ಕೋವಿಡ್, ಗಣಿ ತನಿಖೆಗೆ ಎಸ್​ಐಟಿ; ವಿಪಕ್ಷ ಬಿಜೆಪಿ ವಿರುದ್ಧ ಸರ್ಕಾರದ ಜೋಡಿ ಅಸ್ತ್ರ

Covid Mining

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ, ಮುಡಾ ಅಕ್ರಮ ಆರೋಪಗಳ ಸುಳಿಯಿಂದ ಹೊರಬರಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರವು ಪ್ರತಿಪಕ್ಷ ಬಿಜೆಪಿಯನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಜೋಡಿ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆಯೆನ್ನಲಾದ ಕೋವಿಡ್ ಅಕ್ರಮದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್​ಐಟಿ)ಕ್ಕೆ ಒಪ್ಪಿಸಲು ಹಾಗೂ 10 ಸಿ ದರ್ಜೆಯ ಗಣಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯ ಎಸ್​ಐಟಿಗೆ ನೀಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ. ಇದರೊಟ್ಟಿಗೆ, ಸಿಬಿಐ ಹಿಂದಿರುಗಿಸಿದ ಆರು ಗಣಿ ಅಕ್ರಮ ಪ್ರಕರಣಗಳ ವಿವರ ಸಂಗ್ರಹಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ.

ಐಜಿ ನೇತೃತ್ವ, ಕಾಲಮಿತಿಯಿಲ್ಲ: ಕೋವಿಡ್ ಭ್ರಷ್ಟಾಚಾರದ ತನಿಖೆಗೆ ಪೊಲೀಸ್ ಮಹಾ ನಿರೀಕ್ಷಕರ (ಐಜಿ) ಶ್ರೇಣಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಎಸ್​ಐಟಿ ರಚನೆಯಾಗಲಿದೆ. ನ್ಯಾ.ಮೈಕೆಲ್ ಡಿ.ಕುನ್ಹಾ ಆಯೋಗದ ಮಧ್ಯಂತರ ವರದಿ ಆಧರಿಸಿ ಎಸ್​ಐಟಿ ತನಿಖೆ ನಡೆಸಲಿದೆ. ತನಿಖಾ ಹಂತದಲ್ಲಿ ಕಂಡುಬಂದ ಲೋಪಗಳ ಅನುಸಾರ ಎಫ್​ಐಆರ್ ದಾಖಲು, ಕ್ರಿಮಿನಲ್ ಮೊಕದ್ದಮೆ, ದೋಷಾರೋಪ ಪಟ್ಟಿ ಸಲ್ಲಿಸುವ ಹೊಣೆಗಾರಿಕೆಯನ್ನು ಎಸ್​ಐಟಿ ನಿರ್ವಹಿಸಲಿದ್ದು, ಕಾಲಮಿತಿಯನ್ನೇನೂ ವಿಧಿಸಿಲ್ಲ.

ಉಪ ಸಮಿತಿ ಪರಿಶೀಲನೆ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾಧ್ಯಮಗೋಷ್ಠಿ ನಡೆಸಿ ಸಂಪುಟ ಸಭೆಯ ಚರ್ಚೆ ಮತ್ತು ನಿರ್ಣಯ ವಿವರಿಸಿದರು. ಕೋವಿಡ್ ನಿಯಂತ್ರಣ, ನಿರ್ವಹಣೆ ವಿಷಯದಲ್ಲಿ ಅಂದಿನ ಸರ್ಕಾರ ಅಮಾನವೀಯ ಭ್ರಷ್ಟಾಚಾರ, ಬೇಜವಾಬ್ದಾರಿ ವರ್ತನೆ, ಜನರಿಗೆ ಮೋಸ ಮಾಡಿದೆ ಎಂದು ದೂರಿದರು.

ವಿಷಯ ಅದುಮಿಡುವುದು, ಕಾಗದಪತ್ರ ಸಿಗದಂತೆ ಮಾಡುವುದು, ವಿಧಾನ ಮಂಡಲದ ಸಮಿತಿ ಸಭೆಗೆ ನಿರ್ಬಂಧ ವಿಧಿಸಿ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು. ವಿಧಾನ ಮಂಡಲದ ಹಿಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ, ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಕೋವಿಡ್ ಕಾಲದಲ್ಲಿ ನಡೆದಿರ ಬಹುದಾದ ಅಕ್ರಮಗಳ ಸತ್ಯಾನ್ವೇಷಣೆಗೆ ನ್ಯಾ.ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ. ಈ ಆಯೋಗವು 50 ಸಾವಿರ ಕಡತಗಳನ್ನು ಪರಿಶೀಲಿಸಿ ಮಧ್ಯಂತರ ವರದಿ ಸಲ್ಲಿಸಿದೆ. ವರದಿ ಅಧ್ಯಯನಕ್ಕೆ ನೇಮಕವಾಗಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ಅನೇಕ ಶಿಫಾರಸು, ಸಲಹೆಗಳನ್ನು ಸಚಿವ ಸಂಪುಟ ಸಭೆ ಮುಂದಿಟ್ಟಿತ್ತು.

ರಾಜ್ಯ, ಮುಂಬೈನಲ್ಲಿ 200-300 ರೂ.ಗಳಿಗೆ ಸಿಗುತ್ತಿದ್ದ ಪಿಪಿಐ ಕಿಟ್​ಗಳನ್ನು 2,117 ರೂ. ಬೆಲೆ ತೆತ್ತು ವಿದೇಶದಿಂದ ತರಿಸಿಕೊಂಡಿರುವುದು, ಎರಡು-ಮೂರು ಪಟ್ಟು ಹೆಚ್ಚಿನ ದರದಲ್ಲಿ ಔಷಧಗಳ ಖರೀದಿ, ಅವಧಿ ಮುಗಿದ, ಕಪು್ಪಪಟ್ಟಿಯಲ್ಲಿರುವ ಸಂಸ್ಥೆಗಳ ಪರಿಕರಗಳ ಖರೀದಿ, ದೇಣಿಗೆ ನೀಡಿದ ಔಷಧ ದರದ ಸೀಲ್ ಹೀಗೆ ಹಲವು ಅಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್ ಸಾವಿನ ವಾಸ್ತವಿಕ ಅಂಶಗಳನ್ನು ಮರೆಮಾಚಿರುವುದು ಸೇರಿ ನಡುಕ ಹುಟ್ಟಿಸುವಂತಹ ಕ್ರಮಗಳನ್ನು ಅಂದಿನ ಸಿಎಂ, ಸಚಿವರು, ಅಧಿಕಾರಿಗಳು ಕೈಗೊಂಡಿದ್ದರ ಸತ್ಯಾನ್ವೇಷಣೆಯು ನ್ಯಾ. ಕುನ್ಹಾ ಆಯೋಗದಿಂದಾಗಿದೆ. ಲಭ್ಯ ಆಧಾರ, ಪುರಾವೆ, ವಿಷಯ, ವಿವರವಾದ ಮಾಹಿತಿ ಆಧರಿಸಿ ಎಸ್​ಐಟಿ ತನಿಖೆ, ಮೊಕದ್ದಮೆ, ಕ್ರಿಮಿನಲ್ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಿದ್ದು, ಆ ಸಂದರ್ಭದಲ್ಲಿಯೇ ಹೆಸರುಗಳು ಗೊತ್ತಾಗಲಿವೆ ಎಂದು ಸಚಿವ ಪಾಟೀಲ್ ಹೇಳಿದರು.

10 ಸಿ ದರ್ಜೆ ಗಣಿ ಪ್ರಕರಣ ಎಸ್​ಐಟಿಗೆ: ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಸಿ ವರ್ಗದ 10 ಗಣಿ ಗುತ್ತಿಗೆದಾರರ ಪ್ರಕರಣಗಳನ್ನು ಲೋಕಾಯುಕ್ತದಲ್ಲಿರುವ ಎಸ್​ಐಟಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದ ಎಚ್.ಕೆ.ಪಾಟೀಲ್, 10 ಕಂಪನಿಗಳ ಹೆಸರು ವಿವರಿಸಿದರು.

ಯಾವ ಕಂಪನಿಗಳು?: ಮೆ. ಮೈಸೂರು ಮ್ಯಾಂಗನೀಸ್ ಕಂಪನಿ, ಮೆ.ಎಂ.ದಶರಥ ರಾಮಿ ರೆಡ್ಡಿ, ಮೆ.ಅಲ್ಲಂ ವೀರಭದ್ರಪ್ಪ, ಮೆ. ಕರ್ನಾಟಕ ಲಿಂಪೊ, ಮೆ. ಅಂಜನಾ ಮಿನರಲ್ಸ್, ಮೆ. ರಾಜೀಯ ಖಾನುಂ, ಮೆ. ಮಿಲನ ಮಿನರಲ್ಸ್ (ಮಹಾಲಕ್ಷಿ ಕಂ), ಮೆ. ಎಂ.ಶ್ರೀನಿವಾಸುಲು, ಮೆ. ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ) ಮತ್ತು ಮೆ.ಜಿ.ರಾಯಶೇಖರ್ ಕಂಪನಿಗಳು ಗಣಿಗಾರಿಕೆಗೆ ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10 ಕ್ಕಿಂತ ಹೆಚ್ಚು ಗಣಿಗಾರಿಕೆ ಹೊಂಡಗಳು ಮತ್ತು ಮಂಜೂರಾದ ಗುತ್ತಿಗೆಗಿಂತ ಹೆಚ್ಚು ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ. ಅಲ್ಲದೆ, ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಲ್ಲಿ ತೊಡಗಿರುವ ಗುತ್ತಿಗೆಗಳು ಮತ್ತು ಇತರೆ ಗುತ್ತಿಗೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ತಿಳಿದು ಬಂದಿದೆ. ಆದ್ದರಿಂದ ಈ ಮೇಲ್ಕಂಡ ಕಂಪನಿಗಳ ಗಣಿ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಂಬಂಧ ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ವಹಿಸಲು ಸಚಿವ ಸಂಪುಟ ತೀರ್ವನಿಸಿದೆ ಎಂದು ಸಚಿವರು ವಿವರಿಸಿದರು.

ನಿರ್ಧಾರ ಮುಂದೂಡಿಕೆ: ವಕ್ಪ್ ಮಂಡಳಿ ನೋಟಿಸ್ ವಿವಾದ, ಮುಸ್ಲಿಮರಿಗೆ ಕಾಮಗಾರಿಯಲ್ಲಿ ಶೇ.4 ಗುತ್ತಿಗೆ ಮೀಸಲು ಪ್ರಯತ್ನಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಎರಡು ವಿಷಯಗಳಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಶಾಲಾ ಮತ್ತು ಉನ್ನತ ಶಿಕ್ಷಣ ರಂಗದಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳನ್ನು ಸಡಿಲಿಸುವ ನಿಯಮಗಳಿಗೆ ತಿದ್ದುಪಡಿ ವಿಷಯಗಳು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದವು. ಈ ವಿಷಯದ ಬಗ್ಗೆ ಸಿಎಂ, ಡಿಸಿಎಂ ಸೇರಿ ಅನೇಕ ಸಚಿವರು ರ್ಚಚಿಸಿದರು. ಇತ್ತೀಚಿನ ಬೆಳವಣಿಗೆ ಬಗ್ಗೆಯೂ ಪ್ರಸ್ತಾಪವಾಯಿತು. ಅನುಮೋದಿಸಿದರೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಒತ್ತಾಸೆ, ತುಷ್ಟೀಕರಣ ಎನ್ನುತ್ತಿರುವ ಪ್ರತಿಪಕ್ಷಕ್ಕೆ ಮತ್ತೊಂದು ಆಹಾರ ಒದಗಿಸಿದಂತಾಗುತ್ತದೆ ಎಂದು ಅರಿತು, ಮುಂದೂಡಲು ತೀರ್ವನಿಸಿತು ಎಂದು ತಿಳಿದುಬಂದಿದೆ.

