ಬೆಂಗಳೂರು: ಚಿಕ್ಕಮಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಸಣ್ಣ ರೈತರುಗಳನ್ನು ಒಕ್ಕಲಿಬ್ಬಿಸುವ ದುಸ್ಸಾಹಸಕ್ಕೆ ಸರ್ಕಾರ ಮುಂದಾದರೆ ರಾಜ್ಯದಲ್ಲಿ ಬೃಹತ್ ಜನಾಂದೋಲನ ಕೈಗೊಳ್ಳಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಲವು ದಶಕಗಳಿಂದ ಇಲ್ಲಿನ ರೈತರುಗಳು ಸರ್ಕಾರ ಹೇಳುತ್ತಿರುವ ಅರಣ್ಯ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇದೀಗ ಏಕಾಏಕಿ ಒಕ್ಕಲೆಬ್ಬಿಸಲು ಸರ್ಕಾರವು ಮುಂದಾಗಿರುವುದು ಸರಿಯಲ್ಲ, ರೈತರ ವಿಚಾರದಲ್ಲಿ ಆಮ್ ಆದ್ಮಿ ಪಕ್ಷವು ಯಾವುದೇ ರೀತಿಯ ಹೋರಾಟಕ್ಕೂ ಸಹ ಸಿದ್ಧವಿರುತ್ತದೆ. ಸರ್ಕಾರ ಈ ರೀತಿಯ ದುಸ್ಸಾಹಸಗಳಿಗೆ ಕೈಹಾಕಬಾರದೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿರುವ ಎಲ್ಲಾ ಅಣೆಕಟ್ಟುಗಳ ಪರಿಸ್ಥಿತಿಯನ್ನು ಅವಲೋಕಿಸಲು ತಜ್ಞರ ಸಮಿತಿಯನ್ನು ಈ ಕೂಡಲೇ ನೇಮಿಸಬೇಕು ಹಾಗೂ ಅವುಗಳನ್ನು ಅತ್ಯಂತ ಸುರಕ್ಷಿತವಾಗಿರಿಸಿಕೊಳ್ಳಲು ಸರ್ಕಾರ ಆದ್ಯತೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಮುಂಬರುವ ಜಿ. ಪಂ -ತಾ. ಪಂ, ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಬಿಬಿಎಂಪಿ ಚುನಾವಣೆಗಳನ್ನು ಕೋರ್ಟ್ ಗಳ ಛೀಮಾರಿ ಹಾಕಿಸಿಕೊಳ್ಳುವ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ಅನಿವಾರ್ಯವಾಗಿ ಚುನಾವಣೆ ಮಾಡಬೇಕಾಗುತ್ತದೆ. ಆಮ್ ಆದ್ಮಿ ಪಕ್ಷ ರಾಜ್ಯದ ಎಲ್ಲ ತಾಲೂಕು ಹಂತಗಳಲ್ಲಿ ಸದೃಢವಾಗಿ ಬೆಳೆಯುತ್ತಿದು,್ದ ಎಲ್ಲ ಚುನಾವಣೆಗಳನ್ನು ಭ್ರಷ್ಟ ಹಾಗೂ ಬಲಾಢ್ಯ ಜೆಸಿಬಿ ಪಕ್ಷಗಳ ವಿರುದ್ಧ ಸೆಣಸಾಡಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯಪಾಲರ ಇತ್ತೀಚಿನ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕ್ರಮ ಗುಲಾಮಗಿರಿಯ ಸಂಕೇತದಂತಿದ್ದು , ಕೇಂದ್ರ ಸರ್ಕಾರವು ಬಿಜೆಪಿಯೀತರ ಎಲ್ಲ ಪಕ್ಷಗಳ ಸರ್ಕಾರಗಳನ್ನು ತನ್ನ ಸರ್ವಾಧಿಕಾರ -ರಾಕ್ಷಸ ಪ್ರವೃತ್ತಿಯಿಂದ ಕಿತ್ತು ಹಾಕಲು ಸ್ವಾಯತ್ತ ಸಂಸ್ಥೆ ಗಳೇಲ್ಲವನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ . ಈಗಾಗಲೇ ಎಚ್. ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಸೇರಿದಂತೆ ಅನೇಕ ರಾಜಕಾರಣಿಗಳ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಅನುಮತಿ ಬಾಕಿ ಇದೆ. ರಾಜ್ಯಪಾಲರು ಕೂಡಲೇ ಇವುಗಳಿಗೂ ಅನುಮತಿಯನ್ನು ನೀಡಬೇಕು. ಹಾಗೂ ಭ್ರಷ್ಟರೆಲ್ಲರೂ ಜೈಲಿನಲ್ಲಿ ಇರಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಲಿಂಗರಾಧ್ಯ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ .ಇ. ಜಗದೀಶ್, ಜಿಲ್ಲಾ ಮುಖಂಡರುಗಳಾದ ಡಾ. ಸುಂದರ ಗೌಡ, ಹೇಮಂತ್ ಕುಮಾರ್ ಸೇರಿ ಜಿಲ್ಲೆಯ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.