
ಸಿರವಾರ: ಪೆಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಾವಿಗೀಡಾದ ದೇಶದ 27 ಜನರಿಗೆ ಪಟ್ಟಣದ ಬಯಲು ಆಂಜಿನೇಯ್ಯ ದೇವಸ್ಥಾನದ ಆವರಣದಲ್ಲಿ ಗುರುವಾರ ರಾತ್ರಿ ಯುವಾ ಬ್ರಿಗೇಡ್ ಹಾಗೂ ದೇಶಾಭಿಮಾನಿ ಸಂಘಟನೆಗಳ ನೇತೃತ್ವದಲ್ಲಿ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಮುಖ ಡಾ.ನಾಗೇಶ್ ಎಚ್. ಶ್ಯಾವಿ ಮಾತನಾಡಿ, ಉಗ್ರರು ಅಮಾಯಕರನ್ನು ಬಲಿ ಪಡೆದಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾದ ಅನಿವಾರ್ಯತೆ ಇದೆ. ಇಂಥ ಹೇಯ ಕೃತ್ಯಗಳನ್ನು ಮರುಕಳಿಸದಂತೆ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಸೂಗಪ್ಪ ಹೂಗಾರ್, ಸಂದೀಪ್ ಪಾಟೀಲ್, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಪತ್ತಾರ್ ನಾಗಪ್ಪ ಸಾಹುಕಾರ್, ಚಿತ್ತಾಪೂರ್ ವೀರಭದ್ರಪ್ಪ ಸಾಹುಕಾರ್, ರಾಮುಶೆಟ್ಟಿ, ಮಂಜುನಾಥ ಗೌಡ, ಸಂತೋಷ ತಾತ, ಅಮರೇಶ, ರಾಘವೇಂದ್ರ, ರಾಚಪ್ಪ ಬಡಿಗೇರ್, ಪವನ್ ಆಚಾರ್ಯ, ಸುರೇಶ ಹೀರಾ, ಮಹಾಂತೇಶ ಸ್ವಾಮಿ ನಾಗಡದಿನ್ನಿಮಠ, ಪಿ.ಕೃಷ್ಣಾ ಇತರರಿದ್ದರು.