ಗಣಿ ಅಕ್ರಮ ಬೆನ್ನತ್ತಿದ ಸರ್ಕಾರ: ಗಣಿ ಅಕ್ರಮ ಸಂಬಂಧ 2018ಕ್ಕೂ ಮೊದಲು ಸಿಬಿಐ ಹಿಂದಿರುಗಿಸಿದ ಪ್ರಕರಣಗಳನ್ನು ತನಿಖೆಯ ಮುನ್ನೆಲೆಗೆ ತರಲು ಸರ್ಕಾರ ತಯಾರಿ ನಡೆಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ. ಸಿಬಿಐ ತನಿಖೆಗೆ ವಹಿಸಿದ 9 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಪೈಕಿ ಡಿಒಜಿಪಿ ಅನುಮತಿ ನೀಡಿಲ್ಲ ಇತ್ಯಾದಿ ಕಾರಣಗಳನ್ನು ನೀಡಿ ಆರು ಪ್ರಕರಣಗಳನ್ನು 2018ರಲ್ಲಿಯೇ ಹಿಂದಿರುಗಿಸಿದೆ. ಅಕ್ರಮ ಗಣಿಗಾರಿಕೆ ಕುರಿತು ವಿಸõತವಾಗಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಇವನ್ನು ವಹಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿಬಿಐ ವಾಪಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ. ಸಿಬಿಐ ಹಿಂದಿರುಗಿಸಿದ ಆರು ಪ್ರಕರಣಗಳನ್ನು ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟ ಸಭೆಗೆ ಈ ಪ್ರಕರಣಗಳ ತನಿಖೆ ಕುರಿತ ವಿವರಗಳನ್ನು ಮಂಡಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚಿಸಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ನಿರ್ಣಯಿಸಲಾಗುವುದು ಎಂದು ಸಚಿವರು ಹೇಳಿದರು.

ಹಂತಹಂತದ ಕಾರ್ಯತಂತ್ರ: ಕೋವಿಡ್ ಅಕ್ರಮ ಕುರಿತ ನ್ಯಾ.ಕುನ್ಹಾ ವರದಿ ಕಾಂಗ್ರೆಸ್​ಗೆ ಅಸ್ತ್ರವಾಗಿದೆ. ಸಲ್ಲಿಕೆಯಾದ ಮೊದಲ ವರದಿ ಮುಂದಿಟ್ಟುಕೊಂಡು ಸರ್ಕಾರ ಮೊದಲ ಹಂತದಲ್ಲಿ ತನಿಖೆಗೆ ಆದೇಶಿಸಿದೆ. ಹೀಗೆ ಹಂತ ಹಂತವಾಗಿ ವರದಿ ಕೈಸೇರಿದ ಬಳಿಕ ಬಿಡಿ ಬಿಡಿಯಾಗಿ ತನಿಖೆಗೆ ಆದೇಶಿಸಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸುವುದು ಕಾಂಗ್ರೆಸ್​ನ ಕಾರ್ಯತಂತ್ರವಾಗಿದೆ. ಆ ಮೂಲಕ ಕೇಸರಿಪಡೆಯ ಜಂಘಾಬಲವನ್ನು ಸುದೀರ್ಘ ಅವಧಿಯಲ್ಲಿ ಕುಗ್ಗಿಸುವ ಯೋಜನೆ ರೂಪಿಸಲಾಗಿದೆ. ಅಂತಿಮ ವರದಿ ಸಲ್ಲಿಕೆಗೆ ಮೊದಲೇ ಕೋವಿಡ್ ಅಕ್ರಮದ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿದರೆ ವಿವಾದವಾಗಿ ಬಿಜೆಪಿಗೆ ಅಸ್ತ್ರವಾಗಬಹುದೆಂಬುದು ಕೈ ನಾಯಕರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ಸಭೆ ಮುಖ್ಯಾಂಶ

  • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರದ ಪಾಲು ಹೆಚ್ಚಿಸುವಂತೆ ಪ್ರಧಾನಿಗೆ ಸಿಎಂ ಪತ್ರ
  • ಏಳು ವೈದ್ಯಕೀಯ ಕಾಲೇಜುಗಳ ಆವರಣದಲ್ಲಿ 50 ಹಾಸಿಗೆಗಳ ತೀವ್ರತರ ಚಿಕಿತ್ಸಾ ಘಟಕ ಸ್ಥಾಪನೆ
  • ಕೇಂದ್ರ ಸಹಭಾಗಿತ್ವದಡಿ ಸಾವಯವ ಮತ್ತು ಸಿರಿಧಾನ್ಯ ಹಬ್ ನಿರ್ಮಾಣ

ಸರಣಿ ಜಯಿಸುವುದು ಕಠಿಣ ಸವಾಲುಗಳಲ್ಲಿ ಒಂದಾಗಿದೆ…Border-Gavaskar ಟ್ರೋಫಿಗೂ ಮುಂಚಿತಚಾಗಿ Team India ಕೋಚ್​ ಹೇಳಿಕೆ ವೈರಲ್​

Toxic ಅಖಾಡಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ Hollywood Star; ವಿಡಿಯೋ ವೈರಲ್​

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…