ಶಾಪಿಂಗ್‌ ಮಾಲ್‌ ಎದುರು ಗ್ರೇನೇಡ್‌ ದಾಳಿ: ಆರು ಜನರಿಗೆ ಗಾಯ, ಇಬ್ಬರು ಗಂಭೀರ

ಗುವಾಹಟಿ: ಸದಾ ಜನರಿಂದ ತುಂಬಿ ತುಳುಕುವ ಶಾಪಿಂಗ್‌ ಮಾಲ್‌ ಹೊರಗಡೆ ನಡೆದ ಗ್ರೇನೇಡ್‌ ದಾಳಿಯಲ್ಲಿ ಆರು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಅಸ್ಸಾಂನ ಗುವಾಹಟಿಯಲ್ಲಿ ಮೃಗಾಲಯದ ರಸ್ತೆಯ ಪ್ರದೇಶದಲ್ಲಿ ಇಂದು ಸಂಜೆ 8 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ಬಳಿಕ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಸ್ಥಳಕ್ಕೆ ತೆರಳಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ದಾಳಿಯ ಹೊಣೆಯನ್ನು ಪರೇಶ್‌ ಬರುಹ್‌ ನೇತೃತ್ವದ ಉಲ್ಫಾ(ULFA) ಭಯೋತ್ಪಾದಕ ಗುಂಪಿನ ಬಣ ಹೊತ್ತುಕೊಂಡಿದೆ.

ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಸಿಟಿ ಪೊಲೀಸ್‌ ಕಮೀಷನರ್ ದೀಪಕ್‌ ಕುಮಾರ್‌ ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *