ಸಾಹಿತ್ಯ ಅಧ್ಯಯನದಿಂದ ಸಮಾಜ ಬದಲಾವಣೆ ಸಾಧ್ಯ

blank

ಶೃಂಗೇರಿ: ನಾವು ಬದಲಾದರೆ ಸಮಾಜ ಕೂಡಾ ಬದಲಾಗುವುದು. ಸಮಾಜದ ಬದಲಾವಣೆಗೆ ಪೂರಕವಾದ ಜ್ಞಾನವನ್ನು ಸಾಹಿತ್ಯದ ಅಧ್ಯಯನ ಬೆಳೆಸುತ್ತದೆ ಎಂದು ಪ್ರಾಚಾರ್ಯ ಎಚ್.ಎಂ.ನಾಗರಾಜ್‌ರಾವ್ ಕಲ್ಕಟ್ಟೆ ಹೇಳಿದರು.
ಕಾವಡಿ ಪಿಎಸಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಗ್ರಾಪಂ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯಾರಿಗೂ ಕೆಟ್ಟದನ್ನು ಮಾಡಬಾರದು ಎಂಬ ಜ್ಞಾನ, ಸಂಸ್ಕಾರಗಳು ಸಾಹಿತ್ಯ ಅಧ್ಯಯನದಿಂದ ಪರಿಮೂಡಲು ಸಾಧ್ಯ. ಸತ್ಯ ಹಾಗೂ ಧರ್ಮದಿಂದ ಬದುಕು ಸಾಗಿಸಬೇಕು ಎಂಬುದನ್ನು ನಾವು ಅರಿತುಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥ ಹಾದಿಯಲ್ಲಿ ನಡೆಯಲು ಸಾಧ್ಯ. ಜ್ಞಾನ, ಸಂಸ್ಕೃತಿ, ಉತ್ತಮ ಬದುಕು ಸಮಾಜದ ಕಟ್ಟಕಡೆಯ ಜನರನ್ನು ತಲುಪಬೇಕು ಎಂಬುದು ಜನಪದ ಸಾಹಿತ್ಯದ ಉದ್ದೇಶ ಎಂದರು.
ವೇದಗಳು, ಉಪನಿಷತ್ತುಗಳು, ಪುರಾಣಗಳು ನಮಗೆ ಉತ್ತಮ ಮಾರ್ಗ ತೋರಿಸುತ್ತಾ ಬಂದಿದೆ. ಉನ್ನತ ಗ್ರಂಥಗಳಲ್ಲಿನ ಪಾತ್ರಗಳು ನಮ್ಮಲ್ಲಿ ಸಂಸ್ಕಾರ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿವೆ. ಸರ್ವರ ಹಿತ ಕಾಪಾಡುವ ಸಾಹಿತ್ಯ ನಮ್ಮೊಳಗಿನ ಅಂತರಂಗದ ಸಾಮರ್ಥ್ಯ ಬೆಳೆಸುವಲ್ಲಿ ಸಹಕಾರಿ. ಶ್ರೀಆದಿಶಂಕರರು, ಬಸವಣ್ಣ, ಅಂಬೇಡ್ಕರ್,ಕುವೆಂಪು ಅವರು ನೀಡಿದ ಸಂಸ್ಕೃತಿ ಶಾಶ್ವತವಾಗಿದೆ. ರಾಮಾಯಣ,ಮಹಾಭಾರತದ ಪ್ರತಿ ಪಾತ್ರಗಳು ನಾವು ನಡೆಯುವ ಹಾದಿಯಲ್ಲಿ ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂಬ ಸಂದೇಶ ನೀಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಸಮುದ್ರದ ಆಳದ ಸ್ವಾತಿಮುತ್ತು ಸ್ವಚ್ಛವಾಗಿರುತ್ತದೆ. ಹಾಗೆಯೇ ನಾವು ನುಡಿಯುವ ಮಾತು ಮುತ್ತಿನ ಹಾರದಂತೆ ಇರಬೇಕು. ಸಂಘಟನೆ ಎಂದರೆ ಪದಾರ್ಥಕ್ಕೆ ಹಾಕುವ ಒಗ್ಗರಣೆ. ಕೆಲವರು ಎಣ್ಣೆಗೆ ಹಾಕಿದ ಸಾಸಿವೆಯಂತೆ ಜಟಪಟ ಸಿಡಿದ್ದರೆ ಹಲವರು ಮೆಣಸಿನ ಕಾಯಿಯಂತೆ ಖಾರವಾಗಿ ಮಾತನಾಡುತ್ತಾರೆ. ಇನ್ನೂ ಕೆಲವರು ಅರಶಿನ ಬಣ್ಣ ಬಳೆದುಕೊಂಡರೆ, ಉಪ್ಪು ಎಲ್ಲವನ್ನೂ ಮೌನದಿಂದ ತನ್ನ ಪ್ರಕ್ರಿಯೆ ನಿರ್ವಹಿಸುತ್ತದೆ. ಮಾಸ್ತಿ, ಡಿವಿಜಿ, ದ.ರಾ.ಬೇಂದ್ರೆ, ಜೆ.ಪಿ.ರಾಜರತ್ನಂ ಮುಂತಾದ ಶ್ರೇಷ್ಠಸಾಹಿತಿಗಳ ಮಾತೃಭಾಷೆ ಬೇರೆಯಾದರೂ ನಮ್ಮ ಕನ್ನಡ ಭಾಷೆ ಅವರಿಗೆ ಉನ್ನತ ಸ್ಥಾನಮಾನ ನೀಡಿದೆ ಎಂದರು.

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…