ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಹರಹರ ಗಂಗೆ ಎಂದ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಪ್ರಾರಂಭವಾಗಿರುವ ಅರ್ಧ ಕುಂಭಮೇಳದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಮುಂಜಾನೆ ಪುಣ್ಯಸ್ನಾನ ಮಾಡಿದರು.

ಉತ್ತರಾಯಣ ಪುಣ್ಯಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಶಾಹಿಸ್ನಾನ ಮಾಡಲು ಆಗಮಿಸಿದ್ದ ಲಕ್ಷಾಂತರ ಭಕ್ತರ ನಡುವೆ ಸ್ಮೃತಿ ಇರಾನಿ ಕೂಡ ಪಾಲ್ಗೊಂಡಿದ್ದು, ತಾವು ಪುಣ್ಯಸ್ನಾನ ಮಾಡಿದ ಫೋಟೋವನ್ನು ಟ್ವೀಟ್​ ಮಾಡಿದ್ದಾರೆ. ಅದಕ್ಕೆ ಹರಹರ ಗಂಗೆ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಪ್ರಯಾಗ್​ರಾಜ್​ನಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಲು ಲಕ್ಷೋಪಲಕ್ಷ ಭಕ್ತರು ಆಗಮಿಸಿದ್ದರು. ಶಿವರಾತ್ರಿವರೆಗೂ ಕೋಟ್ಯಾಂತರ ಜನ ಆಗಮಿಸಿ ಪುಣ್ಯಸ್ನಾನ ಪಡೆಯುತ್ತಾರೆ.