ಮಾಂಜರಿ: ಈ ಯುಗದಲ್ಲಿ ಕೌಶಲ ಪೂರ್ಣ ಜ್ಞಾನ ಅವಶ್ಯಕ. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲವು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ ಎಂದು ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್. ಎ.ಮಗದುಮ್ಮ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ಎರಡನೇ ಬ್ಯಾಚ್ ಮತ್ತು 23ನೇ ಬ್ಯಾಚ್ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಕೋಶಾಧಿಕಾರಿ ಎಲ್.ಎನ್.ಮಗದುಮ್ಮ ಮಾತನಾಡಿದರು. ಡಾ.ಅರ್ಚನಾ ಶುಕ್ಲಾ , ಪ್ರಾ.ಎನ್.ಎಸ್.ನಿಡಗುಂಡೆ, ವರ್ಷಾ ಥೋರಾಥ, ಬಿ.ಆರ್.ಸಂಗಪ್ಪಗೋಳ, ಬಾಹುಬಲಿ ಚೌಗುಲೆ, ರಾಜು ತೊರಸೆ, ರಾಘವೇಂದ್ರ ಸಂಕೇಶ್ವರಿ, ಎಚ್.ಚಂದ್ರಶೇಖರ, ದಯಾರುಲ್ ಮಿರ್ಜೇಕರ್, ನಾಗೇಶ ಪಾಟೀಲ್, ಪ್ರೇಮಾ ನಾವಿ, ರಜಿಯಾ ಬಾಗವಾನ, ವಾಜಿ ಬೇಗಂ, ಜಯಶ್ರೀ ಚಿಕ್ಕೂಡ, ಪೂಜಾ ಪತೀವ, ಹೀನಾ ಜಮಾದಾರ, ಜ್ಯೋತಿ ಭಜಂತ್ರಿ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇತರರಿದ್ದರು. ಸಿದ್ದಾರೂಢ ಸ್ವಾಗತಿಸಿದರು. ಪೂಜಾ ಪಾಟೀಲ ನಿರೂಪಿಸಿದರು.