More

  ಸ್ಮತಿ, ಹರ್ಮಾನ್ ಶತಕದಬ್ಬರ:ಭಾರತ ಮಹಿಳೆಯರಿಗೆ ರೋಚಕ ಗೆಲುವು

  ಬೆಂಗಳೂರು: ಉಪನಾಯಕಿ ಸ್ಮತಿ ಮಂದನಾ (136 ರನ್, 120 ಎಸೆತ, 18 ಬೌಂಡರಿ, 2 ಸಿಕ್ಸರ್ ಹಾಗೂ 13ಕ್ಕೆ 1 ವಿಕೆಟ್) ಸತತ 2ನೇ ಶತಕ ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (103* ರನ್, 9 ಬೌಂಡರಿ, 3 ಸಿಕ್ಸರ್) ಬಿರುಸಿನ ಶತಕದ ಬಲದಿಂದ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಪಡೆ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 2-0ಯಿಂದ ಸರಣಿ ವಶಪಡಿಸಿಕೊಂಡಿದೆ.

  ಚಿನ್ನಸ್ವಾಮಿ ಅಂಗಣದಲ್ಲಿ ಬುಧವಾರ ನಡೆದ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಸ್ಮತಿ-ಹರ್ಮಾನ್‌ಪ್ರೀತ್ ಶತಕದಾಟದಿಂದ 3 ವಿಕೆಟ್‌ಗೆ 325 ರನ್ ಪೇರಿಸಿತು. ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ದ.ಆಫ್ರಿಕಾ, 67 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆಗ ನಾಯಕಿ ಲೌರಾ ವೊಲ್ವಾರ್ಡ್ (135* ರನ್, 135 ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ಮಾರಿಜಾನ್ನೆ ಕಾಪ್ (114 ರನ್, 94 ಎಸೆತ, 11 ಬೌಂಡರಿ, 3 ಸಿಕ್ಸರ್) 4ನೇ ವಿಕೆಟ್‌ಗೆ 170 ಎಸೆತಗಳಲ್ಲಿ 184 ರನ್ ಕಸಿದು ಚೇಸಿಂಗ್‌ಗೆ ಬಲ ತುಂಬಿದರು. ಕಾಪ್ ನಿರ್ಗಮನದ ಬಳಿಕ ವೊಲ್ವಾರ್ಡ್ ಹಾಗೂ ನಡೇನ್ ಡಿ ಕ್ಲರ್ಕ್ (28) ಜೋಡಿ 41 ಎಸೆತಗಳಲ್ಲಿ 69 ರನ್‌ಗಳಿಸಿ ಪ್ರತಿರೋಧ ತೋರಿತು. ಆಫ್ರಿಕಾ ಅಂತಿಮವಾಗಿ 6 ವಿಕೆಟ್‌ಗೆ 321 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪೂಜಾ ವಸಾಕರ್ ಎಸೆದ ಅಂತಿಮ ಓವರ್‌ನಲ್ಲಿ 11 ರನ್ ಬೇಕಿದ್ದಾಗ 2 ವಿಕೆಟ್ ಕಳೆದುಕೊಂಡು 6 ರನ್ ಗಳಿಸಲಷ್ಟೇ ಶಕ್ತವಾಯಿತು.

  ಭಾರತ: 3 ವಿಕೆಟ್‌ಗೆ 325 (ಸ್ಮತಿ 136, ಶೆಾಲಿ 20, ಡಿ. ಹೇಮಲತಾ 24, ಹರ್ಮಾನ್‌ಪ್ರೀತ್ 103*, ರಿಚಾ 25*, ಮ್ಲಾಬಾ 51ಕ್ಕೆ 2). ದಕ್ಷಿಣ ಆಫ್ರಿಕಾ: 6 ವಿಕೆಟ್‌ಗೆ 321 (ಲೌರಾ ವೊಲ್ವಾರ್ಡ್ 135*, ಮಾರಿಜಾನ್ನೆ 114, ಡಿ ಕ್ಲಕ್ 28, ಪೂಜಾ 54ಕ್ಕೆ 2, ದೀಪ್ತಿ 56ಕ್ಕೆ 2).

  See also  ನ್ಯೂಯಾರ್ಕ್​ನ ಆಲ್ಬನಿಯಲ್ಲಿ ವಿಭಿನ್ನವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts