ಯುಪಿಯಲ್ಲೊಂದು ಮಹಾಮೈತ್ರಿಕೂಟ: ಎಸ್​ಪಿ, ಬಿಎಸ್​ಪಿ ಮತ್ತು ಆರ್​ಎಲ್​ಡಿ ಜತೆ ನಿಸಾದ್​, ಜನವಾದಿ ಪಕ್ಷ ಮೈತ್ರಿ

ಲಖನೌ: ಯಾವುದೇ ರಾಜ್ಯವಿರಲಿ. ಅಲ್ಲಿನ ರಾಜಕಾರಣದಲ್ಲಿ ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ರಾಜಕೀಯ ಪಕ್ಷಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಉತ್ತರ ಪ್ರದೇಶದಲ್ಲಿ ಸ್ಥಳೀಯ ಮಟ್ಟದ ಮಹಾಮೈತ್ರಿ ಏರ್ಪಟ್ಟಿದೆ.

ಈಗಾಗಲೆ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ, ಬಹುಜನಸಮಾಜ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ​ ಜತೆ, ಸ್ಥಳೀಯ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ನಿಶಾದ್​ ಪಾರ್ಟಿ ಮತ್ತು ಜನವಾದಿ ಪಾರ್ಟಿ (ಸೋಷಿಯಲಿಸ್ಟ್​) ಮೈತ್ರಿ ಮಾಡಿಕೊಂಡಿವೆ.

ಲಖನೌನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಈ ವಿಷಯ ತಿಳಿಸಿದ್ದಾರೆ. (ಏಜೆನ್ಸೀಸ್​)