ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಮರಾಠಾ ಸಮಾಜದ ಸ್ವಾಮೀಜಿ ಭೇಟಿ

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವರ ಬೆಳಗಾವಿಯ ನಿವಾಸಕ್ಕೆ ಕರ್ನಾಟಕ ರಾಜ್ಯದ ಮರಾಠಾ ಸಮಾಜದ ಜಗದ್ಗುರು, ಗವೀಪುರಂ ಗೋಸಾಯಿ ಸಂಸ್ಥಾನ ಶ್ರೀ ಭವಾನಿ ದತ್ತ ಪೀಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಯವರು ಗುರುವಾರ ಸಂಜೆ ಸೌಹಾರ್ಧಯುತ ಭೇಟಿ ನೀಡಿದ್ದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ, ಗೌರವಿಸಿದರು. ಮರಾಠಾ ಸಮಾಜದ ಸ್ಥಿತಿಗತಿ, ಮರಾಠಾ ಸಂಸ್ಕೃತಿ, ಮರಾಠ ಸಮುದಾಯಕ್ಕೆ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಹಲವಾರು ವಿಷಯಗಳನ್ನು ಸ್ವಾಮೀಜಿಗಳು ಈ ಸಂದರ್ಭದಲ್ಲಿ ಚರ್ಚಿಸಿದರು.
ಅಲ್ಲದೆ ಮರಾಠ ಧರ್ಮದ ಕುರಿತು ಜಾಗೃತಿ ಮೂಡಿಸಲು, ಸಾಮಾಜಿಕ ಜಾಗೃತಿಗಾಗಿ ತಾವು ಕೈಗೊಂಡಿರುವ ಕೆಲಸಗಳ ಕುರಿತು ಮತ್ತು ಮುಂದೆ ಆಗಬೇಕಿರುವ ಕೆಲಸಗಳ ಕುರಿತು ಸ್ವಾಮೀಜಿಗಳು ಮಾಹಿತಿ ನೀಡಿದರು.
ಬಾಳು ದೇಸೂರಕರ್, ಉಮೇಶ ಪಾಟೀಲ, ಯುವರಾಜ ಕದಂ, ಸಾತೇರಿ ಕೋಕಿತ್ಕರ್, ಪ್ರಹ್ಲಾದ ಚಿರಮುರಕರ್ ಮೊದಲಾದವರು ಇದ್ದರು.

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…