ಶಾಂತಿ ಕದಡಿದವರನ್ನು ಬಿಡದಿರಿ

ಸಿರವಾರದಲ್ಲಿ ನೂರಾನಿ ಮಸೀದಿ ಕಮೀಟಿ ಹಾಗೂ ಮುಸ್ಲಿಂ ಸಮುದಾಯದಿಂದ ಮೋಂಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು. ಕಮೀಟಿ ಅಧ್ಯಕ್ಷ ಮಹ್ಮದ್‌ವಲಿ ಗುತ್ತೇದಾರ, ಸಂದೀಪನಾ ಶಾಲೆಯ ಅಧ್ಯಕ್ಷ ಫಕೃದ್ದೀನ್ ಹಾಗೂ ಸಮುದಾಯದ ಪ್ರಮುಖರು ಇದ್ದರು.

ಸಿರವಾರ: ಪಟ್ಟಣದ ನೂರಾನಿ ಮಸೀದಿ ಕಮೀಟಿ ಹಾಗೂ ಮುಸ್ಲಿಂ ಸಮುದಾಯದಿಂದ ಕಾಶ್ಮೀರದ ಪಹಲ್ಗಾಮ್ ಘಟನೆ ಖಂಡಿಸಿ ಮತ್ತು ಉಗ್ರರ ದಾಳಿಗೆ ಹತರಾದವರ ಆತ್ಮಕ್ಕೆ ಶಾಂತಿ ಕೋರಿ ಶುಕ್ರವಾರ ಸಂಜೆ ಮೋಂಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು.

ನೂರಾನಿ ಮಸೀದಿ ಕಮೀಟಿ ಅಧ್ಯಕ್ಷ ಮಹ್ಮದ್‌ವಲಿ ಗುತ್ತೇದಾರ ಮಾತನಾಡಿ, ಕಾಶ್ಮೀರ ಈ ದೇಶದ ಕಿರೀಟ ಹಾಗೂ ಪ್ರವಾಸೋದ್ಯಮದ ಪ್ರಮುಖ ಸ್ಥಳ. ಧರ್ಮದ ಹೆಸರಿನಲ್ಲಿ ಶಾಂತಿ ಕದಡಿದವರು ಯಾರೇ ಇರಲಿ ಅವರನ್ನು ಬಿಡಬಾರದು. ಇಡೀ ವಿಶ್ವಕ್ಕೆ ಶಾಂತಿ ಸಂದೇಶ ನೀಡುತ್ತಿರುವ ಭಾರತ ಸಮಯ ಬಂದಾಗ ತನ್ನ ಸಾಮರ್ಥ್ಯವನ್ನು ತೋರಿಸಿದೆ, ಮುಂದೆಯೂ ತೋರಿಸಲಿದೆ ಎಂದರು. ಪ್ರಮುಖರಾದ ಫಕೃದ್ದೀನ್ ಮರಡಿ, ಸದ್ದಾಂ ಜಂಗಿ, ರಿಯಾಜ್, ಇಬ್ರಾಹಿಂ ಎಲ್‌ಐಸಿ, ಅಜ್ಮೀರ್, ರಾಜಾ ಬಗರಿ, ಝಹೀರ್, ನದೀಮ್, ರಾಜಾ ಆಟೋ, ಮಹಮ್ಮದ್ ರಫಿ, ಮುಸ್ತಫಾ ಗಲಗ್ ಇತರರಿದ್ದರು.

Share This Article

ಶ್ರಾವಣ ಮಾಸದಲ್ಲಿ ಕ್ಷೌರ ಮಾಡಿಸಬಾರದು.. ಇದರ ಹಿಂದಿದೆ ವೈಜ್ಞಾನಿಕ ಕಾರಣ..! Shravan

Shravan: ಭಾರತೀಯ ಸಂಸ್ಕೃತಿಯಲ್ಲಿ, ಸಾವನ್ ಮಾಸವನ್ನು ಶಿವನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿ, ಜನರು…

ಮಳೆಗಾದಲ್ಲಿ ಮೊಸರು ತಿನ್ನಬೇಕೇ? ಬೇಡವೇ? ಇಲ್ಲಿದೆ ಆರೋಗ್ಯಕರ ಮಾಹಿತಿ… curd

ಬೆಂಗಳೂರು: ( curd )  ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಮಳೆಗಾಲದಲ್ಲಿ…