಲ್ಲೇ ಅಂಥವರಿರಬಹುದು. ಈ ರೀತಿಯ ಪ್ರಮಾದಗಳು ಎಂತಹ ದುರಂತಗಳನ್ನು ಹುಟ್ಟುಹಾಕುತ್ತಿವೆಯೆಂಬುದು ನಿಮಗೆ ಗೊತ್ತಾ? ಸರ್ವೆಯೊಂದರ ಪ್ರಕಾರ ಸೈಬರ್ ಕಿರುಕುಳದಲ್ಲಿ ಭಾರತವು ಇಡೀ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ಹೆಚ್ಚಿನ ಕಿರುಕುಳ ಪ್ರಕರಣಗಳು ಫೇಸ್​ಬುಕ್​ನಲ್ಲಿಯೇ ನಡೆದಿವೆ. ತಪ್ಪು ಮಾಹಿತಿ ಕೊಟ್ಟು ಸದಸ್ಯರಾಗಿರುವ ಶೇಕಡಾ 43ರಷ್ಟು ಮಕ್ಕಳು ಇದಕ್ಕೆ ಗುರಿಯಾಗಿದ್ದಾರೆ. ಫೇಸ್​ಬುಕ್​ನಂತಹ ಜಾಲತಾಣಗಳಲ್ಲಿ ಜನ ತಮ್ಮ ಮಾಹಿತಿಯನ್ನು ಗೌಪ್ಯವಾಗಿಟ್ಟು ಅಥವಾ ಉದ್ದೇಶಪೂರ್ವವಾಗಿಯೇ ತಪ್ಪಾಗಿ ನಮೂದಿಸಿ ಇತರರನ್ನು ನಂಬಿಸಲು ಅವಕಾಶವಿರುವುದೇ ಇಂತಹ ಪ್ರಕರಣಗಳಿಗೆ ಮುಖ್ಯ ಕಾರಣ ಎನ್ನುತ್ತಾರೆ ಪರಿಣಿತರು.

ಮಕ್ಕಳೇ ಯಾವುದೇ ಕಾನೂನು- ಕಟ್ಟಳೆಗಳಿರಲಿ ಅವುಗಳನ್ನು ಬಳಸುವವರ ಹಿತ ಕಾಯುವುದಕ್ಕಾಗಿಯೇ ರೂಪಿಸಿರುತ್ತಾರೆ ಎಂಬುದನ್ನು ಯಾವತ್ತೂ ನೆನಪಿಡಿ. ಈ ವಿಷಯ ಫೇಸ್​ಬುಕ್ , ಟ್ವಿಟರ್, ಇನ್ಸಾ ್ಟಗ್ರಾಂನಂತಹ ಆಪ್​ಗಳಿಗೂ ಅನ್ವಯಿಸುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಯ ರೀತಿ , ತಪ್ಪು ಮತ್ತು ಸರಿಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಗಮನಿಸಿ ಈ ನಿಬಂಧನೆಗಳನ್ನು ವಿಧಿಸಲಾಗಿದೆ. ಹೀಗಾಗಿ ಅಂತಹ ಜಾಲತಾಣಗಳ ಸಹವಾಸಕ್ಕೆ ನೀವು ಹೋಗದಿರುವುದೇ ಒಳ್ಳೆಯದು. ಇಂಟರ್​ನೆಟ್ ಎಂಬುದು ಮಾಹಿತಿಯ ಭಂಡಾರ. ಅದನ್ನು ನೀವು ನಿಮ್ಮ ಒಳಿತಿಗಾಗಿ ಬಳಸಬಹುದು. ನೀವು ಮೊಬೈಲ್ ಫೋನ್, ಕಂಪ್ಯೂಟರ್ , ಇಂಟರ್​ನೆಟ್​ನಲ್ಲಿ ಹೆಚ್ಚು ಆಸಕ್ತಿಯುಳ್ಳವರಾಗಿದ್ದರೆ ಮಕ್ಕಳಿಗೆಂದೇ ಮೀಸಲಾಗಿರುವ ಹಲವಾರು ಜಾಲತಾಣಗಳಿವೆ. ಅವುಗಳನ್ನು ಬಳಸಿ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಜ್ಞಾನವನ್ನು ವರ್ಧಿಸಿಕೊಳ್ಳಿ. ಆದರೆ ಯಾವುದಕ್ಕೂ ಸಮಯದ ಮಿತಿ ಎಂಬುದಿರಲಿ. ಮತ್ತೊಮ್ಮೆ ನೆನಪಿಸುತ್ತಿದ್ದೇನೆ… ಅತಿಯಾದರೆ ಅಮೃತವೂ ವಿಷ.

ಹೀಗೆ ಮಾಡಿ

  • ಯಾವುದೇ ಜಾಲತಾಣವನ್ನು ಬಳಸುವ ಮುನ್ನ ಅದು ನಿಮ್ಮ ವಯಸ್ಸಿನವರು ಬಳಸಲು ಅರ್ಹವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
  • ನಿಮ್ಮ ಖಾಸಗಿ ಮಾಹಿತಿ, ಅಂದರೆ ಹೆಸರು, ವಿಳಾಸ , ಸಂಪರ್ಕ ಸಂಖ್ಯೆ, ಇ-ಮೇಲ್ ವಿವರಗಳನ್ನು ಇಂಟರ್​ನೆಟ್​ನಲ್ಲಿ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಬೇಡಿ.
  • ಇಂಟರ್​ನೆಟ್ ಬಳಕೆಗೆ ಪ್ರತಿದಿನವೂ ಒಂದು ಸಮಯದ ಮಿತಿ ಇರಲಿ ಮತ್ತು ನೀವದನ್ನು ಸದಾ ಕಾಲ ಪಾಲಿಸಿ.
  • ಇಂಟರ್​ನೆಟ್ ಬಳಸುವಾಗ ನಿಮಗೇನಾದರೂ ಕಹಿ ಅನುಭವ ಅಥವಾ ಸಂಶಯಾತ್ಮಕ ವಿಷಯಗಳು ಎದುರಾದರೆ ತಕ್ಷಣವೇ ಪಾಲಕರ ಗಮನಕ್ಕೆ ತನ್ನಿ.
  • ಆಕ್ಷೇಪಾರ್ಹ ಜಾಲತಾಣಗಳನ್ನು ನಿರ್ಬಂಧಿಸಲು ಹಲವಾರು ತಂತ್ರಾಂಶಗಳು ಲಭ್ಯ ಇವೆ. ನಿಮ್ಮ ಪಾಲಕರ ಮಾರ್ಗದರ್ಶನದಲ್ಲಿ ಅವುಗಳನ್ನು ಬಳಸಿ.
  • ಬೇರೆಯವರ ಮೊಬೈಲ್ ಅಥವಾ ಕಂಪ್ಯೂಟರನ್ನು ಬಳಸದೆ ಇರುವುದು ಒಳ್ಳೆಯದು.
  • ಉಚಿತ ಎಂದು ಬಿಂಬಿಸಿಕೊಳ್ಳುವ ಹಲವಾರು ಬಹುಮಾನಗಳು, ಆಫರ್​ಗಳು ನಿಮಗೆ ಆಸೆ ಹುಟ್ಟಿಸಿ ಮರುಳು ಮಾಡಲು ಹೊಂಚು ಹಾಕುತ್ತಿರುತ್ತವೆ. ಅವುಗಳಿಂದ ದೂರ ಇರಿ.
  • ವೈಯಕ್ತಿಕವಾಗಿ ನಿಮಗೆ ಗೊತ್ತಿಲ್ಲದವರ ಜತೆ ಇಂಟರ್​ನೆಟ್ ತಾಣಗಳಲ್ಲಿ ಎಂದಿಗೂ ಗೆಳೆತನ ಮಾಡಬೇಡಿ.

===

Leave a Reply

Your email address will not be published. Required fields are marked *

Back To Top