ಸೈಟ್​ ಕೊಡಿಸುವುದಾಗಿ ಆನಂದ ಗುರೂಜಿಯವರನ್ನು ವಂಚಿಸಿದ್ದವ ಬಂಧನ

ಬೆಂಗಳೂರು: ಖ್ಯಾತ ಜೋತಿಷಿ ಡಾ. ಆನಂದ್​ ಗುರೂಜಿಯವರಿಗೆ ಸೈಟ್​ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿ ಹರಿಪ್ರಸಾದ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಒಂದು ತಿಂಗಳ ಹಿಂದೆ ಸ್ವಾಮೀಜಿಗೆ ರಾಜಕೀಯ ನಾಯಕರು, ಸಿನಿಮಾ ನಟರ ಜತೆಗಿನ ಫೋಟೋ ತೋರಿಸಿ, ಮಾಜಿ ಪ್ರಧಾನಿ ದೇವೇಗೌಡರು ನನ್ನ ಸಂಬಂಧಿ, ಬಾಲಿವುಡ್​ ಸ್ಟಾರ್​ ಸುನೀಲ್​ ಶೆಟ್ಟಿ ನನ್ನ ಸ್ನೇಹಿತ ಎಂದೆಲ್ಲ ಹೇಳಿದ್ದ. ಸೈಟ್​ ಕೊಡಿಸುತ್ತೇನೆ ಎಂದು ಸ್ವಾಮೀಜಿಯನ್ನು ನಂಬಿಸಿ 56 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದ. ಈತ ಸ್ಯಾಂಡಲ್​ವುಡ್​ನಲ್ಲಿ ಮುಂಬರುವ ರಾಜಂಗೂ ರಾಣಿಗೂ ಚಿತ್ರದ ನಿರ್ಮಾಪಕನೂ ಹೌದು ಎನ್ನಲಾಗಿದೆ.

ಹಣ ಕಳೆದುಕೊಂಡ ಗುರೂಜಿ ಹರಿಪ್ರಸಾದ್​ ವಿರುದ್ಧ ಅಚ್ಚುಕಟ್ಟು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಒಂದು ತಿಂಗಳ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.