ಲೋಕ ಅಖಾಡಕ್ಕೆ ತರೀಕೆರೆ ಸಜ್ಜು, 228 ಮತಗಟ್ಟೆ ಸ್ಥಾಪನೆ

ತರೀಕೆರೆ: ಪಟ್ಟಣದ ಎಸ್​ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಅಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ವಿದ್ಯುನ್ಮಾನ ಮತಯಂತ್ರ, ಚುನಾವಣಾ ಸಾಮಗ್ರಿ ಪಡೆದು ಮತಗಟ್ಟೆಗಳಿಗೆ ತೆರಳಿದರು.

ಸಹಾಯಕ ಚುನಾವಣಾಧಿಕಾರಿ ಬಿ.ಆರ್.ರೂಪಾ ಮಾತನಾಡಿ, ಕ್ಷೇತ್ರದಲ್ಲಿ ಒಟ್ಟು 228 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 58 ಮತಗಟ್ಟೆಗಳು ಅತಿ ಸೂಕ್ಷ್ಮವೆಂದು ಪರಿಗಣಿಸಲಾಗಿದೆ. 24 ಹೆಚ್ಚುವರಿ ಮತಗಟ್ಟೆ ತೆರೆದಿದ್ದು, ಅಗತ್ಯವಾದಲ್ಲಿ ಬಳಸಿಕೊಳ್ಳಲಾಗುವುದು ಎಂದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದ ಮತಗಟ್ಟೆ ಸಂಖ್ಯೆ 93 ಹಾಗೂ ಕಾವಾಡಿಗರ ಬೀದಿಯ ಮತಗಟ್ಟೆ ಸಂಖ್ಯೆ 96ರಲ್ಲಿ 2 ಸಖಿ (ಮಹಿಳಾ) ಮತಗಟ್ಟೆ ಸ್ಥಾಪಿಸಲಾಗಿದೆ. ಆ ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುವರು. ಪಟ್ಟಣದ ಕಾವಾಡಿಗರ ಬೀದಿಯ ಎನ್​ಇಪಿಎಸ್ ಶಾಲೆ ಮತಗಟ್ಟೆ ಸಂಖ್ಯೆ 91ರಲ್ಲಿ ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆ ತೆರೆಯಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *