ಶ್ರೀಲಂಕಾದಲ್ಲಿ ವಾಟ್ಸ್​ಆಪ್ ಬ್ಯಾನ್

ಕೊಲಂಬೋ: ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ವ್ಯವಸ್ಥೆ ಜಾರಿಯಾಗಬೇಕೆಂಬ ಕೂಗು ಭಾರತದಲ್ಲಿ ಬಲಪಡೆದುಕೊಂಡಿರುವಂತೆಯೇ ಉಗ್ರ ದಾಳಿಗೆ ತತ್ತರಿಸಿರುವ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಫೇಸ್​ಬುಕ್​ನಲ್ಲಿ ಯುವಕನೋರ್ವ ಹಾಕಿದ್ದ ಪೋಸ್ಟ್​ನಿಂದಾಗಿ ಭುಗಿಲೆದ್ದ ಕೋಮು ಸಂಘರ್ಷದಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಗೀಡಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ದೇಶದ ಹಲವೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದ್ದು, ಅವರ ಆಸ್ತಿ, ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶ್ರೀಲಂಕಾದಾದ್ಯಂತ 6 ಗಂಟೆಗಳ ಕಾಲ ಕರ್ಫ್ಯೂ ಹೇರಲಾಗಿದೆ.

Leave a Reply

Your email address will not be published. Required fields are marked *