More

    ಹಾವಿನ ವಿಷ ಸಾಗಿಸುತ್ತಿದ್ದ ಮೂವರ ಬಂಧನ: ವಿಷದ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಮಾಲ್ಡಾ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 1.5 ಕೋಟಿ ರೂ. ಬೆಲೆ ಬಾಳುವ ಹಾವಿನ ವಿಷವನ್ನು ಸಾಗಿಸುತ್ತಿದ್ದ ಮೂವರನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಮಾಲ್ಡಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಮಾಲ್ಡಾದ ಇಂಗ್ಲಿಷ್​ ಬಜಾರ್​ ಪಟ್ಟಣದಲ್ಲಿರುವ ಹೋಟೆಲ್​ ಒಂದಕ್ಕೆ ತೆರಳಿದ ಪೊಲೀಸ್​ ತಂಡ, ಗಾಜಿನ ಬಾಟಲ್​ನಲ್ಲಿದ್ದ ಹಾವಿನ ವಿಷವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದೆ. ಈ ಸಂಬಂಧ ಮಾಲ್ಡಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಲೋಕ್​ ರಾಜೋರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆರೋಪಿಗಳನ್ನು ರಫಿಕ್​ ಅಲಿ(40), ಆಶಿಕ್​ ಮಂಡಲ್(20)​ ಮತ್ತು ಮಸೂದ್​ ಶೇಖ್(20)​ ಎಂದು ಗುರುತಿಸಲಾಗಿದೆ. ಇವರು ಕಲಿಛಾಕ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ನಿವಾಸಿಗಳು. ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹಾವಿನ ವಿಷದ ಮೂಲ ಮತ್ತು ಅದನ್ನು ತಲುಪಿಸಲಾಗುತ್ತಿದ್ದ ಗುರಿ ಯಾವುದೆಂದು ಪತ್ತೆಹಚ್ಚಲು ತನಿಖೆ ಕೈಗೊಂಡಿರುವುದಾಗಿ ರಾಜೋರಿಯಾ ಮಾಹಿತಿ ನೀಡಿದ್ದಾರೆ.

    ಆರೋಪಿಗಳನ್ನು ಚೀಫ್​ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ಗೆ ಶನಿವಾರ ಒಪ್ಪಿಸಲಾಗಿದ್ದು, ನಾಲ್ಕು ದಿನಗಳವರೆಗೆ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts