ಕಸಾಯಿಖಾನೆ, ಗೋಮಾಂಸ ಮಾರಾಟ ಶೆಡ್ ನೆಲಸಮ

 ಅರಕಲಗೂಡು: ಪಟ್ಟಣ ಹೊರವಲಯದ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ ಹಾಗೂ ಗೋಮಾಂಸ ಮಾರಾಟದ ಶೆಡ್‌ಗಳ ಮೇಲೆ ಸಂತೆಮರೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪೊಲೀಸರು ಜಂಟಿಯಾಗಿ ಮಂಗಳವಾರ ದಾಳಿ ನಡೆಸಿದರು.

ಮೂರು ತಿಂಗಳ ಹಿಂದೆಯೇ ಶೆಡ್‌ಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿತ್ತು. ಆದರೂ ಅಕ್ರಮವಾಗಿ ಕಸಾಯಿಖಾನೆ ಮತ್ತು ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಿಡಿಒ ಶಿವಪ್ಪ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮಾಲೀಕರು ಸೂಕ್ತ ದಾಖಲೆ ಒದಗಿಸದ ಕಾರಣ ಪಿಎಸ್‌ಐ ಮಧು ಮತ್ತು ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಶೆಡ್‌ಗಳನ್ನು ತೆರವುಗೊಳಿಸಿ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದರು.

ಅಕ್ರಮ ಮರುಕಳಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಪಿಡಿಒ ಮತ್ತು ಪೊಲೀಸರು ಅಂಗಡಿ ಮಾಲೀಕ ಹಾಗೂ ಜಮೀನಿನ ವಾರಸುದಾರರಿಗೆ ಎಚ್ಚರಿಕೆ ನೀಡಿದರು.