ಕಿರುತೆರೆ ಕಂಗಾಲು, ಮುಂದೇನು ಎಂಬುದೇ ಯಕ್ಷಪ್ರಶ್ನೆ

ಬೆಂಗಳೂರು: ಲಾಕ್​ಡೌನ್ ಮತ್ತೆ ಮುಂದುವರೆದಿದೆ. ಈ ಮುಂದುವರಿಕೆಯಿಂದ ಹೆಚ್ಚು ಕಂಗಾಲಾಗಿರುವುದು ಕಿರುತೆರೆ ಮಂದಿ. ಏಕೆಂದರೆ, ಇದರಿಂದಾಗಿ ನಷ್ಟ ಅನುಭವಿಸುವುದು ಹಿರಿತೆರೆಗಿಂತ ಕಿರುತೆರೆಯವರೇ ಹೆಚ್ಚು. ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಇದಕ್ಕೂ ಮುನ್ನ ಬೇರೆ ಬೇರೆ ಚಾನಲ್​ಗಳಲ್ಲಿ ಹಲವು ಕನ್ನಡ ಧಾರಾವಾಹಿಗಳು ಪ್ರತಿನಿತ್ಯ ಪ್ರಸಾರವಾಗುತ್ತಿದ್ದವು. ಈ ಪೈಕಿ ಕೆಲವು ಧಾರಾವಾಹಿಗಳು ಟಿ.ಆರ್.ಪಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಇದೀಗ ಲಾಕ್​ಡೌನ್​ನಿಂದಾಗಿ, ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಯಾವುದೇ ಧಾರಾವಾಹಿಗಳ ಹೊಸ ಕಂತುಗಳು ಪ್ರಸಾರವಾಗಿಲ್ಲ. ಮುಂದೆ ಲಾಕ್​ಡೌನ್ ಮುಗಿದು, ಧಾರಾವಾಹಿಗಳ ಪ್ರಸಾರಕ್ಕೆ ಮತ್ತೆ … Continue reading ಕಿರುತೆರೆ ಕಂಗಾಲು, ಮುಂದೇನು ಎಂಬುದೇ ಯಕ್ಷಪ್ರಶ್ನೆ