More

    3 ರಂದು ಮುಕ್ತ ದಿನ ಆಚರಣೆ

    ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ಜೂ.3ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕಾಲೇಜು ಆವರಣದಲ್ಲಿ ಮುಕ್ತ ದಿನ ಆಚರಿಸಲಾಗುತ್ತಿದೆ ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಸಚಿವ ಎಸ್.ಎ.ಧನರಾಜ್ ತಿಳಿಸಿದರು.

    ಈ ಸಂದರ್ಭದಲ್ಲಿ ಎಸ್‌ಜೆಸಿಇ, ಜೆಎಸ್‌ಎಸ್‌ಯುನಲ್ಲಿ ನಡೆಸಲಾಗುತ್ತಿರುವ ವಿವಿಧ ಆಯಾಮಗಳ ಆಧಾರಿತ ನೂತನ ಇಂಜಿನಿಯರಿಂಗ್, ವಿಜ್ಞಾನ ಮತ್ತು ನಿರ್ವಹಣಾ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಗುವುದು. ಹೀಗಾಗಿ ಸಾರ್ವಜನಿಕರು ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಯೋಜನೆಗಳು, ಸಂಶೋಧನಾ ಕ್ರಿಯೆ, ಉದ್ಯಮನಿರತ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗಿನ ಸಹಯೋಗ, ಉದ್ಯಮ ಮಾರ್ಗಗಳು ಹಾಗೂ ಸಾಮಾಜಿಕ ಕೊಡುಗೆಗಳಲ್ಲಿ ವಿಭಾಗಗಳ ಪಾತ್ರವನ್ನು ಅರಿತುಕೊಳ್ಳಬಹುದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸುಸ್ಥಿರತೆ ಶಕ್ತಿ, ಆರೋಗ್ಯ ಮತ್ತು ಪರಿಸರ, ನವೀನ ಮಾದರಿ ತ್ಯಾಜ್ಯದಿಂದ ಸಂಪತ್ತು, ಅಂತರ್ಜಾಲ ಹ್ಯಾಕಿಂಗ್ ಮತ್ತು ಸೈಬರ್ ಕ್ರೈಮ್, ರೊಬೋಟಿಕ್ಸ್ ಮತ್ತು ಇ-ಮೊಬಿಲಿಟಿ, ವ್ಯವಸಾಯದಲ್ಲಿ ಆಧುನಿಕ ಉಪಕರಣಗಳು ಮತ್ತು ತಂತ್ರಗಳು, ಸಾಮಾಜಿಕ ಪ್ರಭಾವ ತಾಂತ್ರಿಕ ಪರಿಹಾರಗಳು ವಿಷಯ ಕುರಿತು ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಪ್ರಭಾರ ಪ್ರಾಚಾರ್ಯ ಡಾ.ಸಿ.ನಟರಾಜು, ಡಾ.ಕೆ.ಅನಿಲ್‌ಕುಮಾರ್, ಬಿ.ಎಸ್.ಮಹಾನಂದ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts