ಮಗನ ವಯಸ್ಸಿನ ಬಾಲಕಿಯನ್ನು ಕರೆದೊಯ್ದು ಕೊಲೆ ಮಾಡಿ ಅತ್ಯಾಚಾರವೆಸಗಿದ ಕಾಮುಕ!

ಡೆಹರಾಡೂನ್‌: ಆರು ವರ್ಷದ ಬಾಲಕಿಯನ್ನು ಅದೇ ಗ್ರಾಮದ 28 ವರ್ಷದ ವ್ಯಕ್ತಿ ಕೊಂದು ಬಳಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಾಖಂಡ್‌ನ ಹರಿದ್ವಾರದ ಗ್ರಾಮವೊಂದರಲ್ಲಿ ನಡೆದಿದೆ.

ಬಾಲಕಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಜಾನ್ಮೀಯನ್‌ ಖಂದುರಿ ಗ್ರಾಮದವನಾಗಿರುವ ಆರೋಪಿಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಸಂತ್ರಸ್ತೆಯು ಮನೆಯ ಮುಂದೆ ಆರೋಪಿಯ 7 ವರ್ಷದ ಮಗನು ಸೇರಿದಂತೆ ಗ್ರಾಮದ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಸುಮಾರು 3 ಗಂಟೆ ವೇಳೆಗೆ ಬಂದ ಆರೋಪಿಯು ಬಾಲಕಿಯನ್ನು ಅಲ್ಲಿಂದ ಫುಸಲಾಯಿಸಿ ಕರೆದೊಯ್ದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಬಾಲಕಿಯನ್ನು ಮೊದಲಿಗೆ ಕೊಂದು ಆಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ 4.30ರ ಸುಮಾರಿಗೆ ಮನೆಗೆ ಹಿಂತಿರುಗಿದ್ದಾನೆ. ಮಧ್ಯಾಹ್ನದಿಂದ ಕಾಣಿಸದಿರುವುದಕ್ಕೆ ಹೆಂಡತಿ ಕೇಳಿದ ಪ್ರಶ್ನೆಗೆ ಅಸಡ್ಡೆಯಿಂದ ಉತ್ತರಿಸಿದ್ದಾನೆ. ಕೊನೆಗೆ ಆರೋಪಿಯ ಮಗನೇ ಪೊಲೀಸರಿಗೆ ಸುಳಿವು ನೀಡಿದ್ದಾನೆ.

ಪೊಲೀಸರು ವಿಚಾರಿಸಿದಾಗ ಆಟವಾಡುತ್ತಿದ್ದಾಗ ತನ್ನ ತಂದೆಯೇ ಬಂದು ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *