More

    ದೀಪಿಕಾ ಪಡುಕೋಣೆ ನಟನೆಯ ಚಪಾಕ್​ ಚಿತ್ರ ತಂಡದ ಮನವಿಯನ್ನು ತಿರಸ್ಕರಿಸಿದ ಕೌಶಲಾಭಿವೃದ್ಧಿ ಸಚಿವಾಲಯ

    ನವದೆಹಲಿ: ಆ್ಯಸಿಡ್​ ದಾಳಿಗೊಳಗಾದವರಿಗೆ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಚಪಾಕ್​ ಚಿತ್ರ ತಂಡವು ಕೌಶಲಾಭಿವೃದ್ಧಿ ಸಚಿವಾಲಯಕ್ಕೆ ನೀಡಿದ್ದ ಮನವಿಯನ್ನು ಕೈ ಬಿಡಲಾಗಿದೆ.

    ಸಚಿವಾಲಯದ ಪ್ರಕಾರ, ಭಾರತದ ಕೌಶಲ ಅಭಿವೃದ್ಧಿಗೆ ಮಾಧ್ಯಮ ಸಂಸ್ಥೆ ಮತ್ತು ಸಂಘಟನೆಗಳ ಸಲಹೆಗಳನ್ನು ಪಡೆಯಲಾಗುತ್ತದೆ. ಆದರೆ ಚಪಾಕ್​ ಚಿತ್ರ ತಂಡವು ಸಿನಿಮಾದಲ್ಲಿನ ವಿಷಯವನ್ನು ಪ್ರಚಾರ ಮಾಡಲು ಕೋರಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಚಿತ್ರತಂಡವು ಆ್ಯಸಿಡ್​ ದಾಳಿಗೆ ಒಳಗಾದವರು ಮತ್ತು ಕೆಲ ಅಂಗವಿಕಲರನ್ನು ಭೇಟಿ ಮಾಡಿ, ಅವರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿತ್ತು. ಅವರೆಲ್ಲ ಕೌಶಾಲಾಭಿವೃದ್ಧಿ ಸಚಿವಾಲಯದ ಫಲಾನುಭವಿಗಳು. ಚಿತ್ರ ತಂಡದೊಂದಿಗೆ ಈ ಬಗ್ಗೆ ಯಾವ ಕಮಿಟ್​ಮೆಂಟ್​ ಇಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳವಾರ ಸಂಜೆ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ವಿವಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ 15 ನಿಮಷಗಳ ಕಾಲ ಕಳೆದಿದ್ದರು. ಇದಕ್ಕೆ ಪರ ಮತ್ತು ವಿರೋಧದ ಮಾತುಗಳು ಕೇಳಿಬಂದಿದ್ದವು.

    ಚಪಾಕ್​ ಚಲನಚಿತ್ರವು ಆ್ಯಸಿಡ್​ ದಾಳಿಗೊಳಗಾಗಿರುವ ಲಕ್ಷ್ಮೀ ಅಗರ್​ವಾಲ್​ ಅವರ ಜೀವನಾಧರಿತ ಚಿತ್ರ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts