ಅಮೇಠಿಯಲ್ಲಿ ರಾಜಕೀಯ ದ್ವೇಷ ಪ್ರೇರಿತ ದಾಳಿ: ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ

ಅಮೇಠಿ: ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಬೆಂಬಲಿಗರ ಗುಂಪು ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನನ್ನು ಕೊಲೆ ಮಾಡಿ, ಪರಾರಿಯಾಗಿದೆ.

ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್​ ಹತ್ಯೆಯಾದವರು. ಶನಿವಾರ ತಡರಾತ್ರಿ ಗುಂಡಿಟ್ಟು ಇವರನ್ನು ಹತ್ಯೆ ಮಾಡಲಾಗಿದೆ.

ಸ್ಮೃತಿ ಇರಾನಿ ಗೆಲುವಿನ ಸಂಭ್ರಮಾಚರಣೆ ಬಳಿಕ ಸುರೇಂದ್ರ ಸಿಂಗ್​ ಮನೆಗೆ ಮರಳುತ್ತಿದ್ದರು. ಆಗ ಅವರನ್ನು ಅಡ್ಡಗಟ್ಟಿದ ಅಪರಿಚಿತರ ಗುಂಪು, ಏಕಾಏಕಿ ಗುಂಡಿನ ದಾಳಿ ಮಾಡಿತು ಎನ್ನಲಾಗಿದೆ.

ಸುರೇಂದ್ರ ಸಿಂಗ್​ ಅವರು ಸ್ಮೃತಿ ಇರಾನಿ ಪರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ರಾಜಕೀಯ ದ್ವೇಷದಿಂದ ಈತನನ್ನು ಕೊಲೆ ಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಜಾವೊ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . (ಏಜನ್ಸೀಸ್​)

One Reply to “ಅಮೇಠಿಯಲ್ಲಿ ರಾಜಕೀಯ ದ್ವೇಷ ಪ್ರೇರಿತ ದಾಳಿ: ನೂತನ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಹತ್ಯೆ”

  1. ತನಿಖೆ ಕೂಡಲೇ ಆಗಬೇಕು. ಕೊಲೆಗಾರರನ್ನು ಯಾರು ನೆಮಿಸಿದ್ದರು ಎಂದು ಪ್ರಪಂಚಕ್ಕೆ ತಿಳಿಯಲಿ. ಹತಾಷೆ ಜನರನ್ನು ಯಾವ ನೀಚ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಗೊತ್ತಾಗಲಿ.

Leave a Reply

Your email address will not be published. Required fields are marked *