ಗೌರಿ ಲಂಕೇಶ್​ ಹತ್ಯೆ: ಮೂವರು ದುಷ್ಕರ್ಮಿಗಳ ಕೈವಾಡದ ಶಂಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಅವರ ಹತ್ಯೆಯಲ್ಲಿ ಮೂವರು ದುಷ್ಕರ್ಮಿಗಳು ಭಾಗಿಯಾಗಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡ ಶಂಕೆ ವ್ಯಕ್ತ ಪಡಿಸಿದೆ.

ದುಷ್ಕರ್ಮಿಗಳು ಪಲ್ಸರ್​ ಬೈಕಿನಲ್ಲಿ ಬಂದಿದ್ದು ಖಚಿತವಾಗಿದೆ. ಇಬ್ಬರು ರೈಡರ್​ಗಳು ಮತ್ತು ಓರ್ವ ಶೂಟರ್​ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಇವರ ಕುರಿತು ಎಸ್​ಐಟಿ ತಂಡ ಮಾಹಿತಿ ಕಲೆ ಹಾಕುತ್ತಿದೆ.

ರೈಡರ್​ಗಳಿಬ್ಬರು ಹಲವು ದಿನಗಳ ಕಾಲ ಗೌರಿ ಲಂಕೇಶ್​ ಅವರ ಮನೆ ಸುತ್ತಮುತ್ತಲೂ ವೀಕ್ಷಣೆ ಮಾಡಿದ್ದಾರೆ. ಕೃತ್ಯ ನಡೆದ ದಿನ ಇಬ್ಬರು ರೈಡರ್​ಗಳು ಶೂಟರ್​ನನ್ನು ಕರೆ ತಂದಿದ್ದರು. ಗೌರಿ ಅವರ ಮೇಲೆ ಶೂಟ್​ ಮಾಡಿದ ನಂತರ ರೈಡರ್​ಗಳು ಸರಾಗವಾಗಿ ಪರಾರಿಯಾಗಿದ್ದಾರೆ. ಟೆಕ್ನಿಕಲ್​, ಫಿಸಿಕಲ್​, ಅನುಭವದ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *