ಹುಲುನ್‌ಬುಯಿರ್ (ಚೀನಾ): ನಾಯಕ ಹರ್ಮಾನ್‌ಪ್ರೀತ್ ಸಿಂಗ್ (13,19ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ 8ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 2-1 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿದ ಹಾಲಿ ಚಾಂಪಿಯನ್ ಭಾರತ, ಪಾಕ್ ಎದುರು ಅಜೇಯ ಓಟವನ್ನು 17ನೇ ಪಂದ್ಯ ವಿಸ್ತರಿಸಿದೆ.
ಸೆಮಿೈನಲ್ ಸ್ಥಾನ ಖಾತ್ರಿ ಪಡಿಸಿಕೊಂಡಿರುವ ಭಾರತ ಈ ಲಿತಾಂಶದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಪಾಕ್ ಆರಂಭಿಕ ಮುನ್ನಡೆ ಗಳಿಸಿತು. ಪಂದ್ಯದ 8ನೇ ನಿಮಿಷದಲ್ಲಿ ಪಾಕ್ ಪರ ನದೀಮ್ ಅಹ್ಮದ್ ಗೋಲುಗಳಿಸಿ ಮುನ್ನಡೆ ಒದಗಿಸಿದರು. ಬಳಿಕ 13ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಹರ್ಮಾನ್‌ಪ್ರೀತ್ ಪಂದ್ಯದಲ್ಲಿ ಸಮಬಲ ತಂದರು. ನಂತರ 19ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿಸಿದ ಹರ್ಮಾನ್‌ಪ್ರೀತ್ ಭಾರತಕ್ಕೆ ಪಂದ್ಯದಲ್ಲಿ ಮುನ್ನಡೆ ತಂದರು. ಮೊದಲಾರ್ಧದ ಮುಕ್ತಾಯಕ್ಕೆ ಭಾರತ 2-1ರಿಂದ ಮೇಲುಗೈ ಸಾಧಿಸಿತು.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಪಾಕ್, ಭಾರತ ರಕ್ಷಣಾ ಪಡೆ ಮೇಲೆ ಒತ್ತಡ ಹೇರಿತು. ಜತೆಗೆ 4 ಪೆನಾಲ್ಟಿ ಕಾರ್ನರ್ ಪಡೆದ ಪಾಕ್ ಗೋಲುಗಳಿಸುವ ಯತ್ನವನ್ನು ಭಾರತ ಯಶಸ್ವಿಯಾಗಿ ವಿಲಗೊಳಿಸಿತು. ಪಂದ್ಯದ ಅಂತಿಮ 15 ನಿಮಿಷದಲ್ಲಿ ಎರಡೂ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಆಗ ಮೂರು ಪೆನಾಲ್ಟಿ ಅವಕಾಶ ಪಡೆದ ಭಾರತ ಗೋಲು ಗಳಿಸಲು ವಿಲವಾಯಿತು. ಕಳೆದ 4ರಲ್ಲಿ 2ರಲ್ಲಿ ಗೆದ್ದು, 2ರಲ್ಲಿ ಡ್ರಾ ಸಾಧಿಸಿದ್ದ ಪಾಕ್‌ಗೆ ಇದು ಟೂರ್ನಿಯಲ್ಲಿ ಮೊದಲ ಸೋಲಾಗಿದೆ.
ಸೋಮವಾರ ಟೂರ್ನಿಯ ಸೆಮಿೈನಲ್ಸ್ ನಡೆಯಲಿದ್ದು, ಅಗ್ರಸ್ಥಾನಿ ಭಾರತ ತಂಡ 4ನೇ ಸ್ಥಾನಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಸೋಲಿನ ನಡುವೆ ಪಾಕಿಸ್ತಾನ ಅಂಕಪಟ್ಟಿಯ 2ನೇ ತಂಡವಾಗಿ ಉಪಾಂತ್ಯಕ್ಕೇರಿದೆ. ಹೀಗಾಗಿ ಭಾರತ-ಪಾಕಿಸ್ತಾನ ೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ.