ಬೆಂಗಳೂರು: ಅಗ್ರಹಾರ ದಾಸರಹಳ್ಳಿಯಲ್ಲಿ ಸ್ಲಂ ತೆರವು ವೇಳೆ ಗಲಾಟೆ ನಡೆದಿದ್ದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿ ಬೀಡುಬಿಟ್ಟಿರುವ ಖಾಕಿ ಪಡೆ ತೆರವು ಕಾರ್ಯಾಚರಣೆ ವೇಳೆ ಬಟ್ಟೆ, ಸಾಮಗ್ರಿ, ಮಕ್ಕಳನ್ನು ಮನೆಯಿಂದ ಹೊರಕ್ಕೆ ದಬ್ಬಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಚೀರಾಟ, ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ನೀವು ಇಲ್ಲೇ ಇರಮ್ಮ, ಹಕ್ಕುಪತ್ರ ಕೊಡ್ತೀವಿ ಅಂತ ಸಚಿವ ಸೋಮಣ್ಣ ಅವರೇ ಹೇಳಿದ್ರು. ಈಗ ನಮಗೆ ಎಲ್ಲರೂ ಮೋಸ ಮಾಡ್ಬಿಟ್ರು ಎಂದು ಗೋಳಾಡುತ್ತಿದ್ದ ಸ್ಲಂ ನಿವಾಸಿ ಪುಷ್ಪಲತಾ, ‘ಎರಡು ಲಕ್ಷ ಹಣ ಕೊಟ್ರೆ ಹಕ್ಕುಪತ್ರ ಕೊಡ್ತೀನಿ ಅಂದ್ರು. ನಮಗೆ ಅಷ್ಟೊಂದು ಕೊಡೋ ಶಕ್ತಿ ಇಲ್ಲ. ಇಲ್ಲಿ 30 ಮನೆ ಇವೆ. ಅವೆಲ್ಲವನ್ನೂ ತೆರವು ಮಾಡ್ಲಿ. ಆಗ ನಾವೂ ಖಾಲಿ ಮಾಡ್ತೀವಿ. ಆದ್ರೆ 17 ಮನೆಯನ್ನ ಮಾತ್ರ ತೆರವು ಮಾಡ್ತಾರೆ ಅಂದ್ರೆ ಏನರ್ಥ? ನ್ಯಾಯ ಅಂದ್ರೆ ಎಲ್ಲರಿಗೂ ಒಂದೇ ಅಲ್ವಾ? ಎಂದು ಆಕ್ರೋಶ ಹೊರಹಾಕಿದರು.
ಜನವರಿಗೆ ಸ್ಟೇ ಅವಧಿ ಮುಗಿದಿತ್ತು. 30 ಮನೆಯಲ್ಲಿ ಕೇವಲ 17 ಮನೆಗೆ ನಿನ್ನೆ(ಬುಧವಾರ) ನೋಟಿಸ್ ಕೊಟಲಾಗಿದೆ. ಇಂದು ಸ್ಲಂ ಬೋರ್ಡ್ನಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರನ್ನು ಕರೆತಂದು ಮನೆಯ ವಸ್ತುಗಳನ್ನು ಹೊರಹಾಕಿದ್ದಾರೆ. ಹೀಗೆ ಏಕಾಏಕಿ ಬಂದು ಮನೆ ತೆರವು ಮಾಡಿದ್ರೆ ಕರೊನಾ ಸಮಯದಲ್ಲಿ ಎಲ್ಲಿಗೆ ಹೋಗೋದು? ಎಂದು ನಿವಾಸಿಗಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
13 ಮನೆಗಳನ್ನು ಬಿಟ್ಟು 17 ಮನೆಗೆ ಮಾತ್ರ ನೋಟಿಸ್ ಕೊಟ್ಟು ನಮ್ಮನ್ನು ಎತ್ತಂಗಡಿ ಮಾಡುತ್ತಿರುವ ಹಿಂದೆ ಷಡ್ಯಂತರ ಇದೆ. ನ್ಯಾಯ ಅಂದ್ರೆ ಎಲ್ಲರಿಗೂ ಒಂದೇ ಎನ್ನುತ್ತ ಸ್ಥಳೀಯರು ಮನೆ ತೆರವಿಗೆ ವಿರೋಧಿಸುತ್ತಿದ್ದಾರೆ. ಈ ಗಲಾಟೆಯಲ್ಲಿ ಏನೂ ಅರಿಯದ ಪುಟ್ಟಮಕ್ಕಳು ಚೀರಾಡುತ್ತ ಕಣ್ಣೀರು ಹಾಕುತ್ತಿದ್ದರು.
ಡಾ.ರಾಜ್ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು
ತಹಸೀಲ್ದಾರ್ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!
https://www.vijayavani.net/one-year-old-boy-death-in-teerthahalli-talluk/ಚ