| ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ವಿಚಾರ ಸಂಕಿರಣ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಸುವ ಅಗತ್ಯವಿದೆ ಎಂದು ಅಂತಾರಾಷ್ಟಿçÃಯ ಖ್ಯಾತಿಯ ಅಧ್ಯಾತ್ಮ ಚಿಂತಕಿ-ಪ್ರೇರಕಿ ಸಿಸ್ಟರ್ ಬಿಕೆ ಶಿವಾನಿ ಅಭಿಪ್ರಾಯಪಟ್ಟರು.
ಸೇಡಂ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಸರೋವರ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಜೀವನ ಸಮತೋಲನ ನಿರ್ವಹಣೆ ವಿಷಯ ಕುರಿತು ಮಾತನಾಡಿದ ಅವರು, ಶಾಲೆಗಳು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಬಗ್ಗೆ ತಿಳಿವಳಿಕೆ ನೀಡಬೇಕು. ಆದರೆ ಸದ್ಯ ಮಕ್ಕಳು ರ‍್ಯಾಂಕ್ ಬರುವ ನಿಟ್ಟಿನಲ್ಲಿ ಶಿಕ್ಷಣ ನೀಡುತ್ತ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಥಮ ರ‍್ಯಾಂಕ್ ಬಂದರೆ ಪ್ರಶಸ್ತಿ, ಪುರಸ್ಕಾರ ನೀಡುವ ಶಾಲೆಗಳು, ರ‍್ಯಾಂಕ್‌ವೊAದೇ ಸಫಲತೆ ಎಂದು ಭಾವಿಸಿವೆ. ಸಂಸ್ಕಾರ ಮತ್ತು ವ್ಯಕ್ತಿತ್ವ ಹೊಂದಿರುವ ಮಕ್ಕಳಿಗೆ ಯಾವುದೇ ಪ್ರಶಸ್ತಿ, ಪುರಸ್ಕಾರ ನೀಡದಿರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕೋಪ, ಒತ್ತಡ, ಅಸಹಾಯಕತೆ ಕಂಡು ಬರುತ್ತಿದೆ. ಪಾಲಕರು ಈ ನ್ಯೂನತೆ ಕಂಡುಹಿಡಿದು ಅವರಲ್ಲಿರುವ ವಿಶೇಷತೆ ತಿಳಿಸಿ ಆತ್ಮ ಸ್ಥೈರ್ಯ ತುಂಬುವ ಮೂಲಕ ಸರಿಯಾದ ಮಾರ್ಗ ತೋರಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ನಂತರದಲ್ಲಿ ಎಲ್ಲರ ಜೀವನ ಒತ್ತಡಮಯವಾಗಿದೆ. ನಮ್ಮ ವಿಚಾರ, ಚಿಂತನೆ ಅಥವಾ ಸಂಕಲ್ಪ ಅದೇ ರೀತಿ ನಮ್ಮ ಮನಸ್ಥಿತಿ ಆಗಿರುತ್ತದೆ. ಹೀಗಾಗಿ ನಾವು ಸಕಾರಾತ್ಮಕ ಚಿಂತನೆಯೊAದಿಗೆ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು. ನಮ್ಮ ಕರ್ಮ ಇನ್ನೊಬ್ಬರಿಗೆ ಸಹಾಯವಾಗಬೇಕೇ ಹೊರತು ತೊಂದರೆ ನೀಡಕೂಡದು. ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಕರ್ಮ ಮಾಡುತ್ತಿರಬೇಕು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಎಂ.ವೈ. ಪಾಟೀಲ್, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್, ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ ಸಿದ್ದಾರಡ್ಡಿ, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ, ಕಲಬುರಗಿ ಹೈಕೋರ್ಟ್ ನ್ಯಾಯಾಧೀಶ ನಟರಾಜ್, ಮೈಸೂರು ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲ್ಸೆ, ಪ್ರೇಮ ಅಣ್ಣ, ಬಿಕೆ ಮೀರಾ, ಬಿಕೆ ಉಷಾ, ಬಿಕೆ ರಾಗಿಣಿ, ಶರಣಬಸಪ್ಪ ಹೀರಾ ಇತರರಿದ್ದರು. ಬಿಕೆ ವಿಜಯಾ ಸ್ವಾಗತಿಸಿದರು. ಶಿವಲೀಲಾ ನಿರೂಪಣೆ ಮಾಡಿದರು. ವೈಷ್ಣವಿ ನೃತ್ಯ ಗಮನ ಸೆಳೆಯಿತು.