Video | ತಮಿಳುನಾಡಿನ ಎಟಿಎಂನಲ್ಲಿ ಅಡಗಿ ಕುಳಿತಿದ್ದ ನಾಗರ ಹಾವಿನ ರಕ್ಷಣೆ

ಕೊಯಮತ್ತೂರು: ಬಿಸಿಲ ಝಳಕ್ಕೆ ಬೇಸತ್ತೋ ಏನೋ ಹಾವು ಕೂಡ ಕೂಲ್‌ ಆಗಿರಬೇಕೆಂದು ಹೊರಬರುತ್ತಿದ್ದು, ನಾಗರಹಾವೊಂದು ಐಡಿಬಿಐ ಬ್ಯಾಂಕ್‌ ಎಟಿಎಂ ಕೇಂದ್ರದೊಳಗೆ ಅವಿತು ಕುಳಿತಿತ್ತು.

ಕೊಯಂಬತ್ತೂರಿನ ತಣ್ಣೀರುಪಂದಲ್‌ ರಸ್ತೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಾವು ಕುಳಿತಿದ್ದನ್ನು ಗಮನಿಸಿದ ಗ್ರಾಹಕರೊಬ್ಬರು ಸ್ನೇಕ್‌ ಕ್ಯಾಚರ್‌ಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್‌ ಕ್ಯಾಚರ್‌ ಎಟಿಎಂ ಹಿಂಭಾಗದ ವಿದ್ಯುತ್‌ ಕ್ಯಾಬಿನ್‌ನಲ್ಲಿದ್ದ ಹಾವನ್ನು ರಕ್ಷಿಸಿದ್ದಾರೆ. ಈ ಹಾವನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇನ್ನು ನಿನ್ನೆಯಷ್ಟೇ ದೇಶದ ಹಲವೆಡೆ ನಡೆದ ಮೂರನೇ ಹಂತದ ಚುನಾವಣೆಯಲ್ಲಿ ಕೇರಳದಲ್ಲಿ ವಿವಿಪ್ಯಾಟ್‌ ಯಂತ್ರದಲ್ಲಿ ಹಾವು ಪತ್ತೆಯಾಗಿತ್ತು. ಕಣ್ಣೂರಿನ ಮೈಯ್ಲಿ ಕಂಡಕ್ಕೈ ಮತ ಕೇಂದ್ರದ ವಿವಿಪ್ಯಾಟ್‌ನಲ್ಲಿದ್ದ ಹಾವನ್ನು ಹೊರತೆಗೆದ ಬಳಿಕ ಶಾಂತಿಯುತ ಚುನಾವಣೆಗೆ ಅನುವುಮಾಡಿಕೊಡಲಾಗಿತ್ತು. (ಏಜೆನ್ಸೀಸ್)