ಮೈಸೂರು: ಮಹಾಜನ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಮತ್ತು ಆಡಳಿತ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗಗಳು ಮತ್ತು ಐಕ್ಯೂಎಸಿ ವತಿಯಿಂದ ‘ಪ್ರಸ್ತುತ ಯುಗದಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸುವ ಕೌಶಲಗಳು’ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಲಾಗಿತ್ತು.
ಆಥರ್ವ ಬಿಸಿನೆಸ್ ಗ್ರೂಪ್‌ನ ಮುಖ್ಯ ವಾಣಿಜ್ಯಾಧಿಕಾರಿ ಮೊಹಮ್ಮದ್ ಬಿಲಾಲ್ ಸಿದ್ಧಿಖಿ ಮಾತನಾಡಿ, ಆರ್ಥಿಕ ಜಗತ್ತಿನಲ್ಲಿ ಯಶಸ್ವಿಯಾಗಲು ಡಿಜಿಟಲ್ ಕೌಶಲ್ಯ, ಸಂವಹನ, ಜನಸಂಪರ್ಕ ಕೌಶಲ್ಯ, ಶಿಸ್ತು ಮತ್ತು ಸಮಯ ನಿರ್ವಹಣೆ ಇವುಗಳು ಇಂದಿನ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಕೌಶಲ್ಯಗಳು ಎಂದರು.
ಪ್ರಾಂಶುಪಾಲ ಡಾ. ಬಿ.ಆರ್. ಜಯಕುಮಾರಿ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಶಿವ್‌ಕುಮಾರ್, ಕಾರ್ಯಕ್ರಮ ಸಂಯೋಜಕರಾದ ಕಿರ್ತೀ ರಾಜ್ ಕಮಲ್, ರಶ್ಮಿ ಹಾಗೂ ಇತರರು ಇದ್ದರು.