
ಸಿರವಾರ: ತಾಲೂಕಿನ ಮಾಚನೂರು ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣ ಯಾರೇ ಮೃತಪಟ್ಟರು ಹಳ್ಳ ದಾಟಿ ಗೈರಾಣು ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡುವಂತಹ ಪರಿಸ್ಥಿತಿ ಇದೆ.
ಈಗಾಗಲೇ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರ ಮಧ್ಯೆ ರುದ್ರಭೂಮಿ ಇಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಮೃತದೇಹ ಹೊತ್ತು ಹಳ್ಳ ದಾಟುವ ಪರಿಸ್ಥಿತಿ ಮಾಚನೂರು ಗ್ರಾಮಸ್ಥರದ್ದಾಗಿದೆ. ಕೂಡಲೇ ತಾಲೂಕು ಆಡಳಿತ ರುದ್ರಭೂಮಿ ಮಂಜೂರು ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಗ್ರಾಮದಲ್ಲಿ ರುದ್ರಭೂಮಿ ಇಲ್ಲದೆ ಹಳ್ಳದ ಪಕ್ಕದಲ್ಲಿರುವ ಗೈರಾಣು ಭೂಮಿಯಲ್ಲೇ ಶವ ಸಂಸ್ಕಾರ ಮಾಡಲಾಗುತ್ತಿದೆ. ಈಗ ಮಳೆಗಾಲ, ಹಳ್ಳಕ್ಕೆ ಹೆಚ್ಚಿನ ನೀರು ಬಂದರೆ ಹಳ್ಳ ದಾಟುವುದು ಕಷ್ಟ. ಆದ್ದರಿಂದ ಕೂಡಲೇ ಗ್ರಾಮಕ್ಕೆ ರುದ್ರಭೂಮಿ ಮಂಜೂರು ಮಾಡಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ.
> ವಿಜಯ ಕುಮಾರ, ಮಾಚನೂರು ನಿವಾಸಿ