ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ. ಹಲವು ಬಾರಿ ತಮ್ಮ ಹಾಗೂ ಕುಟುಂಬದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹಳೇ ಫೋಟೋಗಳನ್ನು ಹಾಕಿ ಚೆಂದನೆಯ ಕ್ಯಾಪ್ಷನ್ ಕೊಡುತ್ತಾರೆ.
ಈಗ ಕೂಡ ಅಂಥದ್ದೇ ಎರಡು ಹಳೇ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಅವು ಸಿಕ್ಕಾಪಟೆ ವೈರಲ್ ಆಗಿವೆ.
ಒಂದು ಫೋಟೋದಲ್ಲಿ ತಮ್ಮ ಪುಟ್ಟ ಮಗ ಜೋಹ್ರ್ ಇರಾನಿಯನ್ನು ಅವರು ಎತ್ತಿಕೊಂಡಿದ್ದರೆ, ಇನ್ನೊಂದು ಫೋಟೋ ಜೋಹ್ರ್ ಬಿಡಿಸಿರುವ ಚಿತ್ರದ್ದು. ಅದರ ಮೇಲೆ ಐ ಲಬ್ ಯು ಎಂದು ಬರೆದುಕೊಂಡಿದೆ. (ಬಹುಶ್ಯಃ ಅದರ ಅರ್ಥ ಐ ಲವ್ ಯು ಎಂದಿರಬೇಕು.)
ಸ್ಮೃತಿ ಇರಾನಿಯವರ ಮಗ ಚಿಕ್ಕದಾಗಿ ಇರುವಾಗಿನ ಹಾಗೂ ಅವನು ಬಿಡಿಸಿದ ಚಿತ್ರದ ಫೋಟೋ ನೆಟ್ಟಿಗರ ಮನ ಗೆದ್ದಿದೆ. ನಟ ಸೋನಮ್ ಕಪೂರ್ ಮತ್ತು ನಿರ್ದೇಶಕ ಏಕ್ತಾ ಕಪೂರ್ ಕೂಡ ಫೋಟೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗನನ್ನು ಟ್ಯಾಗ್ ಮಾಡಿರುವ ಸ್ಮೃತಿ ಇರಾನಿ ಐ ಲಬ್ ಯು ಟೂ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಈಗ ಏಳು ತಾಸುಗಳ ಹಿಂದೆಯೇ ಇನ್ಸ್ಟಾದಲ್ಲಿ ಪೋಸ್ಟ್ ಹಾಕಲಾಗಿದ್ದು ಇಲ್ಲಿಯವರೆಗೆ ಸುಮಾರು 41,396 ಲೈಕ್ಸ್ಗಳು ಬಂದಿವೆ.
ಅನೇಕರು ಲವ್ ಇಮೋಜಿಗಳನ್ನು ಹಾಕಿ ತಮ್ಮ ಮೆಚ್ಚುಗೆ ತಿಳಿಸಿದ್ದಾರೆ.
ಸೋ ಕ್ಯೂಟ್, ವೆರಿ ನೈಸ್ ಫೋಟೋ, ಇದೊಂದು ಬೆಲೆ ಕಟ್ಟಲಾಗದ ಚಿತ್ರ, ಪ್ರೆಟ್ಟಿ, ಅಡೋರೇಬಲ್ ಎಂಬತಹ ಕಾಮೆಂಟ್ಗಳೇ ತುಂಬಿಹೋಗಿವೆ. (ಏಜೆನ್ಸೀಸ್)
https://www.instagram.com/p/B8DTSTXnGjD/